ಮುಂಗೈಯ್ಯ ಕಂಕಣಕ್ಕೆ ಕನ್ನಡಿಯ ತೋರುವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು, ನೋಡಾ!
ನಾಯಿಗೆ ನಾರಿವಾಣವಕ್ಕುವುದೆ, ಕೂಡಲ ಸಂಗಮದೇವಾ?
Transliteration Muṅgaiyya kaṅkaṇakke kannaḍiya tōruvante
enna manavu nidhānavanollade jalaga maccittu, nōḍā!
Nāyige nārivāṇavakkuvude, kūḍala saṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Lo, my heart, enamoured of a speck
Of gold ore, spurns a pile of gold !
It is like showing a looking-glass
To bracelets on your wrist !
O Kūḍala Saṅgama,
Could a dog crack and eat
A coconut, Lord ?
Translated by: L M A Menezes, S M Angadi
Hindi Translation हाथ के कंगन को आरसी दिखाने की भांति,
मेरा मन स्वर्ण - निधि छोड, स्वर्ण -कण चाहता है ।
श्वान को कहीं क्या नारियल भाता है कूडलसंगमदेव॥
Translated by: Banakara K Gowdappa
Telugu Translation చుండు ముంజేతి కంకణమున కద్దము చూపినట్లు:-
నా మది నిధానమొల్లక పసిడిపొడి నాసింపబోయెరా! కుక్కకు
కూడల సంగమ దేవా!
Translated by: Dr. Badala Ramaiah
Tamil Translation முன்கைத்தொடிக்கு ஆடி காட்டுதலனைய என் மனம்
அமைதியின்றி கொழித்தலை நயந்தது காணாய்!
நாய்க்குத் தெங்கு சரியாமோ
கூடல சங்கமதேவனே?
Translated by: Smt. Kalyani Venkataraman, Chennai
Marathi Translation
हातचे सोडून, शुद्ध ते सोने
चमक-धमकाने, ओढी मन
नारळ कैसा आवडे, हाडुक सोडून
स्वानापरी मन, झाली गत
कूडलसंगमदेवा आरसा कशाला ?
हातच्या काकणाला, नलगे ते
अर्थ - मुष्याला हाड चघळावयास मिळाल्यास ते सोडून नारळ व त्याची कवटी पसंद करील काय? त्याप्रमाणे मन हे सोन्यातील शुद्धता, सत्यता सोडून त्याच्या चकाकीकडे, चमक धमकेकडेच अधिक आकर्षित होत असते. मन हे चंचल स्वभावाचे आहे हे सिद्ध करण्यासाठी वेगळे व अधिक प्रयत्न कां करावे? जसे हातच्या काकणाला आरसा कशाला? त्याकाळातील ही प्रसिद्ध म्हण उदाहरणादाखल महात्मा बसवेश्वरानी आपल्या वरील वचनातून उधृत केली आहे.
Translated by Rajendra Jirobe, Published by V B Patil, Hirabaug, Chembur, Mumbai, 1983
हाताच्या कांकणाला आरसा दाखविल्याप्रमाणे
माझ्या मनाने सोन्याऐवजी सुवर्ण कच्चाखनीज पसंत केले
कुत्र्याला नारळ आवडेल काय कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಕಂಕಣ = ಸಂಕಲ್ಪ ಸೂತ್ರ; ಜಲಗು = ಮರಳಲ್ಲಿ ಬಹು ಪ್ರಯಾಸದಿಂದ ಶೋಧಿಸಿ ತೆಗೆದ ಬಂಗಾರದ ಕಣ; ನಾರಿವಾಣ = ತೆಂಗು; ನಿಧಾನ = ಹೂತಿಟ್ಟ ಸಂಪಸ್ತು;
ಕನ್ನಡ ವ್ಯಾಖ್ಯಾನ ಅಂತಃಕರಣವೂರ್ವಕವಾಗಿ ಶಿವಕಾರ್ಯಗಳನ್ನು ಸಾಹಸದಿಂದ ಮಾಡಿದರೆ ವಿಷಮಸಂಸಾರದಿಂದ ಮುಕ್ತಿಯುಂಟಾಗುವುದೆಂಬುದು ಪ್ರತ್ಯಕ್ಷ ಪ್ರಸಿದ್ದ ಸಂಗತಿಯೇ ಆದರೂ-ಆ ರೀತಿ ಪ್ರವರ್ತಿಸಲಾಗದಿರುವುದಕ್ಕೆ ಮನಸ್ಸಿನಲ್ಲಿ ಆ ಬಗ್ಗೆ ನಂಬಿಕೆ ಗಟ್ಟಿಗೊಳ್ಳದಿರುವುದೇ ಕಾರಣ.
ನವನಿಧಿ ತನ್ನೆದುರಿಗೇ ಇದೆಯೆನ್ನುವುದಾದರೂ ಅಂಜನಸಿದ್ದಿಯನ್ನು ಪಡೆದು ಅದನ್ನು ಹೊಂದುವ ಮಹಾಸಾಧನೆಗೆ ಕೈಹಾಕದೆ-ಚಿನ್ನದಂಗಡಿಬೀದಿಯ ಬಚ್ಚಲ ಮಣ್ಣಿನಲ್ಲಿ ಚೆಲ್ಲಿರುವ ಚಿನ್ನದ ಪುಡಿಗಾಗಿ ಜರಡಿ ಹಿಡಿಯುವ ಕ್ಷುದ್ರ ಪ್ರಯತ್ನಗಳೆಷ್ಟೋ ನಡೆಯುತ್ತಲೇ ಇರುತ್ತವೆ. ಹಾಗೆಯೇ ಮನಸ್ಸಿಗೆ ಮಹತ್ವಾಕಾಂಕ್ಷೆಗಳೂ ಭೌಮಾನುಭೂತಿಗಳೂ ಒಗ್ಗದೆ-ಅಹನ್ಯಹನಿ ಹೊಟ್ಟೆಹೊರೆಯುವ ಕ್ಷುಲ್ಲಕ ವಿಚಾರಗಳಲ್ಲಿ ತೊಡಗುವುದು ಈ ಸಂಸಾರಜೀವನ ವಿಶ್ವಾಸಹೀನ ನೈಚ್ಯಾನುಸಂಧಾನದ ದುರ್ಲಕ್ಷಣವಾಗಿದೆ, ಈ ಸಣ್ಣತನವನ್ನು ಮೂಳೆ ಕಡಿಯುತ್ತ ಕಾಲಕಳೆಯುವ ನಾಯಿಗೆ ಹೋಲಿಸಿರುವರು ಬಸವಣ್ಣನವರು.
ತೆಂಗಿನಕಾಯನ್ನು ಕರಟಸಹಿತ ನುಂಗಿಯೂ-ಅದರ ಸಾರವನ್ನು ಹೀರಿ ಕರಟವನ್ನು ಇಡಿಯಾಗಿ ವಿಸರ್ಜಿಸುವ ಆನೆಗೂ, ಮೂಳೆ ಕಡಿವ ನಾಯಿಗೂ, ಅಪಾರ ಅಂತರವಿದೆ-ಹೇಯೋಪಾದೇಯ ವಿಚಾರದಲ್ಲಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು