ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ;
ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ, ನೋಡಾ!
ಬೆಂದ ಕರಣಾದಿಗಳು ಒಂದೇ ಪಥವನರಿಯವು;
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ?
ಎನ್ನ ತಂದೆ, ಕೂಡಲ ಸಂಗಮದೇವಾ
ನಿಮ್ಮ ಶರಣರ ಬಳಿವಿಡಿದರೆ
ಎನ್ನ ದಂದುಗ ಹಿಂಗುವುದು.
Transliteration Danduga biḍadu manada sandēha hiṅgadāgi;
munde liṅgava kaṇḍ'̔ehenembudu husi, nōḍā!
Benda karaṇādigaḷu ondē pathavanariyavu;
entu śivapathavenage sādhyavappudayyā?
Enna tande, kūḍala saṅgamadēvā
nim'ma śaraṇara baḷiviḍidare
enna danduga hiṅguvudu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Because my mind is still in doubt,
Its worries have not ceased :
That I shall any time behold
The Liṅga, is a lie, a lie !
My feverish senses do not know
A single path : how can I, then,
Ever attain the Śiva -path ?
My father, Kūḍala Saṅgama,
My worries will not leave me till
I follow the path of Thy Śaraṇās !
Translated by: L M A Menezes, S M Angadi
Hindi Translation मन का संदेह नष्ट नहीं होता, अतः कष्ट नहीं मिटता,
यह झूठ है, आगे लिंग – दर्शन करूँगा।
तप्त करणेंद्रिय एक ही पथ नहीं जानते,
शिवपथ मेरे लिए कैसे साध्य होगा?
मेरे पिता कूडलसंगमदेव,
तव शरणों का अनुसरण करूँ,
तो मेरा कष्ट दूर होगा ॥
Translated by: Banakara K Gowdappa
Telugu Translation తగుల ముడుగదు మతి సంశయము తీరుదాక;
ఇక లింగము చూతు ననుట కల్ల కదరా;
కలగు కరణేంద్రియము లోక్క పధము తెలియవు
ఎటు లా శివపధము సాధ్యమగునయ్యా నాకు;
తండ్రీ! కూడల సంగయ్యా; శరణుల
దగిలిన నా తగులము తొలగునయ్యా!
Translated by: Dr. Badala Ramaiah
Tamil Translation அவலம் விடாது மனத்தின் ஐயம் நீங்காது ஐயனே,
இனி இலிங்கம் தனைக் காண்பது பொய்யாமோ!
வெந்தபுலன்கள் ஒரே வழியினை யறியாதவை,
எங்ஙனம் சிவபதம் எனக்குக் கைகூடும் ஐயனே,
என் தந்தையே, கூடல சங்கம தேவனே
உம் அடியாரைப் பின்பற்றின், என் இன்னல் நீங்கும்.
Translated by: Smt. Kalyani Venkataraman, Chennai
Marathi Translation
मनातील संदेह, झाल्याविण दूर
द्वंद्व हर दूर, मिरे कैसे ?
जाणू मी कैसे, लिंगदेवा तुजला
शिवपथ मजला, सापडे कां?
तप्त कर्णेद्रिय, अन्य मार्ग शोधी
एक मनासि कधी, येईना ते
कूडलसंगमदेवा! शरण संगतीत
द्वंद्व मिटतात, अंतरीचे
अर्थ - मन हे चंचल, असल्यामुळे त्यात नेहमी सत्य-असत्य, चांगले-वाईट, आशा-चिंता यांचे द्वंद्व चालू असते. त्याची द्विधा अवस्था होत असते. त्यामुळे मनात संदेह निर्माण होतो. अशा द्वंद्व अवस्थेत देवा तुला मी कसे जाणून घेऊ शकेन? नेहमी द्वंद्व चाललेले पाहून करणेंद्रिय नेहमी तृप्त होतात म्हणून तेही एका निर्णयास येणार कसे? अशा द्वंद्वातून व संदेहातून मुक्त होण्यासाठी एकमेव मार्ग म्हणजे शरण सत्संग होय. कारण तेथे नेहमी सत्य उत्तम व दृढता यावरच चालते. तेथे सदाचार दिसेल. आचार-विचार व वाणी एकच असल्याचे अनुभवास येईल. म्हणून शरण सत्संगात राहणे म्हणजे परमेश्वर प्राप्तीकडे वाटचाल करणे होय.
Translated by Rajendra Jirobe, Published by V B Patil, Hirabaug, Chembur, Mumbai, 1983
दुःख सुटणार नाही, मनाचा संदेह दूर झाल्याविना
पुढे लिंगदेवाचे दर्शन झाले म्हणणे असत्य आहे पहा.
तप्त करणेंद्रिये एकही पथ जाणीत नाहीत.
मग शिवपथ मला साध्य कसा होणार देवा?
माझा पिता कूडलसंगमदेवा आपल्या
शरणसंगात मनाचे दुःख नष्ट होणार.
Translated by Shalini Sreeshaila Doddamani
ಶಬ್ದಾರ್ಥಗಳು ದಂದುಗ = ದುಃಖ; ಪಥ = ಮಾರ್ಗ; ಬಳಿವಿಡಿ = ಸಂಬಂಧ;
ಕನ್ನಡ ವ್ಯಾಖ್ಯಾನ ಸಂಸಾರದ ಎಲ್ಲ ಕ್ಲೇಶಗಳಿಗೆ ಕಾರಣ-ಸಂದೇಹ. ಸಂದೇಹವೆಂದರೆ ನಂಬಲರ್ಹವಾದುದನ್ನೂ ನಂಬಲಾರದೊಂದು ಅನಿಶ್ಚಿತಭಾವ. ಈ ಬಗೆಯ ಸಂದೇಹವಿರುವವರೆಗೆ ಯಾವನೂ ಭವಿಯೇ ಹೊರತು ಭಕ್ತನಲ್ಲ ಅವನಿಗೆ ಲಿಂಗವಿಲ್ಲ. ಲಿಂಗಸ್ಥಲಕ್ಕೆ ಯಾತ್ರಾರ್ಥಿಯಾಗಿ ಹೊರಡುವವನು ಮೊದಲು ಮಾಡಿಕೊಳ್ಳಬೇಕಾದ ಸಿದ್ಧತೆಯೆಂದರೆ-ಇಂದ್ರಿಯಗಳ ಬೆನ್ನುಹತ್ತಿ ನಿಲುಕಡೆಯಿಲ್ಲದೆ-ಸಾತ್ವಿಕವಾದುದೊಂದನ್ನೂ ನಂಬದೆ ನೆಚ್ಚದೆ-ಅನೇಕಾಗ್ರವಾಗಿ ಅಲೆದಾಡುತ್ತಿರುವ ತನ್ನ ಮನೋವಿಪರ್ಯಾಸವನ್ನು ತಡೆಗಟ್ಟಬೇಕು. ಎರಡನೆಯದಾಗಿ ಶಿವಶರಣರು ಬಿಟ್ಟು, ಹೋಗಿರುವ ಹೆಜ್ಜೆಯ ಗುರುತಿನ ಮೇಲೆ ಹೆಜ್ಜೆಯಿಟ್ಟು ಮುಂದುವರಿಯಬೇಕು.
ಹೀಗೆ ಹಾದಿಹಿಡಿದು ಹೊರಟರೆ ಮಾತ್ರ ನಾವು ಲಿಂಗಸ್ಥಲವನ್ನು ತಲುಪಬಲ್ಲೆವು. ಈ ಶಿವಪಥ ಪ್ರಯಾಣವನ್ನೇ ಜೀವನಯಾತ್ರೆಯೆನ್ನುವರು ಜ್ಞಾನಿಗಳು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು