ಮುನಿದೆಯಾದೊಡೆ ಒಮ್ಮೆ ಜರೆದೊಡೆ ಸಾಲದೆ?
ಅಕಟಕಟಾ! ಮದನಂಗೆ ಮಾರುಗೊಡುವರೇ?
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ,
ಕೂಡಲ ಸಂಗಮದೇವಾ?
Transliteration Munideyādoḍe om'me jaredoḍe sālade?
Akaṭakaṭā! Madanaṅge mārugoḍuvarē?
Hagege mārugoṭṭu ninnavaranoppisuvare,
kūḍala saṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Is it not enough
If, being angry, you chide me once ?
But must you, alas ! give me in sale
To Madana ? Must you sell
And make me over to the foe,
O Lord Kūḍala Saṅgama ?
Translated by: L M A Menezes, S M Angadi
Hindi Translation कुपित होने पर एक बार डाँटना पर्याप्त नहीं?
हाय, हाय, मुझे मदन के हाथ बेचना है?
कूडलसंगमदेव, स्वजनों को शत्रुओं के हाथ सौंपना है?
Translated by: Banakara K Gowdappa
Telugu Translation కోపమే రాగ ఒకసారి కసరరాదా?
కటకటా! తగునే మన్మధుని కిటులమ్మి వేయః
అమ్మి నీ వారిని పట్టి యిత్తువే పగవారికి?
కూడల సంగమదేవా!
Translated by: Dr. Badala Ramaiah
Tamil Translation சினமுறின் ஒருமுறை ஒறுத்தல் போதாதோ?
அடடா, காமனிடம் ஒப்புவிப்பதோ?
பகைவனிட மும்தொண்டனை ஒப்புவிப்பதோ
கூடல சங்க தேவனே.
Translated by: Smt. Kalyani Venkataraman, Chennai
Marathi Translation
राग येता एकदा , तया रागवावे
परी ना जाळावे, मदनापरी
कूडलसंगमदेवा! तुला जे आपुलवी
का स्वाधीन करावी, शत्रु हाती
अर्थ - राग आल्यास त्याला दरडावून शांत करता येईल. त्यापासून स्वतःला सावरणे शक्य आहे. रागात आपला सुंदर चेहरा किती कुरूप दिसतो हे आरशापुढे थांबून पाहा. रागामुळं मन बेचैन होते. बुद्धी आपल्या स्वतंत्र विचाराने कार्य करणं थांबविते. शिवाय रक्त जळते. रागाच्या भरात मनुष्य पशुवत बनतो. म्हणून राग येऊच देऊ नये लोकावर वचक बसविण्यासाठी प्रयत्न करणे, त्यासाठी शक्ती खर्ची घालणे, तंत्रमंत्राच्या आधारे स्वतः जळणे वा इतराना जाळणे हे योग्य नाही. राग लोभ आपलेच आहेत. त्यांचा स्वीकार करा. मन्मथा प्रमाणे जाळून टाकू नये. इतरानी आपल्यावर जरी रागावल्यास त्यांना आपलेच समजा. त्यांना एकदम शत्रुच्या हवाली करू नका. बदल्याच्या भावनेत पेटू नका. वा रागापासून पलायन करू नका. राग आल्यास त्यात न गुंतता ( Involve ) त्यातून बाहेर पडावे. व सान्निभावाने (Third party ) त्याच्याकडे पहावे. रागाला मनोरंजन समजून त्यांच्याकडे पाहावे. तुम्ही शांत राहिलेले पाहून ते तुमचे सच्चे मित्र होतील. व राग पळ काढेल.
Translated by Rajendra Jirobe, Published by V B Patil, Hirabaug, Chembur, Mumbai, 1983
रागावलो असता एकदाही रागावला का नाही?
अरे देवा, मदनाच्या हाती देणार?
शत्रूच्या हाती आपल्याला देणार कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಮದನ = ಮನ್ಮಥ; ಮಾರುಗೊಡು = ವಶಗೊಳ್ಳು;
ಕನ್ನಡ ವ್ಯಾಖ್ಯಾನ ಸಾಧಕನಾದವನು ತನ್ನ ಸಾಧನ ಮಾರ್ಗದಲ್ಲಿ ಒಮ್ಮೆ ಹಿಂದಕ್ಕೆ ಸರಿಯುವುದುಂಟು, ಒಮ್ಮೆ ಮುಂದುವರಿಯುವುದುಂಟು.ಹಿಂಜರಿತವೇ ಇಲ್ಲದೆ ಎಲ್ಲಾಗಳೂ ಮುಂದುವರಿಯುತ್ತಲೇ ಇರುವ ದಾರಿಯಾಗಲಿ ಧೈರ್ಯವಾಗಲಿ ಅವನಿಗೆ ದಕ್ಕಿರುವುದಿಲ್ಲ, ಈ ಹಿಗ್ಗಾಮುಗ್ಗದಲ್ಲಿ ತಪ್ಪುಗಳಾಗುವ ಸಾಧ್ಯತೆ ಇದ್ದೇ ಇದೆ.ತಪ್ಪಿತಸ್ಥನನ್ನು ದಂಡಿಸುವ ಅಧಿಕಾರಕ್ಕಿಂತ ತಿದ್ದುವ ಮಮತೆ ದೊಡ್ಡದು.ಆದ್ದರಿಂದ ತಮ್ಮಿಂದೇನಾದರೂ ತಪ್ಪುಗಳಾಗಿದ್ದರೆ ಆ ತಪ್ಪಿಗಾಗಿ ಶಿವನು ತಮ್ಮನ್ನು ಕಾಮನ ಗುಲಾಮ ಮಾಡಬಾರದೆಂದೂ, ಆಕ್ಷೇಪಿಸಿ ಬುದ್ಧಿ ಹೇಳಿದರೆ ಸಾಕೆಂದೂ-ಅಷ್ಟರಿಂದಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಾಗಿಯೂ ಬಸವಣ್ಣನವರು ಶಿವನಲ್ಲಿ ಮೊರೆಯಿಡುತ್ತಿರುವರು.
ಕಾಮನಿಗೆ ಶಿವನು ಶತ್ರುವೆಂಬ ಪೌರಾಣಿಕ ಹಿನ್ನಲೆಯಲ್ಲಿ –ಶಿವನ ಅಳಾದ ಬಸವಣ್ಣನವರು ಒಡೆಯನಾದ ಶಿವನ “ಶಿಕ್ಷೆಗೆ” ತಲೆಬಾಗಿಯಾರೇ ಹೊರತು-ಆ ತನ್ನೋಡೆಯನ ಶತ್ರುವಾದ ಕಾಮನ ಊಳಿಗವನ್ನೆಂದಿಗೂ ಸಹಿಸಲಾರರೆಂಬಂಥ ಅರ್ಥಚ್ಛಾಯೆಯು ಈ ವಚನದಲ್ಲಿದೆ.
ಶಿವಭಕ್ತನಾದವನು ಶಿವದ್ವೇಷಿಯಾದ ಕಾಮನ ವಿರುದ್ಧ ಹೋರಾಡುವುದು ಕರ್ತವ್ಯ-ಅದು ಬಿಟ್ಟು ಆ ಕಾಮನ ಬಂದಿಯೋ ಅನುಬಂಧಿಯೋ ಆಗುವುದು ದ್ರೋಹ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು