ವಚನದ ಹುಸಿ, ನುಸುಳೆಂತು ಮಾಣ್ಬುದೆನ್ನಾ?
ಮನದ ಮರ್ಕಟತನವೆಂತು ಮಾಣ್ಬುದೆನ್ನಾ?
ಹೃದಯದ ಕಲ್ಮಷವೆಂತು ಮಾಣ್ಬುದೆನ್ನಾ?
ಕಾಯವಿಕಾರಕ್ಕೆ ತರಿಸಲುವೋದೆನು
ಎನಗಿದು ವಿಧಿಯೆ, ಕೂಡಲ ಸಂಗಮದೇವಾ?
Transliteration Vacanada husi, nusuḷentu māṇbudennā?
Manada markaṭatanaventu māṇbudennā?
Hr̥dayada kalmaṣaventu māṇbudennā?
Kāyavikārakke tarisaluvōdenu
enagidu vidhiye, kūḍala saṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 How will my lying and my sneaking cease ?
My apish tricks of mind ?
This heart's impurity ?
My body's passions hold me bound :
Is this to be my lot, O Lord
Kūḍala Saṅgama ?
Translated by: L M A Menezes, S M Angadi
Hindi Translation मेरे वचन की असत्यता, वंचकता कैसे छूटेगी?
मेरे मन का मर्कटत्व कैसे छूटेगा?
मेरे हृदय की मलिनता कैसे छूटेगी?
मैं काय- विकार से आकर्षित हुआ।
यह मेरा भाग्य है कूडलसंगमदेव?
Translated by: Banakara K Gowdappa
Telugu Translation నానుడుల కల్ల కడచుటెటులో!
నా యెడద మర్కటత్వము మాను టెటులో!
నా గుండె కుళ్లు తొలచు టెటులో :
కాయవికారమునకు లొంగిపోతి
ఇది నావిధియే కూడల సంగమదేవా!
Translated by: Dr. Badala Ramaiah
Tamil Translation பொய்யுரைத்துப் பிறழ்த லெனக்கென்று நீங்கும்?
மனத்தின் நிலையாமை எனக்கென்று நீங்கும்?
இதயத்தின் செயிர் எனக்கென்று நீங்கும்?
உடற்விகற்பத்தை நயந்தேனன்றோ
என் ஊழ்வினையோ கூடல சங்கம தேவனே?
Translated by: Smt. Kalyani Venkataraman, Chennai
Marathi Translation
वचनातील असत्य केव्हा दूर होईल?
मनाची मर्कटता केव्हा नष्ट होईल?
हृदयाची मलिनता केव्हा दूर होईल?
काया विकाराने मी त्रासलो आहे. माझे हेच दैव आहे का
कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಕಾಯ = ದೇಹ; ಮರ್ಕಟ = ಕೋತಿ; ಮಾಬು = ಬಿಡು;
ಕನ್ನಡ ವ್ಯಾಖ್ಯಾನ ಮಾತಿನಲ್ಲಿ ಸುಳ್ಳುತಳ್ಳಿ, ಮನಸಿನಲ್ಲಿ ಮಂಗತನ, ಹೃದಯದಲ್ಲಿ ಕಲ್ಮಶ-ಎಂದಿಗೆ ತೊಲಗುವುದು? ದೇಹದ ಈ ಉಪಾಧಿಗಳಿಗೆ ನಾನು ಬಂದಿಯಾದೆ-ಇನ್ನೆಂದಿಗೆ ಬಿಡುಗಡೆಯಾಗುವುದೆಂದು ಬಸವಣ್ಣನವರು ತಮ್ಮ ಮಾತು-ಮನಸ್ಸು-ಹೃದಯದ ದುಸ್ಥಿತಿಯನ್ನು ಕುರಿತು ಕೊರಗುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು