ಬೆದಕದಿರು ಬೆದಕದಿರು; ಬೆದಕಿದೊಡೆ ಹುರುಳಿಲ್ಲ!
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ?
ನಿಮ್ಮುತ್ತಮಿಕೆಯನೇ ಪೂರೈಸುವುದು,
ಕೂಡಲ ಸಂಗಮದೇವಾ.
Transliteration Bedakadiru bedakadiru; bedakidoḍe huruḷilla!
Cittaraṭṭeya kāyalli mattēnanarasuvirayyā?
Nim'muttamikeyanē pūraisuvudu,
kūḍala saṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Do not look, do not look into my heart ;
For if you do, you will not find
A kernel there.
What do you look for in a nut
Where nothing is ?
Pray, fill it with your virtue, Lord
Kūḍala Saṅgama !
Translated by: L M A Menezes, S M Angadi
Hindi Translation खोजो मत, खोजो मत, खोजो तो सार नहीं
निःसार फल में खोजते क्या हो?
भवदीय उत्तमता पूरक बने
कूडलसंगमदेव ॥
Translated by: Banakara K Gowdappa
Telugu Translation వెదకకు; వెదకకురా వెదకినచో సుఖము లేదురా
మేడిపండున నీవేమి చూతువుర!
నీ మంచి నే నిండిరచురా! సంగయ్య.
Translated by: Dr. Badala Ramaiah
Tamil Translation தேடற்க, தேடற்க, தேடிப் பயனில்லை,
உள்ளீடற்ற உள்ளத்திலே மற்றெதனைத் தேடுவாயையனே,
உம் பெருந்தகைமையினை முழுதும் நிறைப்பாய்,
கூடல சங்கமதேவனே.
Translated by: Smt. Kalyani Venkataraman, Chennai
Marathi Translation
नको शोधू काही, नको पाहू काही
काय शोधूनही, मिळे तेथे
गररहित फळे, त्यात बीजे तीन
न काही यावीण, पाहू जाता
काया हेचि फळ, त्यात तीन बीजे
वात पित्त कफ जे दिसताती
कूडलसंगमदेवा, न उरवी उणीव
तव उत्तमत्व, भरी त्यात
अर्थ - या जडदेहात कितीही शोधून पाहता तीन बीजाखेरीज अन्य काहीच दिसणार नाही. रज, तम आणि सत्व हीच ती तीन बीजे होत. काया म्हणजे एखाद्या गररहित फळाप्रमाणे त्या तीन बीजापासून त्रिगुणाची उत्पत्ती होते आणि तुझे महानत्व त्रिगुणातीत करते. म्हणून हे कूडलसंगमदेवा (परमेश्वरा) जर तू त्यात उत्तमत्व भरुन टाकलेस तर त्यात कोणतीच उणीव राहणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
शोधू नको, शोधू नको, शोधण्यात अर्थ
नाही. चित्तरट्ट फळात काय शोधणार आहे?
कूडलसंगमदेवा,
तुमची श्रेष्ठताच माझी कमतरता दूर करणार.
Translated by Shalini Sreeshaila Doddamani
ಶಬ್ದಾರ್ಥಗಳು ಚಿತ್ತರಟ್ಟೆ = ಟೊಳ್ಳು;
ಕನ್ನಡ ವ್ಯಾಖ್ಯಾನ ಕಾಯಿ ತುಂಬ ತಿನ್ನಬಾರದ ಮೂರು ಬೀಜವೇ ತುಂಬಿಕೊಂಡಿರುವ ಚಿತ್ತರಟ್ಟಿಯ ಕಾಯಲ್ಲಿ ತಿರುಳೆಲ್ಲಿಯದು, ರಸವೆಲ್ಲಿಯದು, ರುಚಿಯೆಲ್ಲಿಯದು? ದೇಹವಿಡಿದು ನೋಡಿದಾಗ-ಚಿತ್ತರಟ್ಟೆಯ ಕಾಯಂತೆ-ನಾನೂ ರಂಗಾಗಿ ಕಾಣುವೆನಾದರೂ-ನನ್ನಲ್ಲಿ ಸತ್ತಿನ ತಿರುಳಿಲ್ಲ,ಚಿತ್ತಿನ ರಸವಿಲ್ಲ, ಆನಂದದ ರುಚಿಯಿಲ್ಲ-ಇರುವಿದೆಲ್ಲಾ ಹೆಣ್ಣು ಹೊನ್ನು ಮಣ್ಣು ಎಂಬ ಈಷಣತ್ರಯ ಬೀಜ ಮಾತ್ರ.
ಎಲೆ ಶಿವನೇ ಉತ್ತಮವೆಂಬುದೇನನ್ನೂ ನನ್ನಲ್ಲಿ ನಿರೀಕ್ಷಿಸಿ ಪರೀಕ್ಷಿಸಬೇಡ. ನಿನ್ನಲ್ಲಿರುವ ಉತ್ತಮಿಕೆಯನ್ನೇ ನನಗೆ ಧಾರೆಯೆರೆದು ಸಂರಕ್ಷಿಸೆಂದು ಬಸವಣ್ಣನವರು ದೇವರಲ್ಲಿ ಮೊರೆಯಿಡುತ್ತಿರುವರು.
ಮೇಲೆ ಮೇಲೆ ದೇಹವು ಭೂಷಣವಾಗಿ ಕಂಡು ಒಳಗೆ ಸತ್ತ್ವವಿಲ್ಲದಿದ್ದರೆ-ಆ ದೇಹಕ್ಕಾಗಲಿ, ಅದನ್ನು ಧರಿಸಿದ ಜೀವಕ್ಕಾಗಲಿ ಬೆಲೆಯಿಲ್ಲ, ಅವೆರಡಕ್ಕೂ ಬೆಲೆ ಬರುವುದು ಶಿವಾಂಶ ನಮ್ಮೊಳಕ್ಕೆ ಅವತರಿಸಿದಾಗಲೇ!
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು