•  
  •  
  •  
  •  
Index   ವಚನ - 42    Search  
 
ಸಂಸಾರಹೇಯಸ್ಥಲ - ಮನಸ್ಸು
ಅಂಗದ ನೋಟವು ಸಿಂಗದ ಗಾತ್ರವು ಹಿಂಗದು ಮನದಲ್ಲಿ ನಾನಾ ವಿಕಾರವು ಬಂದಹನೆಂದರಿಯಲಿಕ್ಕಿಲ್ಲವಾಗಿ ಸಂದೇಹ ಬಿಡದು ಮುಂದುಗಾಣದು ಲೋಕ. ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ, ಕೂಡಲ ಸಂಗಮದೇವಾ.
Transliteration Aṅgada nōṭavu siṅgada gātravu hiṅgadu manadalli nānā vikāravu bandahanendariyalikkillavāgi sandēha biḍadu mundugāṇadu lōka. Benda māyakkan̄ji nim'ma marevokke, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My body's aspect is of lion girth : The passions of my mind persist. Not knowing I am one who came, Doubts cleave to me ; I cannot see the world ahead. In dread of burning Māyā, I Seek shelter in Thee, Lord Kūḍala Saṅgama ! Translated by: L M A Menezes, S M Angadi
Hindi Translation अंगाकृति सिंहाकृति है मन के नाना विकार नहीं छूटते; मैं आया हूँ –इस ज्ञान के अभाव में संदेह नहीं छूटता; लोक का भविष्य अदृश्य है । दुग्ध माया से डरकर भवदीय शरण में आया हूँ, कूडलसंगमदेव ॥ Translated by: Banakara K Gowdappa
Telugu Translation అంగపు చూపు; సింగారపు గాత్రము కృంగదు మనస్సున నానావికారము పుట్టితినను జ్ఞానములేదు సందేహము మానదు ముందు కానదు జగతిమాయకు వెఱచి, నీ మఱుగు సొచ్చితి కూడల సంగమదేవా! Translated by: Dr. Badala Ramaiah
Tamil Translation உடலின் வனப்பும் அரிமாவின் பொலிவும், நீங்காது மனத்தின் பற்பல விகற்பங்கள் வந்தேனென அறிவதுமிலை, ஐயமுமகலாது முன்னேறவும் உலகம் விடுமோ? வெந்த மாயைக்கஞ்சி உம் தஞ்சம் புகுந்தேன் கூடல சங்கம தேவனே. Translated by: Smt. Kalyani Venkataraman, Chennai
Marathi Translation मी दिसायला सिंहाप्रमाणे गंभीर आहे. पण माझ्या मनीचे नानाविकार दूर होत नाही. जन्माचे रहस्य समजले नाही, संदेह दूर झाला नाही. पुढचे काही दिसत नाही. जाळणाऱ्या मायेला भिऊन तुम्हाला शरण आलो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಸಿಂಗ = ಸಿಂಹ; ಹಿಂಗು = ಕುಗ್ಗು;
ಕನ್ನಡ ವ್ಯಾಖ್ಯಾನ ಶಿವಾಂಶದ ಆತ್ಮನು ದೇಹದ ಉಪಾಧಿಯಿಂದ ಜೀವನೆನಿಸಿ ತನ್ನ ಮೂಲ ನೆಲೆ ಬೆಲೆಯನ್ನೆಲ್ಲ ಮರೆತಿರುವನು. ಅವನ ಈ ದೇಹವಾದರೋ ತನ್ನ ಸ್ಥೌಲ್ಯದಿಂದಲೇ ಅವನಿಗೆ ಸಿಂಹಸ್ವಪ್ನವಾಗಿ ಅವನನ್ನು ಕಾಡುತ್ತಿದೆ. ಹೀಗೆ ಭಯ ಸಂಶಯ ಶೋಕ ಚಿಂತೆ ವಿಷಾದ ಮುಂತಾದ ಮನೋವಿಕಾರಗಳ ದಾಳಿಗೊಳಗಾಗಿ ಅವನು ದಿಕ್ಕು ತಪ್ಪಿದ್ದಾನೆ. ಎಂಥವನಿಗೆ ಎಂಥ ಗತಿ ? ಅವನು ಒಂದು ಸಲವಾದರೂ ಮೈಕೊಡವಿ ಮೇಲೆದ್ದು ತನ್ನೆತ್ತರವನ್ನು ತಾನು ಕಾಣಬಾರದೆ ? ಕಾಣಲಾರನು ! ಅವನಲ್ಲಿ ಸಂದೇಹ ಅಷ್ಟು ಆಳವಾಗಿ ನಟ್ಟಿದೆ, ಅವನ ಮುಂದೆ ಮಾಯೆಯ ಮಂಜಿನ ತೆರೆ ಅಷ್ಟು ದಟ್ಟವಾಗಿ ಕಟ್ಟಿದೆ. ಇದನ್ನೆಲ್ಲ ಪರಿಭಾವಿಸಿದ ಬಸವಣ್ಣನವರು-ಲೋಕದ ಜಂಜಡದ ಕಡೆ ತಮ್ಮ ಬೆನ್ನು ತಿರುಗಿಸಿ-ತಾವು ಶಿವನಿಗೆ ಶರಣಾಗತರಾದ ಒಂದು ಶುಭಮುರ್ಹೂತವನ್ನು ನೆನಪಿಸಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು