ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು!
ಏನು ಮಾಡುವೆನೀ ಮನವನು? ಎಂತು ಮಾಡುವೆನೀ ಮನವನು
ಕೂಡಲ ಸಂಗಮದೇವನ ಶರಣರ
ನಚ್ಚದ, ಮೆಚ್ಚದೆ, ಬೆಂದ ಮನವನು?
Transliteration Tanna vicārisalolladu; idira vicārisahōhudī manavu!
Ēnu māḍuvenī manavanu? Entu māḍuvenī manavanu
kūḍala saṅgamadēvana śaraṇara
naccada, maccade, benda manavanu?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Refusing to scan itself, this mind
All else will scan !
What shall I do with this mind of mine,
How shall I deal with it - this mind,
This feverish thing that will not trust,
Nor be devoted to the Śaraṇās
Of Lord Kūḍala Saṅgama ?
Translated by: L M A Menezes, S M Angadi
Hindi Translation निज विचार नहीं करता,
पर विचार करने जाता है, यह मन,
क्या करूँ इस मन को,
कैसे करूँ इस मन को,
कूडलसंगमदेव के शरणों पर
श्रद्धाभक्ति न रखनेवाले मन को
आग में झोंक दो ॥
Translated by: Banakara K Gowdappa
Telugu Translation తన్ను విచారించు కొనలేక
ఎదిరిని విచారింప బోయె నీ మనసు;
ఏమి సేతు నీ మనసును?
సంగమదేవుని శరణుల నచ్చని మెచ్చని
నా మనసును! ఏమి సేతు?
Translated by: Dr. Badala Ramaiah
Tamil Translation தன்னை ஆராய விரும்பாது பிறரை ஆராயச் செல்லுமிம்மனம்,
என்செய்வேனிம்மனத்தை எவ்வாறு செய்வேனிம்மனத்தை
கூடல சங்கனின் அடியார் தம்மை
நயந்து விரும்பா வெந்த மனத்தை?
Translated by: Smt. Kalyani Venkataraman, Chennai
Marathi Translation
आपला विचार करीत नाही,
दुसऱ्यांचा विचार करते मन.
काय करु या मनाला कसे करु या मनाला.
कूडलसगमदेवाच्या शरणाना
आपले न म्हणणारे हे मनाला आगीत घाल.
Translated by Shalini Sreeshaila Doddamani
ಶಬ್ದಾರ್ಥಗಳು ನಚ್ಚು = ನಂಬು;
ಕನ್ನಡ ವ್ಯಾಖ್ಯಾನ ಮನಸ್ಸು ತನ್ನ ಕುಂದುಕೊರತೆಗಳನ್ನು ಪತ್ತೆಹಚ್ಚಿ ಸರಿಪಡಿಸಿಕೊಳ್ಳುವತ್ತ ಗಂಭೀರವಾಗಿ ಗಮನ ಹರಿಸದೆ-ಅನುಗಾಲವೂ ಅನ್ಯರಲ್ಲಿ ತಪ್ಪುಗಳನ್ನು ಹುಡುಕಿ ಗುಲ್ಲೆಬ್ಬಿಸಿ ಗಲಾಟೆ ಮಾಡುವ ಕಿತಾಪತಿಯಲ್ಲಿ ಕಾಲಕಳೆಯುತ್ತದೆ. ಕಣ್ಣು ಕಿವಿ ಮೂಗು ಮುಂತಾದ ಇಂದ್ರಿಯಗಳ ಸಂದಿಗೊಂದಿಯಲ್ಲಿ ತಿರುಗುತ್ತ ಸದಾಕಾಲ ಬಹಿರ್ಮುಖವಾಗಿಯೇ ಇದ್ದರೆ-ತನ್ನನ್ನು ತಾನೇ ಉದ್ಧರಿಸಿಕೊಳ್ಳಲು ಬೇಕಾದ ಅಂತರ್ಮುಖತೆ ಈ ಮನಸ್ಸಿಗೆಲ್ಲಿ ಬಂದೀತು?
ಈ ಮನಸ್ಸು ಹೀಗೆ ಲೋಕದ ಜನರಲ್ಲಿ ತಪ್ಪು ಹುಡುಕುವುದಿರಲಿ-ಶಿವಚಿತ್ತರಾದ ಶರಣರ ಮೇಲೂ ತನ್ನ ಸಂಶಯದ ಗೂಬೆಕಣ್ಣುಗಳನ್ನು ತಿರುಗಿಸುವುದುಂಟು.
ಉದ್ಧಾರವಾಗಬೇಕಾದವನು ಈ ಕುತ್ಸಿತ ಮಾರ್ಗವನ್ನು ಬಿಟ್ಟು-ಅಂತರ್ಮುಖಿಯಾಗಬೇಕು, ಆತ್ಮ ಪರಿಶೀಲನೆ ಮಾಡಿಕೊಳ್ಳಬೇಕು, ಶಿವಶರಣರ ನಡೆನುಡಿಯನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಆತ್ಮೋದ್ಧಾರಕ್ಕೆ ಅನ್ಯಮಾರ್ಗವಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು