•  
  •  
  •  
  •  
Index   ವಚನ - 45    Search  
 
ಸಂಸಾರಹೇಯಸ್ಥಲ - ಇಂದ್ರಿಯಗಳು
ಆನೊಬ್ಬನು: ಸುಡುವರೈವರು! ಮೇಲೆ ಕಿಚ್ಚು ಘನ: ನಿಲಲುಬಾರದು! ಕಾಡ ಬಸವನ ಹುಲಿ ಕೊಂಡೊಯ್ವರೆ ಆರಯ್ಯಲಾಗದೆ, ಕೂಡಲ ಸಂಗಮದೇವಾ?
Transliteration Ānobbanu: Suḍuvaraivaru! Mēle kiccu ghana: Nilalubāradu! Kāḍa basavana huli koṇḍoyvare ārayyalāgade, kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I am but one; but five That keep me in the fire ! A mighty blaze besides, So that I hardly stand ! When a tiger is carrying off A forest bull, should you Not rescue it, O Lord Kūḍala Saṅgama ? Translated by: L M A Menezes, S M Angadi
Hindi Translation मैं अकेला, जलानेवाले पाँच हैं । ऊपर घोर अग्नि, रहना कठिन है! वन्य वृषभ को व्याघ्र ले जाय, तो रक्षा नहीं करनी है, कूडलसंगमदेव ? Translated by: Banakara K Gowdappa
Telugu Translation నేనొకడ కాలు రేవురు పైన మంటలెగ సె; నిలువరాదు కాడు బసవని పులిగొనిపోవ; చూడదగునే కూడల సంగమదేవా! Translated by: Dr. Badala Ramaiah
Tamil Translation நானொருவன், சுடுவரைவர் மேலே அழல்மிகுதி நிற்கவியலுமோ, காட்டுப்பசுவை புலி கொண்டேகின் விடுவிக்கலாகாதோ, கூடல சங்கம தேவனே? Translated by: Smt. Kalyani Venkataraman, Chennai
Marathi Translation मी एकटा, जाळणारे पाचजण. डोक्यावर अग्नी प्रखर, मला सहन होत नाही. भोळ्या वृषभाला वाघाने नेले तर वाचवू शकत नाही कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಕಿಚ್ಚು = ಬೆಂಕಿ; ಘನ = ಶ್ರೇಷ್ಠ;
ಕನ್ನಡ ವ್ಯಾಖ್ಯಾನ ಜೀವನು ಒಬ್ಬಂಟಿಗ-ಅವನನ್ನು ಬಾಧಿಸುವ ಕ್ಲೇಶಗಳು ಐದು : ಅವಿದ್ಯೆ-ಅಸ್ಮಿತೆ-ರಾಗ-ದ್ವೇಷ-ಅಭಿನಿವೇಶ, ಇವೈದೂ ಮನವೆಂಬ ನೀರು ತುಂಬಿರುವ ದೇಹವೆಂಬ ಕಡಾಯಿಯ ಅಡಿಯಲ್ಲಿ ಉರಿಯಾಗಿ ಉರಿದು ಒಳಗಿರುವ ಜೀವನನ್ನು ಕುದಿಸುತ್ತಿವೆ. ಆವಿದ್ಯಾಕ್ಲೇಶವೆಂದರೆ ನಿಜವನ್ನು ಮರೆಮಾಚಿ ವಿಜೃಂಭಿಸುವ ನಾಮರೂಪಾತ್ಮಕವಾದ ಮಾಯೆ, ಈ ಮಾಯೆಯೊಳಗೆ ದೇಹವೇ ತಾನೆಂದು ಭ್ರಮಿಸುವುದು ಅಸ್ಮಿತೆ,ಅಸ್ಮಿತಾಭಾವದಿಂದ ಇಂದ್ರಿಯ ವಿಷಯಗಳನ್ನು ಅನುಭವಿಸಲು ತಹತಹಿಸುವುದೇ ರಾಗ, ಈ ರಾಗವೀಡೇರಲು ಅಡ್ಡಿಯಾದರೆ ಉಂಟಾಗುವ ಅಸಹನಸ್ಥಿತಿಯೇ ದ್ವೇಷ-ಈ ಎಲ್ಲ ಆಮಿಷ ವರ್ತುಲವನ್ನು ತ್ಯಜಿಸಲಾರದ ಲಂಪಟತೆಯೇ ಅಭಿನಿವೇಶ. ಅಂದರೆ ಸುಳ್ಳನ್ನು ನಿಜವೆನ್ನುವ, ಸುಳ್ಳನ್ನೇ ತನ್ನ ಸರ್ವಸ್ವವೆನ್ನುವ, ಆ ಸುಳ್ಳನ್ನೇ ಒಳಗೊಳ್ಳುವ,ಸುಳ್ಳಿಗೆ ಅಡ್ಡಿಯಾದುದನ್ನೆಲ್ಲಾ ದ್ವೇಷಿಸುವ, ಸುಳ್ಳಿಗೇ ಬಿಡಿಸಲಾರದ ಬಂಧದಲ್ಲಿ ಬೆಸೆದುಕೊಂಡಿರುವ-ಈ ಐದು ಸ್ಥಿತಿಗಳೇ ಶಿವದತ್ತ ಪಯಣಹೊರಟ ಜೀವನನ್ನು ಸುಟ್ಟು ಬೂದಿಮಾಡುತ್ತಿರುವ ಕುಚಿತಾಗ್ನಿಗಳು. ಇಂಥ ಕ್ಲೇಶಾಗ್ನಿಗಳ ಮೇಲೆ ಶಿವನೊಲಿಯದ ಮಹಾಗ್ನಿಯೂ ಸೇರಿ ದಾವಾಗ್ನಿಯಾಗಿ ಆವರಿಸಿ ಬರುತ್ತಿದೆಯೆಂದೂ-ಅಲ್ಲದೆ ಮೃತ್ಯುವೆಂಬ ಹುಲಿ ಮೇಲೆ ಬಿದ್ದು ಕೊರಳಿಗೆ ಬಾಯಿಹಾಕಿ ಎಳೆದೊಯ್ಯುವಷ್ಟು ಹತ್ತಿರವಾಗಿದೆಯೆಂದೂ-ಅತ್ತ ಹುಲಿ ಇತ್ತ ಬೆಂಕಿಯೆಂಬಂಥ ಸಂಕಟವನ್ನು ತಾಳಲಾರನೆಂದೂ-ತಡ ಮಾಡದೆ ಬಂದು ರಕ್ಷಿಸಬೇಕೆಂದೂ ಬಸವಣ್ಣನವರು ಶಿವನಿಗೆ ಹುಯ್ಯಲಿಡುತ್ತಿರುವರು. ಈ ಸಂದರ್ಭದಲ್ಲಿ ಬಸವಣ್ಣನವರು ತಮ್ಮನ್ನು ಒಂದು “ಕಾಡು ಬಸವ”ನಿಗೆ ಹೋಲಿಸಿಕೊಂಡಿರುವರು, ಸಂಸಾರವೆಂಬ ಅರಣ್ಯದಲ್ಲಿ ಜೀವನು ಕಾಡುಬಸವನೇ. ಅವನಿಗೆ ರಕ್ಷಕನು ಶಿವನೊಬ್ಬನೇ-ಅವನೇ ಅಲ್ಲವೆ ಪಶುಪತಿ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು