•  
  •  
  •  
  •  
Index   ವಚನ - 32    Search  
 
ಸಂಸಾರಹೇಯಸ್ಥಲ - ಚಂಚಲತೆ
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು; ನಿಂದಲ್ಲಿ ನಿಲ್ಲಲೀಯದೆನ್ನ ಮನವು ಹೊಂದಿದಲ್ಲಿ ಹೊಂದಲೀಯದೆನ್ನ ಮನವು! ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ!
Transliteration Kombeya mēlaṇa markaṭanante laṅghisuvudenna manavu; nindalli nillalīyadenna manavu hondidalli hondalīyadenna manavu! Kūḍala saṅgamadēvā nim'ma caraṇakamaladalli bhramaranāgirisu, nim'ma dharma!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation Like a monkey leaping from one branch to another My mind keeps wandering! It neither rests where it stands, Nor stays where it lands! I beseech You, O Lord Kudala Sangama! Let my restless mind be a bee, Steadily humming at Your lotus feet, Relishing the nectar of Eternal Peace!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 My spirit leaps about- a monkey on a bough : Lets me not stand where I should stand ; Lets me not meet where I should meet. O Lord Kūḍala Saṅgama, Out of thy mercy grant I live within the lotus of thy feet, A bumble-bee ! Translated by: L M A Menezes, S M Angadi
Hindi Translation शाखोपरिस्थ वानरवत् मेरा मन लांघता है जहाँ रहना हो, मेरा मन रहने नहीं देता, जहाँ मिलना हो, मेरा मन मिलने नहीं देता, कूडलसंगमदेव, निज चरण-कमलों में मुझे भ्रमर बना रखो, दया करो ॥ Translated by: Banakara K Gowdappa
Telugu Translation కొమ్మ పై నున్న కోతిరీతి; కుప్పించే నా మనసు; కూడిన కడ కూడనీదు నా మనసు; నిలచిన కడ నిలువనీదు నా మనసు; కూడల సంగమదేవా; నీ పాదకమలముల భ్రమరిగ నిల్పుమయ్య నీదయ. Translated by: Dr. Badala Ramaiah
Tamil Translation கொம்பின்மேலுள குரங்கு போல வாவுமென்மனம் நின்றவிடத்திலே நிற்கவிடுமோ என்மனம், கூடினவிடத்திலே கூடவிடுமோ என்மனம், கூடலசங்கமதேவனே, உம் நோன்தாளிணையிலே ஞிமிறாயிடும். உம் அறம். Translated by: Smt. Kalyani Venkataraman, Chennai
Marathi Translation मन मर्कटापरी, उड्या घेई फांद्यावरी चंचलतेची कास धरी, स्थिर नोव्हे कैसा स्थिर होईना, समाऊ देईना ऐसा फधी वाटेना, माझ्या मना मजलागी एक, गुंजनेचे कर्म हाचि तुझा धर्म, नोव्हे काय? कूडलसंगमदेवा! होऊ दे मजला तव चरण कमला, भ्रमर ते. अर्थ - मन हे फाद्यांवर बसलेल्या वानराप्रमाणे विनाकारण इकडून तिकडे तिकडून इकडे उड्या घेत असते. ते एकाच ठिकाणी स्थिर होत नाही. आणि मन स्थिर झाल्याविना परमेश्वराचे चिंतन करणे असंभव. हे परम कर्तव्य काही केल्या पार पाडू देत नाही. अशा मनाच्या स्वभावाला महात्मा बसवेश्वर प्रथम मान्य करतात कारण त्यांना ते सत्य वाटते. यातून मार्ग काढण्यासाठी भ्रमर होऊन मला तुझ्या चरण कमली राहू दे असे म्हणतात. अर्थातच परमेश्वराच्या चरण- कमली राहून नामाने गुंजन करीत भक्तीरुपी मकरंद चाखित समाधानाने डोलत राहू दे. आणि त्या मकरंदाचे जन कल्याणासाठी अमृतरूपी मध होऊ दे. अणी त्यांची इच्छा आहे. नव्हे हाच तुझा धर्म असे परमेश्वराला पृच्छा करतात. Translated by Rajendra Jirobe, Published by V B Patil, Hirabaug, Chembur, Mumbai, 1983 फांदीवर बसलेल्या माकडाप्रमाणे उड्या मारते माझे मन. एका जागी स्थिर होऊ देत नाही माझे मन. कुठेही रमत नाही माझे मन. कूडलसंगमदेवा, तुमच्या चरणकमलाचा भ्रमर बनविणे आपला धर्म. Translated by Shalini Sreeshaila Doddamani
ಶಬ್ದಾರ್ಥಗಳು ಭ್ರಮರ = ದುಂಬಿ; ಮರ್ಕಟ = ಕೋತಿ; ಲಂಘಿಸು = ಜಿಗಿ;
ಕನ್ನಡ ವ್ಯಾಖ್ಯಾನ ಒಂದು ನಿರ್ಧಾರವಿಲ್ಲವಾಗಿಯೇ-ಮನಸ್ಸು ವಿಷಯಾಂತರಗಳಲ್ಲಿ ತೊಳಲಾಡುತ್ತ ಸದಾ ಚಂಚಲವಾಗಿರುವುದು ಕೋತಿ, ಶಾಖೋಪಶಾಖೆಯ ಸಂಸಾರವೃಕ್ಷದಲ್ಲಿ ಅದು ನಿಂತಲ್ಲಿ ನಿಲ್ಲದೆ, ಹೋದಲ್ಲಿ ಹದುಳವಿರದೆ ಅನವರತ ನೆಗೆದುಬೀಳುತ್ತಿರುವುದು. ದಳದಳವಾಗಿ ಅರಳಿ ನಟ್ಟನಡುವೆ ಮಧು ತುಂಬಿರುವ ತಾವರೆಯಲ್ಲಿ ವಿಹರಿಸುವ ದುಂಬಿಯಾದರೋಹತ್ತೂ ಕಡೆಗೆ ಹರಿದು ಹಂಚಿಹೋಗದೆ-ಮಧು ತುಂಬಿದ ಆ ಕೇಂದ್ರವೊಂದನ್ನೇ ತಲುಪುವುದು ತಪ್ಪದೆ, ತಾವರೆಯ ತುಂಬಿಗೆ ಈ ವ್ಯವಹಾರದಿಂದ ಮಕರಂದವನ್ನು ಅಪರಿಮಿತವಾಗಿ ಅಸ್ವಾದಿಸುವ ಲಭ್ಯವಿದೆ. ಬಸವಣ್ಣನವರಿಗೆ ಇದು ಅನುಕರಣೀಯವೆನಿಸಿ-ಶಿವನ ಚರಣಕಮಲದಲ್ಲಿ ತಾವೂ ಒಂದು ದುಂಬಿಯಂತಿರುವ ಸುಯೋಗ ಒದಗಲೆಂದು ಹಾರೈಸುವರು. ದುಂಬಿಗಾದರೂ ಹೂವಿಂದ ಹೂವಿಗೆ ಹೋಗುವ ಸುತ್ತಾಟವಿದ್ದೀತು-ತಮಗಾದರೋ ಶಿವನ ಚರಣ ಕಮಲವೊಂದರಲ್ಲೇ-ಮದಬರಿಸದ ತವದ ಮಧುವನ್ನು ದಣಿಯುಂಡು ತಲ್ಲೀನವಾಗಿರುವ ಧ್ಯಾನಮಗ್ನ ಅಮೃತಸ್ನಿಗ್ಧ ಜೀವನ ಲಭಿಸಲೆನ್ನುತ್ತಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು