ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ, ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡೊಡೆ
ಕೂಡಲ ಸಂಗಮದೇವನೊಳಗಿರ್ಪನಯ್ಯಾ.
Transliteration Enna naḍeyondu pari enna nuḍiyondu pari
ennoḷagēnū śud'dhavilla, nōḍayyā.
Nuḍige takka naḍeya kaṇḍoḍe
kūḍala saṅgamadēvanoḷagirpanayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My actions go one way,
Another way my speech !
Look, Lord, there is no trace
Of purity in me !
Where action fitting to the word is found,
There, truly, Lord Kūḍala Saṅgama dwells !
Translated by: L M A Menezes, S M Angadi
Hindi Translation मेरी करनी कुछ, मेरी कथनी कुछ,
मुझमें कोई शुद्धता नहीं है देव,
कथनी के योग्य करनी देखें तो
कूडलसंगमदेव भीतर बसेंगे ॥
Translated by: Banakara K Gowdappa
Telugu Translation నా నడత యొక్కటి నా నుడి యొక్కటి
నాయందేమీ శుచిలేదు కదయ్యా,
నుడికి తగిన నడత యుండిన
కూడల సంగయ్య లోగూడునయ్యా! -
Translated by: Dr. Badala Ramaiah
Tamil Translation என்நடை யொருவிதம், என்சொல்லொரு விதம்,
என்னுளே தூய்மையிலை காணாயையனே;
சொல்லிற்குத் தக்க நடையினைக் காணின்,
கூடலசங்கமதேவன் உள்ளுறைவானையனே.
Translated by: Smt. Kalyani Venkataraman, Chennai
Marathi Translation
बोल माझा एक, आगळोच चाल
अंतरमन पहाल, नाही शुद्ध
बोल तैसा चाल, ऐसा जया ठाई
दंभाचार नाही, पाहू जाता
कूडलसंगमदेवा, देखा ऐशा गुण
घेईल समावून, खासा खासा
अर्थ - बोलावे तैसे चालावे व कृती प्रमाणेच बोलावे त्यात वेगळेपणा दिसून आल्यास त्यास दंभाचारी समजावे. या उक्तीस महत्त्व देतांना महात्मा बसवेश्वर म्हणतात की एखादा सर्व जगाला धोका देऊ शकेल किंवा स्वतःला धोका देऊ शकेल पण माझ्या प्रभूला धोका देणे अशक्य आहे. ज्यांचे बोलणे व वागणे एक असेल तसेच जे आपल्या वागणुकीनुसार बोलतात. त्यात तफावत असेच लोक परमेश्वरात एकरूप होण्यास पात्र ठरतात. नव्हे परमेश्वरच अशांना आपल्यात एकरुप करुन घेतो हे निश्चित समजावे. कारण ज्यांचे बोलणे व वागणे एक आणि वागणुकीप्रमाणेच बोलतात अशांचे अंतरमन शुद्ध असते.
Translated by Rajendra Jirobe, Published by V B Patil, Hirabaug, Chembur, Mumbai, 1983
माझे करणे एक आणि माझे बोलणे दुसरेच
माझ्यात शुध्द असे काही नाही पहा.
बोलल्यासम चाललो तर कूडलसंगमदेव
माझ्यात राहील.
Translated by Shalini Sreeshaila Doddamani
Urdu Translation نہیں ہے قول وعمل میں مطابقت کوئی
مرے وجود میں پاکیزگی کا نام نہیں
نہ ہوجوقول وعمل میں مرے تضاد کوئی
توہوں گےجلوہ فگن دل میں کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನ ಮೇಲೆ ಬಣ್ಣ ಬಣ್ಣವಾಗಿ ಒಳಗೆ ಹುಳು ತುಂಬಿರುವ ಅತ್ತಿಯ ಹಣ್ಣಿಗೆ, ಮತ್ತು ಒಳಗೆ ತಿರುಳಿಲ್ಲದೆ ಹೊರಗೆ ತುಂಬಿದಂತೆ ಕಾಣುವ ಚಿತ್ತರಟ್ಟಿಯ ಕಾಯಿಗೆ ತಮ್ಮ ಚಿತ್ತವನ್ನು ಹೋಲಿಸಿಕೊಂಡ ಬಸವಣ್ಣನವರು ಪರಿತಪಿಸುತ್ತಿರುವುದು-ನುಡಿಯಂತೆ ನಡೆಯಿಲ್ಲವೆಂಬ ತಮ್ಮ ಇಬ್ಬಂದಿತನಕ್ಕಾಗಿ.
ಯಾವನಾದರೊಬ್ಬನು ಆಡಂಬರಕ್ಕಾಗಿಯೋ ಪ್ರತಿಷ್ಠೆಗಾಗಿಯೋ ದೊಡ್ಡ ದೊಡ್ಡ ಮಾತುಗಳನ್ನಾಡುವನು. ಆದರೆ ಅವನ ಆ ಮಾತು ತಕ್ಕ ನಡೆಯಿಂದ ಋಜುವಾತಾಗುವುದಿಲ್ಲ.
ಒಳಗೆ ಮಳೆಯಿರುವ ಮೋಡ-ಗುಡುಗುವುದು, ಆ ಮೇಲೆ ಮಳೆಗರೆಯುವುದು-ಇದು ಪ್ರಕೃತಿ ಒಳಗೇನೂ ಇಲ್ಲದೆ-ಹೊರಗೆ ಬಡಬಡಿಸುವುದು ಹೀನಮಾನವಪ್ರಕೃತಿ.
ಇಂಥ ಮರೆಮಾಜುವ ಡಾಂಭಿಕತನದಿಂದ ಜನ ಮೋಸಹೋಗಬಹುದು-ಆದರೆ ಅಂತರ್ಯಾಮಿಯಾದ ಶಿವನು ಮೋಸಹೋಗುವುದಿಲ್ಲ, ಒಲಿಯುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು