ಮರನನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತಲಿದೆ;
ಬೆಂದ ಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲ ಸಂಗಮದೇವನಲ್ಲಿಗೆ ಹೋಗಲೀಯದಯ್ಯಾ!
Transliteration Marananērida markaṭanante
halavu kombege hāyutalide;
benda manava nānentu nambuvenayyā?
Entu naccuvenayyā?
Enna tande kūḍala saṅgamadēvanallige hōgalīyadayyā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Like a monkey on a tree
it leaps from branch to branch:
how can I believe or trust
this burning thing, this heart?6
It will not let me go
to my Father,
my lord of the meeting rivers.
Translated by: A K Ramanujan
Book Name: Speaking Of Siva
Publisher: Penguin Books
----------------------------------
A monkey that has climbed a tree,
It leaps and bounds among the boughs :
How can I trust this feverish mind ?
How can I, thus, approve of it ?
For, every time I try to go
To my Father, Lord Kūḍala Saṅgama,
It bars my way !
Translated by: L M A Menezes, S M Angadi
Hindi Translation तरू पर आरूढ वानरवत्
कई डालों को लांघता है,
ऐसे विकल मन पर कैसे विश्वास करूँ?
कैसे श्रद्धा रखूँ?
मेरे पिता कूडलसंगमदेव के यहाँ जाने नहीं देता ॥
Translated by: Banakara K Gowdappa
Telugu Translation మానిపై నున్న మర్కటము రీతి
కొమ్మకొమ్మల బడి పోవుచుండె;
మఱుగు మదిని నే నెట్లు నమ్మెదనయ్యా;
ఎట్లు మెత్తునయ్య; చెదరుమదిని? తండ్రి
ఇది సంగని సన్నిధికి పోనీదు కదయ్యా!
Translated by: Dr. Badala Ramaiah
Tamil Translation மரத்திலேறிய மந்தியைப் போல
பல கொம்புகளைத் தாவுகிறேனன்றோ
வெந்தமனத்தை நானெங்ஙனம் நயப்பேனையனே?
எங்ஙனம் விரும்புவேனையனே?
என் தந்தை கூடலசங்கமதேவன்பால்
செல்லவிடுமோ, ஐயனே.
Translated by: Smt. Kalyani Venkataraman, Chennai
Marathi Translation
झाडावर चढलेल्या माकडाप्रमाणे फांद्या फांद्यावर उड्या मारीत आहे.
संतप्त मनावर मी कसा विश्वास ठेवू? त्यावर कसा भरवसा ठेवू ?
माझा पिता कूडलसंगमदेवापाशी हे जाऊ देत नाही.
Translated by Shalini Sreeshaila Doddamani
ಶಬ್ದಾರ್ಥಗಳು ನಚ್ಚು = ನಂಬು; ಮರ್ಕಟ = ಕೋತಿ;
ಕನ್ನಡ ವ್ಯಾಖ್ಯಾನ ಈ ದೇಹವೇ ಒಂದು ವೃಕ್ಷ, ಇಂದ್ರಿಯಗಳೇ ಅದರ ಕೊಂಬೆರೆಂಬೆಗಳು. ಅಲ್ಲಿ ಮನವೇ ಮರ್ಕಟ. ಆ ಮರ್ಕಟ ಕೊಂಬೆಯಿಂದ ಕೊಂಬೆಗೆ ಜಿಗಿದು ನೆಗೆದಾಡುತ್ತಿರುವುದು. ಇಂಥ ಸ್ಥಿಮಿತವಿಲ್ಲದ ಮನಸ್ಸಿನ ದಾಳಿಗೆ ಸಿಲುಕಿ ಜೀವ ತತ್ತರಿಸಿದೆ.
ಶಿವದ ಸ್ವಸ್ಥಹಾದಿ ಹಿಡಿದೇನೆಂದರೆ ಮೇಲೆ ಬಿದ್ದು ಏಡಿಸುತ್ತಿದೆ ಈ ಮರ್ಕಟ.
ಬಸವಣ್ಣನವರು ತಮ್ಮ ದಿವ್ಯಜೀವನದ ಹಾದಿಯಲ್ಲಿ ಆತಂಕವೊಡ್ಡುವ ಮನಸ್ಸಿನ ಈ ಉಪಟಳವನ್ನು ಕುರಿತು ಶರಣರಲ್ಲಿ ನಿವೇದಿಸಿಕೊಳ್ಳುತ್ತಿರುವರು.
ಶಿವದತ್ತಲಾಗಬೇಕೆಂಬವರು ಮೊದಲು ಶಿವಶರಣರತ್ತಲಾದರೆ ಮಾರ್ಗ ಸುಸರವಾಗುವುದೆಂಬ ಸೂಚನೆಯೂ ಈ ವಚನದಲ್ಲಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು