•  
  •  
  •  
  •  
Index   ವಚನ - 40    Search  
 
ಸಂಸಾರಹೇಯಸ್ಥಲ - ಮಮಕಾರ
ಸುಡಲೀ ಮನವೆನ್ನನುಡುಹನ ಮಾಡಿತ್ತು! ನಡೆವಲ್ಲಿ ನುಡಿವಲ್ಲಿಯಧಿಕನೆಂದೆನಿಸಿತ್ತು ಬೆಡಗಿನ ಕೀಲು ಕಳೆದು ಕೆಡೆದ ಬಳಿಕ ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು; ಒಡಲನುರಿ ಕೊಂಬುದು; ಒಡವೆಯನರಸು ಕೊಂಬ; ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ! ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ ಇನ್ನು ಮಾಡಿದೊಡೊಳವೆ ಕೂಡಲ ಸಂಗಮದೇವಾ?
Transliteration Suḍalī manavennanuḍ'̔uhana māḍittu! Naḍevalli nuḍivalliyadhikanendenisittu beḍagina kīlu kaḷedu keḍeda baḷika kaḍugūrpa maḍadi tā muṭṭalam'maḷu; oḍalanuri kombudu; oḍaveyanarasu komba; kaḍugūrpa maḍadiya mattobba cenniga komba! Munna māḍidudu tanna benna biḍadannakka innu māḍidoḍoḷave kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Oh, blast this mind ! It turns me into a fop, Blowing itself too big In all it does or says ! When all that holds your looks Together, fails and falls, Your doting wife will shun your touch ; Fire take your body ; your things the King ; Your wife accpet a second beau ! Until your bygone days Have ceased their chase, All that you do is vain, O Lord Kūḍala Saṅgama ! Translated by: L M A Menezes, S M Angadi
Hindi Translation जल जाय यह मन जो मुझे वेषधारी बनाता है, वाचा - कर्मणा अपने को महान मानता है, सौंदर्यमूल नष्ट होने पर- परम प्रिय पत्नी स्पर्श नहीं करती, शरीर को ज्वाला जला देती है, संपत्ति राजा ले लेता है, प्रिय पत्नी को कोई और सुंदर पुरुष ले जाता है, पूर्वकृत पापों के न छूटने तक- अब कुछ करने से क्या होगा, कूडलसंगमदेव। Translated by: Banakara K Gowdappa
Telugu Translation నామది కంద నను డాంభికునిజేసె; నుడియందు నన్నధికుడనిపించె; సొగసులు చెడి, తూలిపడినంత; కడుగూర్చు ప్రేయసి తాముట్ట వెఱచును; ఒడల నగ్నిలోగొను; నొడవుల నృపుడు సేకొను; కడుగూర్చు కాంతను వేరొక ప్రియుడుకూడు మున్ను చేసినదే వెన్ను విడకున్న; మటిమణి సేయు టెట్ల గు కూడల సంగమదేవా! Translated by: Dr. Badala Ramaiah
Tamil Translation சுடும் மனமெனை இழிஞனெனச் செய்தது, நடையிலே சொல்லிலே மிகைசெய்தது, அழகு சிதைந் தழிந்து வீழின் அன்புகெழுமிய கிழத்தியுந் தீண்டாள், உடலையழல்கொள, உடைமையை அரசன் கொள, அன்புக் கிழத்தியைப் பிறிதொரு அழகன் ஏற்பன், முன்செய் தீவினை விடாது தொடரும் போழ்து இன்னுஞ் செய்யலாகுமோ, கூடல சங்கம தேவனே? Translated by: Smt. Kalyani Venkataraman, Chennai
Marathi Translation जळो हे मन, वेषधारी करणारे हे मन, करण्यात बोलण्यात स्वतःला श्रेष्ठ समजते. प्राण गेल्यावर शव होऊन पडता प्राणप्रिय कांता हातही लावणार नाही. देह राख होईल, संपत्ती राजा घेईल. प्राणप्रिय पत्नी दुसऱ्याची प्रेयसी होईल. पूर्वी केलेले पाप पाठ सोडल्याशिवाय काय करता येणार कूडलसंगमदेवा? Translated by Shalini Sreeshaila Doddamani
ಶಬ್ದಾರ್ಥಗಳು ಉಡುಹು = ವೇಷಧಾರಿ; ಕೀಲು = ರಹಸ್ಯ; ಕೂರ್ಪ = ಪ್ರೀತಿ; ಕೆಡೆ = ಕೆಟ್ಟ; ಚೆನ್ನಿಗ = ಚೆಲುವ;
ಕನ್ನಡ ವ್ಯಾಖ್ಯಾನ ಮನುಷ್ಯನು ಪ್ರಾಣಬೆರಸಿರುವವರೆಗೆ-ಅವನು ನಡೆದರೊಂದು ಅತಿಶಯ, ನುಡಿದರೊಂದು ಅತಿಶಯವೆಂಬಂತೆ ರಂಗೇರಿರುವುದು. ಆ ಪ್ರಾಣದ ಮಿನುಗು ಮಾಸಿದ ಮರುಕ್ಷಣವೇ ಅವನ ದೇಹವನ್ನು ಮುದ್ದಾಡಿದ ಹೆಂಡತಿ ಮುಟ್ಟಲೂ ಹೆದರುವಳು. ಈ ದುರ್ದೆಸೆಯಲ್ಲಿ ಅವನ ದೇಹ ಸುಟ್ಟು ಬೂದಿಯಾಗುವುದು. ಅವನು ಸಂಪಾದಿಸಿದ ಐಶ್ವರ್ಯವೆಲ್ಲಾ ಅರ್ಹ ಉತ್ತರಾಧಿಕಾರಿಗಳಿಲ್ಲವೆಂದು ರಾಜನ ಪಾಲಾಗುವುದು. ಅಗಲಲಾರದೆ ಅಗಲಿದ ಹೆಂಡತಿಯ ಮತ್ತೊಬ್ಬನ ಮನದನ್ನೆಯಾಗುವಳು.ಅಲ್ಲಿಗೆ ಸಂಸಾರಜೀವಿಯ ಒಡಲು ಒಡವೆ ಮಡದಿಯ ಕತೆ ಮುಗಿಯುವುದು. ಹೀಗೆ ಅಪಹಾಸದಲ್ಲಿ ಕೊನೆಯಾಗುವ ಬಾಳುವೆ ಯಾವನಾದರೊಬ್ಬ ಜೀವನ ಹಣೆಯಲ್ಲಿ ಬರೆದಿದ್ದರೆ ಅದು ಅವನ ಕರ್ಮದ ಫಲ, ನಶ್ವರವಾದುವನ್ನೇ ನಿತ್ಯವೆಂದು ನಂಬಿದ ಅವನ ಮೌಢ್ಯದ ಫಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು