•  
  •  
  •  
  •  
Index   ವಚನ - 43    Search  
 
ಸಂಸಾರಹೇಯಸ್ಥಲ - ಇಂದ್ರಿಯಗಳು
ವಿಕಳನಾದೆನು ಪಂಚೇಂದ್ರಿಯಧಾತುವಿನಿಂದ; ಮತಿಗೆಟ್ಟೆನು ಮನದ ವಿಕಾರದಿಂದ; ಧೃತಿಗೆಟ್ಟೆನು ಕಾಯವಿಕಾರದಿಂದ, ಶರಣುವೊಕ್ಕೆನು, ಕೂಡಲ ಸಂಗಮದೇವಯ್ಯಾ.
Transliteration Vikaḷanādenu pan̄cēndriyadhātuvininda; matigeṭṭenu manada vikāradinda; dhr̥tigeṭṭenu kāyavikāradinda, śaraṇuvokkenu, kūḍala saṅgamadēvayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The strength of the five senses Has worn me down. The passions of my mind have borne My reason down. My courage has been shattered by The passions of my flesh. Therefore, O Lord Kūḍala Saṅgama, I surrender to Thee. Translated by: L M A Menezes, S M Angadi
Hindi Translation मैं विकल हुआ, पंचेंद्रिय धातु से, मतिहीन हुआ,मनो विकार से, धृतिहीन हुआ, काय – विकार से, कूडलसंगमदेव, तव शरण में आया हूँ ॥ Translated by: Banakara K Gowdappa
Telugu Translation వికలుడై తి పంచేంద్రియ ధాతువులచే; మతిచెడె మనోవికారమున; ధృతిచెడె కాయవికారమున; శరణు జొచ్చితి కూడల సంగమదేవా! Translated by: Dr. Badala Ramaiah
Tamil Translation முழுமையற்றேன் ஐம்புலன் ஏழுமூலக் கூறினாலையனே, அறிவிழந்தேன், மனவிகற்பத்தினாலே உரனிழந்தேன் உடற்விகற்பத்தினாலே தஞ்சம்புக்கேன், கூடல சங்கம தேவனே. Translated by: Smt. Kalyani Venkataraman, Chennai
Marathi Translation भ्रमीत झालो पंचेद्रिये सप्तधातूमुळे, बुध्दीभ्रष्ट झाली मन विकारामुळे, मार्गभ्रष्ट झालो कायाविकारामुळे, शरण आलो माझी रक्षा करावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕಾಯ = ದೇಹ; ಧೃತಿ = ಧೈರ್ಯ; ಮತಿ = ಬುದ್ಧಿ; ವಿಕಳ = ಕೊರತೆ;
ಕನ್ನಡ ವ್ಯಾಖ್ಯಾನ ಪಂಚೇಂದ್ರಿಯಗಳ ತಾಪದಿಂದ ಕುದಿಗೊಂಡಾಗ,ಮನೋಘಾತದಿಂದ ಹುಚ್ಚೆದ್ದಾಗ, ಕಾಯ ವಿಕಾರದಿಂದ ಭೀತಿಪಟ್ಟಾಗ-ಯಾವನಾದರೊಬ್ಬ ಜೀವನು ಸಾಧಕನಾದುದೇ ಆದರೆ-ಆ ದುಸ್ಥಿತಿಯಲ್ಲೇ ಅಲ್ಲಾಡುತ್ತ ಆತ್ಮನಾಶಮಾಡಿಕೊಳ್ಳದೆ-ಆ ಕುದಿತದಿಂದ ತಿಳಿವಿಗೆ, ಹುಚ್ಚಿನಿಂದ ವೈರಾಗ್ಯಕ್ಕೆ ಭೀತಿಯಿಂದ ಭಕ್ತಿಗೆ ತನ್ನನ್ನು ಕರೆದೊಯ್ಯುವ ಶಿವಪಾದಗಳಿಗೆ ಶರಣಾಗುವನು.ಬಸವಣ್ಣನವರು ಮಾಡಿದ್ದೂ ಅದನ್ನೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು