•  
  •  
  •  
  •  
Index   ವಚನ - 47    Search  
 
ಸಂಸಾರಹೇಯಸ್ಥಲ - ಇಂದ್ರಿಯಗಳು
ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ? ಎಂತೋ ಶಿವಾಚಾರವೆನಗೆ ವೇದ್ಯವಪ್ಪುದಯ್ಯಾ? ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುವಡೆದೆನು ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ; ಪಂಚೇಂದ್ರಿಯ, ಸಪ್ತಧಾತು ಹಂಚುವರಿ ಮಾಡಿ ಕಾಡಿಹುವಯ್ಯಾ! ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ ಕೂಡಲ ಸಂಗಮದೇವಾ, ನಾನೇವೆನೇವೆನಯ್ಯಾ.
Transliteration Entō śivabhaktiya nānupamisuvenayyā? Entō śivācāravenage vēdyavappudayyā? Kāma, krōdha, lōbha, mōhadinda kaṭṭuvaḍedenu hasivu, tr̥ṣe, vyasanadinda kudiyuttiddēne; pan̄cēndriya, saptadhātu han̄cuvari māḍi kāḍ'̔ihuvayyā! Ayyā, ayyā, enna huyyala kēḷayyā kūḍala saṅgamadēvā, nānēvenēvenayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Lord, how shall I describe The Śiva faith ? How understand its discipline ? Lust, anger, greed, Infatuation led me astray ; Hunger and thirst and vices keep Me simmering ... I'm plagued, I'm broken into shards By the five senses, seven elements ! Lord, hearken to my cry ! What shall I do, what shall I, Lord Kūḍala Saṅgama ? Translated by: L M A Menezes, S M Angadi
Hindi Translation मैं शिवभक्ति की उपमा कैसे दूँ ? शिवाचार मुझे कैसे वेद्य होगा, प्रभू? मैं काम, क्रोध, लोभ, मोह, मद, मत्सर से बंधा हूँ । क्षुधा, तृषा, व्यसन से उबल रहा हूँ । पंचेंद्रिय और सप्त धातु मुझे विच्छिन्न कर सताते हैं , स्वामी, मेरी व्यथा सुनो, कूडलसंगमदेव मैं क्या कर सकता हूँ? Translated by: Banakara K Gowdappa
Telugu Translation శివభక్తి నేగతి నుపమింతునయ్యా; శివాచార నాకు వేద్యమగునయ్యా? కామక్రోధలోభ మోహమ్ములనే కటువడితి; ఆకలి, దప్పుల బాధచే నేనటమటింతు నయ్యా: పంచేంద్రియ సప్త ధాతువు లే కుండా డ్పించునయ్యా నను త్రుంచి త్రుంచి; అయ్యా అయ్యా నా మొఱలాలింపుమయ్యా! కూడల సంగమదేవా! నేనేమి సేతునయ్యా ? Translated by: Dr. Badala Ramaiah
Tamil Translation எங்ஙனம் சிவபக்தியை நான் ஒப்பிடுவே னையனே எங்ஙனம் சிவநெறி எனக்குக் கைகூடுவ தையனே? இன்பம், சினம், பேரவா, அவா, வெறி, அழுக்காறு இவற்றால் கட்டுண்டே னையனே. பசி, வேட்கை இன்னலினாற் கனன்றிருந்தே னையனே. ஐம்பொறிகளும், ஏழு மூலக் கூறுகளும் என்னைப் பொடித்துத் துயரீந்தன ஐயனே. ஐயனே, ஐயனே, என் அரற்றலைக் கேளாய் ஐயனே கூடல சங்கம தேவனே, நானென் செய்வே னையனே? Translated by: Smt. Kalyani Venkataraman, Chennai
Marathi Translation शिवभक्तीला मी कसे आपलेसे करावेदेवा ? कसा शिवाचार माझ्या अंगी येईल देवा ? काम, क्रोध, लोभ, मोह, मद, मत्साराने मला बांधले आहे. भूक, तहान, व्यसनाने तापलो आहे. पंचेंद्रिये, सप्तधातू छिन्न-विछिन्न करुन त्रास देतात देवा. देवा, देवा, माझी हाक ऐका, कूडलसंगमदेवा मी काय करु ? Translated by Shalini Sreeshaila Doddamani
ಶಬ್ದಾರ್ಥಗಳು ಉಪಮಿಸು = ; ತೃಷೆ = ನೀರಡಿಕೆ; ವೇದ್ಯ = ತಿಳುವಳಿಕೆ; ಸಪ್ತಧಾತು = ದೇಹದಲ್ಲಿರುವ ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ಶುಕ್ಲವೆಂಬ ಏಳು ಧಾತುಗಳು ; ಹುಯ್ಯಲ = ಗಲಟೆ/ಬೊಬ್ಬೆ;
ಕನ್ನಡ ವ್ಯಾಖ್ಯಾನ ಶಿವಭಕ್ತಿ-ಶಿವಾಚಾರ ಎಂಬವು ಒಬ್ಬನಿಗೆ ಅಳವಟ್ಟಿತೆಂಬುದು ಅಷ್ಟು ಸುಲಭವಲ್ಲ. ಅವನು ಕಾಮ ಕ್ರೋಧಾದಿ ಸಮಾಜವಿರುದ್ಧ ಗುಣಗಳನ್ನೂ, ಹಸಿವು, ತೃಷೆ, ವ್ಯಸನ ಮುಂತಾದ ಆತ್ಮವಿರುದ್ದ ಗುಣಗಳನ್ನೂ ಮೀರಿದವನಾಗಿರಬೇಕು. ಆ ಸಾಧಕನು ತನ್ನ ಮೇಲೆ ಮರಳಿ ಮರಳಿ ದಾಳಿಮಾಡುವ ಸ್ವಾರ್ಥಲಂಪಟತೆಯ ಪಂಚೇಂದ್ರಿಯಗಳನ್ನೂ, ಮೇಲು ಕೀಳೆಂಬ ಜಾತಿಬುದ್ದಿಯನ್ನು ಹುಟ್ಟಿಸುವ ಸಪ್ತಧಾತುಗಳನ್ನೂ ನಿಗ್ರಹಿಸುತ್ತಿರಬೇಕು. ಅವನು ಆ ಸಂಬಂಧವಾಗಿ ಗಳಿಸಿದ ವಿಜಯಕ್ಕೆ ಸಮಪ್ರಮಾಣದಲ್ಲಿ ಮಾತ್ರ ಶಿವಭಕ್ತಿ ಮತ್ತು ಶಿವಾಚಾರಗಳನ್ನು ತನ್ನದಾಗಿಸಿಕೊಳ್ಳುತ್ತಿರುವನು. ಬಸವಣ್ಣನವರು ಮಾಡಿದ ಇಂಥ ಆತ್ಮಸಂಗ್ರಾಮದ ದುರ್ಭೇದ್ಯ ಘಳಿಗೆಗಳಲ್ಲಿ ಮನಸ್ಸನ್ನು ಘಟ್ಟಿ ಮಾಡಿದ ಸಂದರ್ಭವಿದು. ಇಲ್ಲಿ ನಿರಾಶೆಗಿಂತ ಹಂಬಲ ಮೇಲುಗೈಯಾಗಿರುವುದನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು