•  
  •  
  •  
  •  
Index   ವಚನ - 26    Search  
 
ಸಂಸಾರಹೇಯಸ್ಥಲ - ರಕ್ಷಕ
ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಏರಿ ನೀರುಂಬೊಡೆ, ಬೇಲಿ ಕೆಯ್ಮ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೊಡೆ, ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ?
Transliteration Ole hattiyuridoḍe nilabahudallade, dhare hattiyuridoḍe nilabāradu. Ēri nīruṇboḍe, bēli keyye mēvoḍe, nāri tanna maneyalli kaḷuvoḍe, tāya molevālu nan̄jāgi koluvoḍe, innārige dūruve, kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name - Vachana Dhare Vol -3 Singer : B.S.Mallikarjuna, Nanditha, Meghana Music : M.S. Maruthi Label : Ashwini audio
English Translation One can stand near a blazing hearth, But if the whole earth is aflame, where shall one stand? If the embankment drinks up the lake’s water, If the fence devours the crop, If the housewife steals from her own home, If the mother’s milk turns to poison and kills her own child, If You, my Lord, turn away from me, Where shall I seek refuse, O Lord Kudala Sangama?
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 One still can stand where burnt the hearth : But could you stand where burnt the earth ? When the bank, thirsty, drinks the stream, And the fence turns around to graze, The wife at home to thievish ways, And mother's milk to poisonous cream- And all seems part of a crazy dream- To whom should I complain, O Lord ? Translated by: L M A Menezes, S M Angadi
Russian Translation Ты можешь стоять рядом с горящим очагом, Но где ты встанешь, если вся земля объята огнем? Если плотина впитает воду, А стены поглотят землю; Если женщина в доме своем ворует, А материнское молоко обратится в яд; Кому еще мне жаловаться, О, Бог мой, Кудаласангама? Translated by: Prof Harishankar, Mysore and Mrs. Galina Kopeliovich, Russia
Hindi Translation चूल्हा जल उठे तो सह सकते हैं धरती जल उठे तो क्या सह सकते हैं? कूल जल पी ले, काँटों का घेरा उपज खा ले, नारी निज गृह में चोरी कर ले, माता का दूध विष बन मार डाले, तो मैं किसे दोष दूँ, कूडलसंगमदेव ॥ Translated by: Banakara K Gowdappa
Telugu Translation పొయ్యి రగిలి మండ నిలువదగుగాని భూమి రగిలి మండ నిలువరాదు; ఏరె నీరు మ్రింగ; చేనె కంచె మేయ నారి తనయింట తానే దొంగలింప తల్లి చనుబాలే నంజొచు చంపిన దూరు టెవ్వరినో యిక కూడల సంగమదేవా! Translated by: Dr. Badala Ramaiah
Tamil Translation உலைபற்றிஎரியின் தாளலாமன்றி உலகம் பற்றிஎரியின் தாளவியலுமோ? ஏரிநீரையருந்தின், வேலி பயிரினைமேயின் கிழத்தி தன்னில்லிலே களவாடின், தாய்முலைப்பால் நஞ்சாகிக் கொன்றால் இன்னுமாரிடம் முறையிடுவேன், கூடலசங்கமதேவனே. Translated by: Smt. Kalyani Venkataraman, Chennai
Marathi Translation पेटलेली चूल, येई विझविता ? धरती पेट घेता, विझे कैसी? बांध पाणी पोता, कुंपण शेत खाता तक्रार ती करिता, येइल का? आपुल्याच घरी, नारी करी चोरी सांगू कैशापरी, गतो ऐसी झाले विष तर, मातेचे ते दूध कोणा मागू दाद, घात होता? कूडलसंगमदेवा! तूच जन्म दाता भव दुःखी टाकिता, कुणा सांगू ! अर्थ - पेटविलेल्या चुलीला विझविता येते. पण पृथ्वी पेट घेतल्यांस विझविता येणे कुणाला शक्य आहे? उदा. चंद्र. तारे, पृथ्वी, हवा, पाणी वगैरे निसर्ग नियमानुसार चालतात म्हणून तर मनुष्यास हितकारक आहेत. या सर्वाचा कर्ता करविता परमेश्वर असल्याकारणाने त्याने निर्माण केलेल्या निसर्गाविरुद्ध व प्रवाहाविरुद्ध वागणार नाही, फार तर धगधगत्या चुलीला विझवू शकू पण धरतीनेच पेट घेतल्याम कोणालाच विज्ञविता येणे शक्य नाही. त्याचप्रमाणे बांधच पाणी पिऊ लागल्यास, कुंपणच शेत खाऊ लागल्यास, नारी आपल्याच घरी चोरी करू लागल्याम, आईचे दूधच विष बनल्यास मूल वाचेल काय? त्याचप्रमाणे तूच माझा जन्मदाता असून जर तूच मला दुःखात लोटल्यास! हे कूडलसंगमदेवा! मी त्याची तक्रार कोणापुढे मांडावी ? Translated by Rajendra Jirobe, Published by V B Patil, Hirabaug, Chembur, Mumbai, 1983 पेटती चूल विझविता येईल धरती पेटू लागली तर विझविता येईल का? पाट पाणी पिवू लागला तर, कुंपण शेत खाऊ लागले तर, नारी आपल्याच घरात चोरी करु लागली तर, आईचे दूधच विष बनून जीव घेऊ लागले तर, कोणाकडे तक्रार करु? कूडलसंगमदेवा Translated by Shalini Sreeshaila Doddamani
Urdu Translation جَلتےجَلتےجوبھڑکنے لگے چولھا اپنا گھرسےگھبرا کے نکل جاؤں یہ ممکن ہی نہیں ہاںمگرجب یہ زمیںخود ہی سُلگ اٹھےگی میں کہاں بھاگ کےجاؤں گا کہاں ٹہروں گا کوڈلا سنگما دیوا توبتادے مجھ کو میں کہاں جاؤں کہوں حرفِ شکایت کس سے جبکہ خود بند ہی برسا ہوا پانی پی لے جبکہ خود باڑہی فصلوں کو بنالے لقمہ جبکہ خود گھرکی ہراک چیزچُرالےعورت اور جب زہرمیں تبدیل ہوشیرِمادر Translated by: Hameed Almas
ಶಬ್ದಾರ್ಥಗಳು ಕೆಯ್ಯ = ಹೊಲ; ಧರೆ = ಭೂಮಿ; ನಂಜು = ವಿಷ;
ಕನ್ನಡ ವ್ಯಾಖ್ಯಾನ ದೇವರಿಲ್ಲದೆ ಬೇರೆ ರಕ್ಷಕರಿಲ್ಲ ಮನೆಯಲ್ಲಿ ಒಲೆಯ ಬೆಂಕಿಯನ್ನು ಸಹಿಸಿಕೊಂಡಿರಬಹುದು; ಸಹಿಸಲಸಾಧ್ಯವಾದರೆ ದೂರ ಸರಿದು ನಿಂತುಕೊಳ್ಳಬಹುದು. ಆದರೆ ಇಡೀ ಭೂಮಿಯೇ ಧಗಧಗಿಸಿ ಉರಿದರೆ ಸಹಿಸಿಕೊಳ್ಳುವ ಮಾತಿರಲಿ, ದೂರ ಸರಿದು ಕೊಳ್ಳಲು ಸ್ಥಳವೆಲ್ಲಿ? ಏರಿಯನ್ನು ಹಾಕುವುದು ನೀರನ್ನು ಒಂದು ಕಡೆ ಶೇಖರಿಸಿ ಬಯಸಿದಾಗ ಬಳಸಿಕೊಳ್ಳುವುದಕ್ಕೆ. ಆದರೆ ನೀರನ್ನು ಸಂರಕ್ಷಿಸಬೇಕಾದ ಏರಿಯೇ ನೀರನ್ನು ಕುಡಿದು ಹಾಕಿದರೆ ಗತಿಯೇನು? ಅದೇ ರೀತಿ ಹೊಲದ ಸುತ್ತ ಬೇಲಿಯನ್ನು ಹಾಕುವುದು ಪ್ರಾಣಿಗಳು ಬೆಳೆಯನ್ನು ಹಾಳುಮಾಡಿಯಾವು ಎಂಬ ಭಯದಿಂದ. ಆದರೆ ಸಂರಕ್ಷಣೆಗಾಗಿ ನಿರ್ಮಿಸಿದ ಬೇಲಿಯೇ ಬೆಳೆಯನ್ನು ತಿಂದು ಹಾಕಿದರೆ ಗತಿಯೇನು? ಮನೆಯ ಆಗು ಹೋಗುಗಳನ್ನು, ಸುಖ-ದುಃಖಗಳನ್ನು ನೋಡಿಕೊಳ್ಳುವುದು ಮನೆಯಲ್ಲಿರುವ ಸ್ತ್ರೀಯಳ ಕರ್ತವ್ಯ. ಅಂಥವಳೇ ಮನೆಯಲ್ಲಿರುವ ವಸ್ತುಗಳನ್ನು ಅಪಹರಿಸಲು (ಕದಿಯಲು) ಆರಂಭಿಸಿದರೆ ಗತಿಯೆಂತು? ತಾಯಿಯ ಮೊಲೆಯ ಹಾಲು ಮಗುವಿನ ಶರೀರವನ್ನು ಪೋಷಿಸುವ ಶಕ್ತಿ ಹೊಂದಿದೆ. ಆದರೆ ಶರೀರ ಪೋಷಕವಾಗಬೇಕಾದ ಹಾಲೇ ವಿಷವಾಗಿ ಶರೀರ ನಾಶವಾದರೆ ಯಾರನ್ನು ದೂರುವುದು? ಯಾರಾದರೂ ನಮಗೆ ಅಪಕಾರವೆಸಗಿದಾಗ ಅವರ ಬಗ್ಗೆ ದೂರನ್ನು ತೆಗೆದುಕೊಂಡು ಹೋಗುವುದು ನಮ್ಮ ಹಿತವನ್ನು, ಕಲ್ಯಾಣವನ್ನು ಬಯಸುವವರ ಹತ್ತಿರವೇ ತಾನೇ? ಅಂಥವರೇ ನಮ್ಮ ಹಿತಕ್ಕೆ ಧಕ್ಕೆಯನ್ನುಂಟುಮಾಡುವವರಾದರೆ ದೂರನ್ನು ತೆಗೆದುಕೊಂಡು ಹೋಗುವುದಾದರೂ ಇನ್ನಾರ ಹತ್ತಿರ? ದೇವರು ನಮ್ಮ ಸಂರಕ್ಷಕ, ನಮ್ಮ ಹಿತವನ್ನು ಬಯಸುವವನು. ಅವನೇ ಮೇಲೆ ತಿಳಿಸಿದಂತೆ ಭಕ್ಷಕ, ಅಹಿತಕಾರಿಯಾದರೆ ಇನ್ನಾರನ್ನು ದೂರಬೇಕು ಯಾರ ಹತ್ತಿರ ದೂರನ್ನು ತೆಗೆದುಕೊಂಡು ಹೋಗಬೇಕು? ಎಂದು ದೇವರನ್ನೇ ಪ್ರಶ್ನಿಸುತ್ತಿದ್ದಾರೆ ಇಲ್ಲಿ ಬಸವಣ್ಣನವರು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-731 

  Sat 15 Mar 2025  

 Very good
  Monikaks
B kalapanahalli

C-635 

  Tue 04 Mar 2025  

 ಶರಣರ ವಚನ ಧರ್ಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನಕ್ಕೆ
ನನ್ನ ನಮಸ್ಕಾರಗಳು
  Chetan patil
Nandikamba, kammathahalli post,davanagere