•  
  •  
  •  
  •  
Index   ವಚನ - 29    Search  
 
ಸಂಸಾರಹೇಯಸ್ಥಲ - ಮನೋವಿಕಾರ
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ; ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ! ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ ನೀವಿರಿಸಿದಿರಿ, ಕೂಡಲ ಸಂಗಮದೇವಾ.
Transliteration Enna cittavu attiya haṇṇu, nōḍayyā; vicārisidoḍēnū huruḷillavayyā! Prapan̄cina ḍambinalli ennanondu rūha māḍi nīvirisidiri, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Singer: Shyamala G. Bhave Music Director: Shyamala G. Bhave • Basaveshwara Vachana Vaibhava ℗ MRT Music Released on: 22-10-1983
English Translation My mind is like a fig fruit, O Lord! Fair and tempting outside, But hollow and rotten within! O Lord Kūḍala Saṅgama! It is You who shaped me, Placed me in the vanity of this world— Appearing virtuous outside, But an imposter within!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Look you, my heart Is like a country fig : Search it with care, There is no kernel there ! O Kūḍala Saṅgama Lord, It's you have made This outer form of mine And placed me, you, In this imposture of a world ! Translated by: L M A Menezes, S M Angadi
Hindi Translation प्रभो, मेरा चित्त गूलर का फल है, विचारने पर कोई सार नहीं, संसार के आडंबर में मुझे एक रूप देकर तुमने रखा, कूडलसंगमदेव ॥ Translated by: Banakara K Gowdappa
Telugu Translation నా చిత్త మొక అత్తిపండు చూడయ్యా! విచారింప సారమేమీ లేదయ్యా! డాంబిక ప్రపంచమున నన్నొక బొమ్మనుచేసి ఆ నిల్పితివయ్యా కూడల సంగమదేవా! Translated by: Dr. Badala Ramaiah
Tamil Translation என்னுளம் அத்திப்பழம் காண் ஐயனே, ஆராய்வதி லேதும் பயனிலையையனே, இவ்வுலகின் பகட்டிலே என்னையும் ஓருரு செய்து நீரிட்டீர், கூடலசங்கமதேவனே. Translated by: Smt. Kalyani Venkataraman, Chennai
Marathi Translation उंबरापरी हे, चित्त माझे पाहो शोधिता ते नाही, सार त्यात कूडलसंगमदेवा ! जगदाडेवरी मानवरूपधारी, ठेवियेले अर्थ - हे कूडलसंगमदेवा! (परशिवा) उंबराचे फळ पाहण्यास सुरेख दिसते पण त्यात उडणारे असंख्य किडे भरलेले असतात. त्याप्रमाणे माझे चित्तही षड्विकाररूपी किटकांनी भरून गेले आहे. तू मला या आवडंबरयुक्त जगात मानवरूप देऊन पाठविले आहेस. ज्याप्रमाणे उंबरातील किडे फुंकल्यानंतर उडून जातात व उंबर खाण्यास योग्य होते. तद्वत लिंगदीक्षारूपी मंत्र व शरण संगतीत राहिल्याने विकाररूपी कृमी किटक नष्ट होऊन तो भक्त शरणत्वास योग्य ठरतो. म्हणून महात्मा बसवेश्वरानी याच फळाची उपमा विकारयुक्त मनास दिली असावी. Translated by Rajendra Jirobe, Published by V B Patil, Hirabaug, Chembur, Mumbai, 1983 माझे चित्त उंबराचे फळ आहे पहा, विचार केला तर काही अर्थ नाही. जगाच्या आडंबरात मला एक रुप देवून तुम्ही जगविले कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಚಿತ್ತ = ಮನಸ್ಸು; ಡಂಬು = ಬಹಿರಂಗ ಬೂಟಾಟಿಕೆ; ರೂಪು = ರೂಪ; ಹುರುಳು = ಸತ್ವ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ-ಬಹಿರಂಗದಿಂದ ಅಂತರಂಗವನ್ನು ನಿರೀಕ್ಷಿಸಿದುದಾಯಿತು. ಇಲ್ಲಿ ಅಂತರಂಗದಿಂದ ಬಹಿರಂಗವನ್ನು ವಿಮರ್ಶಿಸಲಾಗಿದೆ. ಬಸವಣ್ಣನವರು ತಮ್ಮ ಚಿತ್ತವನ್ನು ಒಂದು ಅತ್ತಿಯ ಹಣ್ಣಿಗೆ ಹೋಲಿಸಿರುವರು. ಅದರ ಹೊರ ರೂಪರೇಖೆಗಳು ಚಿನ್ನರನ್ನದ ಬಣ್ಣವಾಗಿ ಕಂಗೊಳಿಸಿದರೂ-ಒಳಗೆಲ್ಲಾ ಹುಳು ತುಂಬಿರುವುದುಂಟು. ಅಂತರಂಗದ ಪಾಡು ಹೀಗಾಗಿ-ಬಣ್ಣಬಣ್ಣದ ಬಹಿರಂಗವು ಕೇವಲ ಅಣಕವಾಗಿ-ಇಡಿಯಾಗಿ ತಮ್ಮ ರೂಪ ಮತ್ತು ಸ್ವರೂಪ ಒಳಗೊಂದು ಹೊರಗೊಂದು ಪ್ರಪಂಚದ ಪ್ರತಿರೂಪವಾಗಿದೆಯೆಂದೂ, ತಮ್ಮನ್ನು ಈ ಪ್ರಕಾರದಲ್ಲಿ ಸೃಷ್ಟಿಮಾಡಿ ನಿಲ್ಲಿಸಿ-ಒಳಗೆಲ್ಲಾ ಸಿನೆ ಹಾಳಾಗಿ, ಹೊರಮೈ ಬಿನ್ನಾಣವಾಗಿ ಮಿಂಚುತ್ತಿರುವ ಮಾಯಾಪ್ರಪಂಚವನ್ನು ಬಿಂಬಿಸುವ ಒಂದು ಅಣಕದ ಗೊಂಬೆಯಂತೆ ತಾವಿರುವುದಾಗಿ ಬಸವಣ್ಣನವರು ತಮ್ಮನ್ನು ಒಂದು ನಿಷ್ಠುರ ವಿಮರ್ಶೆಗೆ ಒಳಗುಪಡಿಸಿಕೊಂಡಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-747 

  Fri 21 Mar 2025  

 ಪೂಜ್ಯ ಸ್ವಾಮಿಜೀಯವರಲ್ಲಿ ಸಾಷ್ಟಾಂಗ ನಮಸ್ಕಾರ.
ತಮ್ಮ ಇಂಗ್ಲಿಷಿನ ಅವತರಣಿಕೆಯನ್ನು ಇಟ್ಟುಕೊಂಡು
ನಮ್ಮ ರಷ್ಯನ್ ಅನುವಾದವನ್ನು ಪೂರೈಸಿದ್ದೇವೆ. ಅದಕ್ಕಾಗಿ
ನಿಮಗೆ ಋಣಿಯಾಗಿದ್ದೇವೆ.
ಇಲ್ಲಿನ ಚಿತ್ರದ ಬಗ್ಗೆ ತಮ್ಮಲ್ಲಿ ನನ್ನ ಮನವಿ ಇಷ್ಟು.
ಚಿತ್ರದಲ್ಲಿರುವುದು ಅಂಜೂರದ ಗಿಡ ಮತ್ತು ಹಣ್ಣು.
ಇದನ್ನು ಬಿಡಿಸಿದರೆ ಇದರಲ್ಲಿ ಹುಳುಗಳಿರುವುದಿಲ್ಲ.
ಆದರೆ ಅತ್ತಿ ಹಣ್ಣಿನ ಬಗ್ಗೆ ಹೀಗೆ ಹೇಳುವಂತಿಲ್ಲ.ಆ ಹಣ್ಣನ್ನು
ಬಿಡಿಸಿದರೆ ಅದರ ತುಂಬೆಲ್ಲ ಹುಳುಗಳಿರುತ್ತವೆ. ಮೇಲಾಗಿ
ನಮ್ಮಲ್ಲಿ ಅತ್ತಿ ಮರ ಎಲ್ಲೆಲ್ಲೂ ಬೆಳೆಯುತ್ತದೆ.
ಆದ್ದರಿಂದ ಈ ಮರದ ಚಿತ್ರ ಮತ್ತು ಹಣ್ಣುಗಳನ್ನೊಳಗೊಂಡ
ಚಿತ್ರವನ್ನು ಕಲಾವಿದರು ಬರೆದರೆ ಈ ವಚನಕ್ಕೆ ಸರಿಹೋಗುತ್ತದೆ. ನಮಸ್ಕಾರ.
  H S Harishankar
Mysuru

C-732 

  Sat 15 Mar 2025  

 ಸಂಗೀತ ಮಕ್ಕಳಿಗೆ ಕೇಳಲು ಉತ್ತಮವಾಗಿದೆ
  ಹೇಮಂತ್ k s lkg
B kalapanahalli