•  
  •  
  •  
  •  
Index   ವಚನ - 35    Search  
 
ಸಂಸಾರಹೇಯಸ್ಥಲ - ಮನಸ್ಸು
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ! ಸಂಸಾರಸಂಗವ ಬಿಡದು ನೋಡೆನ್ನ ಮನವು ಈ ನಾಯಿತನವ ಮಾಣಿಸು ಕೂಡಲ ಸಂಗಮದೇವಾ, ನಿಮ್ಮ ಧರ್ಮ!
Transliteration Tuppada savige alaga nekkuva soṇaganantenna bāḷuve! Sansārasaṅgava biḍadu nōḍenna manavu ī nāyitanava māṇisu kūḍala saṅgamadēvā, nim'ma dharma!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Art
English Translation My life is like that of a street dog, Licking the sharp edge of a sword Smeared with blood, Enticed by the taste, Unaware that it cuts its tongue. Alas! My mind does not allow me To overcome worldly enticements. O Lord Kūḍala Saṅgama! Have mercy on me, Free me from this disgraceful dog-like nature!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 My life is like a dog Licking a sword's sharp edge For ghee ! My mind will not forsake The bother of this world ! O Lord Kūḍala Saṅgama, Out of thy mercy, rid Me of this doggish life ! Translated by: L M A Menezes, S M Angadi
Hindi Translation घृत – स्वाद हेतु तलवार चाटनेवाले श्वान सा है मेरा जीवन, मेरा मन संसार संग नहीं त्यागता, यह शुनकत्व छुड़ाने की कृपा करो, कूडलसंगमदेव ॥ Translated by: Banakara K Gowdappa
Telugu Translation నేతిరుచుల కత్తిమొన నాకు కుక్క గతి అయ్యె నా బ్రతుకు; సంసారపు జంరaూటము విడదురా నా మనసు. ఈ కుక్క తనమును మాన్పింపుమా - కూడల సంగమదేవా నీ దయచూపి. Translated by: Dr. Badala Ramaiah
Tamil Translation நெய்ச்சுவைக்கு வாளினை நக்கும் நாய் போன்றென் வாழ்வு! வாழ்க்கைப் பிணைப்பினை விடாது காணாய் என்மனம், இத்தகு இழியியல்பினை அகற்றுவீர் கூடல சங்கம தேவனே, உம் அறம். Translated by: Smt. Kalyani Venkataraman, Chennai
Marathi Translation तलवार धारेला तूप चाटी श्वान तैसे हे जीवन, शाले माझे न सोडी संसार, कधी माझे मन श्वानापरी जाण, गती माझी हाचि तुझा धर्म, कूडलसंगमदेवा यातून मुक्त व्हावे, ऐसे वाटे अर्थ - हे कूडलसंगमदेवा! (परमेश्वरा) धारदार तलवारीला लागलेले तूप चाटताना श्वानास आपली जिव्हा देखील कापली जाईल याचे त्याला भान नसते व तो आपली जिव्हा फाटेपर्यंत चाटीतच असतो. त्याप्रमाणे संसाररूपी तलवारीच्या धारेस लागलेले स्वार्थरुपी तूप चाटण्यातच मी बेभान झालो आहे. संसार मला सोडीत नाही. माझ्या मनाची गती व स्थिती त्या लालची कुत्र्याप्रमाणे झाली आहे. हे प्रभो! मला त्यातून मुक्त कर. नव्हे त्यातून मला मुक्त करणे हाच तुझा धर्म नव्हे कां ? Translated by Rajendra Jirobe, Published by V B Patil, Hirabaug, Chembur, Mumbai, 1983 तूपाच्या आशेने तलवारीची धार चाटणाऱ्या कुत्र्याप्रमाणे माझे जीवन. संसार संग सोडीत नाही माझे मन कुत्र्यासारखी ही सवय सोडवावी देवा कूडलसंगमदेवा तुमचा धर्म. Translated by Shalini Sreeshaila Doddamani
ಶಬ್ದಾರ್ಥಗಳು ಅಲಗ = ; ಮಾಣು = ನಿಲ್ಲಿಸು, ಸುಮ್ಮನಿರು, ತಡಮಾಡು, ತಪ್ಪಿಹೋಗು; ಸೊಣಗ = ನಾಯಿ;
ಕನ್ನಡ ವ್ಯಾಖ್ಯಾನ ತುಕ್ಕುಹಿಡಿಯದಿರಲೆಂದು ಮಸೆದ ಅಲಗಿಗೆ ತುಪ್ಪವನ್ನು ಸವರಿಡುವರು. ಆ ತುಪ್ಪದ ಸವಿಗೆ ಆ ಅಲಗನ್ನೇ ನೆಕ್ಕುವುದು ಮೂಢನಾಯಿ! ತನ್ನ ನಾಲಗೆ ಕೊಯ್ದು ಹೋಗುವುದೆಂಬ ಆಲೋಚನೆಯೇ ಅದಕ್ಕಿಲ್ಲ ! ಅದಕ್ಕಿರುವುದು ತುಪ್ಪದ ಮೇಲಣ ವ್ಯಾಮೋಹ ಮಾತ್ರ ! ! ಏನಾದರಾಗಲಿ ನೆಕ್ಕುವುದು ಅದರ ಗುಣ. ಈ ಗುಣಕ್ಕೇ ನಾಯಿತನವೆಂಬುದಿನ್ನೊಂದು ಹೆಸರು. ಮನಸ್ಸಿಗಿರುವುದೂ ಈ ನಾಯಿತನವೇ. ಅದು ಸಂಸಾರವೆಂಬ ಹರಿತವಾದ ಖಡ್ಗಕ್ಕೆ ಸವರಿರುವ ವಿಷಯ ಲೇಪವನ್ನು ನೆಕ್ಕುವುದು-ನೆಕ್ಕಿ ನೋಯುವುದು. ಸುಖ ಬೇಕಾದರೆ ಹಾನಿಕರವಾದ ಸಂಸಾರದ ನೆಲೆಯನ್ನು ತ್ಯಜಿಸಿ ಅದು ಶಿವನನ್ನು ಭಜಿಸಬೇಕು-ಅಲ್ಲಿ ಅದಕ್ಕೆ ಎಲ್ಲೂ ಇಲ್ಲದ ಅಮೃತಾಸ್ವಾದ ಸಲ್ಲುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು