ಎನ್ನ ಗುಣಾವಗುಣವ ಸಂಪಾದಿಸುವೆ, ಅಯ್ಯಾ !
ಪ್ರತಿಯೆ, ಅಪ್ರತಿಮಮಹಿಮಾ, ನಿಮಗಾನು ಪ್ರತಿಯೇ?
ಕೂಡಲ ಸಂಗಮದೇವಾ, ನೀವು ಮಾಡಲಾದೆನು!
Transliteration Enna guṇāvaguṇava sampādisuve, ayyā!
Pratiye, apratimamahimā, nimagānu pratiyē?
Kūḍala saṅgamadēvā, nīvu māḍalādenu!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation Under progress
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 O Lord, you scan and sift and note
Each virtue and each vice of mine :
Am I, O matchless one, a match for you ?
O Lord Kūḍala Saṅgama,
What you have made me, that I am !
Translated by: L M A Menezes, S M Angadi
Hindi Translation मेरे गुणावगुण का विवेचन करते हो स्वामी!
हे अप्रतिम महिमावान् , मैं तुम्हारे समान हूँ?
तुम्हारे बनाने से मैं बना कूडलसंगमदेव ॥
Translated by: Banakara K Gowdappa
Telugu Translation నా గుణావ గుణముల, నే పొందుచుంటినయ్యా;
ప్రతినే అప్రతిమహిమా? నీకు నే ప్రతినే?
కూడల సంగమదేవా; నీవు నిల్పినట్లే నేను నిలునయ్యా!
Translated by: Dr. Badala Ramaiah
Tamil Translation என்நல்லியல்பு, தீயில்பினை யீட்டுவேனையனே.
சரியோ, இணையிலாபெம்மானே, உனக்கு நானீடோ?
கூடலசங்கம தேவனே நீர் தோற்றிட நான் தோன்றினேன்.
Translated by: Smt. Kalyani Venkataraman, Chennai
Marathi Translation
गुण अवगुण, काय पाहतोसि
आहे तैसा त्यासी, स्विकारणे
तुझी बरोबरी, कैसी येई मज
महामाहिम तुज, म्हणवितो
कूडलसंगमदेवां! तूच जन्मदाता
प्रेम भक्तीदाता, अप्रतिम
अर्थ - हे कूडलसंगमदेवा! (परमेश्वरा) तू माझ्यातील गुण अवगुण काय पाहतोस? मी तुझी बरोबरी कशी करू शकेन? मी एक पामर प्राणी आहे. तुला अप्रतिम महीमाशाली व अप्रतीम प्रीतीचा दाता म्हणतात. आणि जर तूच माझा जन्मदाता आहेस तर मी जसा आहे तसा माझा स्विकार कर. एवढीच तुझ्या चरणी मागणी आहे.
Translated by Rajendra Jirobe, Published by V B Patil, Hirabaug, Chembur, Mumbai, 1983
माझ्या गुणावगुणांचे आपण संपादन करता देवा ! हे योग्य आहे?
अप्रतिम महिमाशाली आपण, तुमची माझी बरोबरी होईल का?
कूडलसंगमदेवा आपणच मला तयार केले, मजवर रागावता का पिता ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಾಧಕನೊಬ್ಬನ ಮೇಲೆ ಶಿವನ ಕೃಪೆ ಸಂಕ್ರಮಿಸಬೇಕಾದರೆ-ಆ ಸಾಧಕನಲ್ಲಿ ಕುಂದುಕೊರತೆ ಯಾವುದೂ ಇಲ್ಲದಿರಬೇಕೆಂಬುದೊಂದು ಆದರ್ಶದ ಮಾತಷ್ಟೇ, ವಾಸ್ತವವಾಗಿ ಎಲ್ಲ ಸಾಧಕರಲ್ಲೂ ಒಂದಿಲ್ಲೊಂದು ವಿಧವಾಗಿ ಒಳ್ಳೆಯದೂ ಕೆಟ್ಟುದೂ ಯಾವುದಾದರೊಂದು ಪ್ರಮಾಣದಲ್ಲಿ ಬೆರತೇ ಇರುವುದು. ದೇಹ ಬೆರಸಿದ ಜೀವದ ಅವಸ್ಥೇಯೇ ಇಂಥದು. ಈ ಬೆರಕೆತನದಿಂದ ಶುದ್ಧತೆಯ ಕಡೆ ಸಾಗುವುದೇ ಎಲ್ಲ ಸಾಧಕರ ಮಹತ್ವಾಕಾಂಕ್ಷೆ. ಈ ಹಿನ್ನೆಲೆಯಲ್ಲಿ ದೇವರಿಗೆ ಮೊರೆಯಿಡುತ್ತಿರುವ ಬಸವಣ್ಣನವರು-ತಮ್ಮಲ್ಲಿನ ಗುಣಾವಗುಣಗಳನ್ನು ಆ ದೇವರು ತೂಗಿನೋಡಬಾರದೆಂದೂ, ದೇವರಿಗೆ ತಾನೆಂದಿಗೂ ಸಮನಾಗುವುದು ಸಾಧ್ಯವಿಲ್ಲವೆಂದೂ-ಅವನು ಅಪ್ರತಿಮನಾದರೆ-ತಾವು ಅವನು ಮಾಡಿದೊಂದು ಬೊಂಬೆಯೆಂದೂ ಭಿನ್ನವಿಸಿಕೊಳ್ಳುತ್ತ-ಆ ಬೊಂಬೆಯನ್ನು ಆಡಿಸಿ ನಡೆಸಿಕೊಳ್ಳುವುದು ಅವನ ಕೈಯಲ್ಲಿದೆಯೆಂದು ವಿನಯದಿಂದಲೇ ಆದರೂ ಸರಸವಾಗಿ ತಮ್ಮ ಮಿತಿಯನ್ನೂ ಆ ಶಿವನ ನಿಸ್ಸೀಮತೆಯನ್ನೂ-ಆದುದರಿಂದಲೇ ಅವನು ತಮ್ಮನ್ನು ಬೇಷರತ್ತಾಗಿ ಉದ್ದರಿಸಬೇಕೆಂದೂ ಶಿವನನ್ನು ಮುದ್ದರಿಸಬೇಕೆಂದೂ ಶಿವನನ್ನು ಮುದ್ದಾಗಿ ಕೇಳಿಕೂಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು