•  
  •  
  •  
  •  
Index   ವಚನ - 48    Search  
 
ಸಂಸಾರಹೇಯಸ್ಥಲ - ಮನೋವಿಕಾರ
ಕಾಯವಿಕಾರ ಕಾಡಿಹುದಯ್ಯಾ ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯವಿಕಾರ ಸುಳಿವುದಯ್ಯಾ ! ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ, ಸಿಲುಕಿಸದಿರಯ್ಯಾ ಅನ್ಯ ಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ ಕೂಡಲ ಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.
Transliteration Kāyavikāra kāḍ'̔ihudayyā manōvikāra kūḍ'̔ihudayyā. Indriyavikāra suḷivudayyā! Suḷivinoḷage suḷiyuttaliddēne, silukisadirayyā an'ya cittavirisadirayyā, nim'ma cittavirisayyā. Anupamasukhasārāyaśaraṇaralli kūḍala saṅgamadēvayyā, idane bēḍuvenayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album : Nudidante Nadeve, Singer : Sri M Thottappa Uthanghi, Music : Sri M Thottappa Uthanghi, M.S Maruthi Label : Ashwini Audio
Art
English Translation The temptations of my body torment me! The desires of my mind trouble me! The cravings of my senses entangle me! I am caught in this endless whirlpool of cravings, Let me not get trapped, O Lord! Let my mind not go astray, Let it be fully absorbed in You! I seek nothing but this— Amidst the matchless, blissful company of Your devotees, O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 The body's passions plague me, Lord ; The passions of the mind are leagued: The sensual passions whirl about ! I am eddying in an eddy - Lord, Let me not be engulfed therein ! Make me not mind aught else But thee, O Lord ! This only I beg thy Śaraṇās - The matchless essence of the Bliss, O Lord Kūḍala Saṅgama ! Translated by: L M A Menezes, S M Angadi
Hindi Translation काय-विकार सताते हैं । मनो विकार योग देते हैं, इंद्रिय विकार मंडराते हैं मैं भँवर में चक्कर खा रहा हूँ मुझे मत उलझाओ देव, अन्य मन मत बनाओ त्वल्लीन मन बनाओ ॥ अनुपम सुख सार निलय शरणों से मैं यही प्रार्थना करता हूँ कूडलसंगमदेव ॥ Translated by: Banakara K Gowdappa
Telugu Translation కాయవికారము గారించునయ్యా; మనోవికారము మఱగించునయ్యా; ఇంద్రియవికారము నన్నేర్చునయ్యా, సుడుల నడుమ సురిగిపోవుచుంటి, తగులనీకయ్య పరుల చిత్తమంటనీకయ్యా; నీ యనుపమ సుఖసారులు శరణుల నామది నిలుపుమయ్యా ఇదేవేడెద కూడల సంగయ్యా! Translated by: Dr. Badala Ramaiah
Tamil Translation உடற் விகற்பம் அலைக்கிற தையனே! மன விகற்பம் கூடியுள தையனே! புலன் விகற்பம் சூழ்ந்துள தையனே! சுழலினுள்ளே சுழல்கிறேன் சிக்க வையாதிரு மையனே, வேற்றெண்ணத்தைக் களைவாய் ஐயனே, உன் எண்ணமதை யிடுவாயையனே! இணையிலா துணிபொருள் மெய்யடியாரிடம் கூடல சங்கம தேவனே, இதனையே யிறைஞ்சுகிறே னையனே. Translated by: Smt. Kalyani Venkataraman, Chennai
Marathi Translation कायविकार त्रास देत आहे देवा. मनोविकार भरले आहे देवा. इंद्रियविकाराने वेढलो आहे देवा, या भोवऱ्यात सापडलो आहे, वाचवा देवा ! चित्त विचलीत होऊ देवू नको, तव स्मरणात राहू दे देवा. अनुपम सुखी सुज्ञानी शरणसंगात ठेवणे. हेच मागणे आपल्याकडे मागतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅನುಪಮ = ಹೋಲಿಕೆ ಇಲ್ಲದ; ಕಾಯ = ದೇಹ; ಚಿತ್ತ = ಮನಸ್ಸು; ಸಾರಾಯ = ತಿರುಳು/ನಿಜತತ್ತ್ವ; ಸುಳಿವು = ಗುರುತು;
ಕನ್ನಡ ವ್ಯಾಖ್ಯಾನ ಹೊಟ್ಟೆ ತುಂಬಿದರೆ ಸಾಕೆಂಬ ಕಾಯವಿಕಾರವೇ ಮಹಾನದಿಯಾಗಿ-ಅದು ಕಾಮಕ್ರೋಧಾದಿ ಮನೋವಿಕಾರವೆಂಬ ಉಪನದಿಗಳೊಡನೆ ಕೂಡಿಕೊಂಡು, ಶಬ್ದ, ಸ್ಪರ್ಶ, ರೂಪ ರಸ ಮುಂತಾದ ಪಂಚೇಂದ್ರಿಯ ವಿಷಯಗಳೆಂಬ ಮಡುಗಳಲ್ಲಿ ಸುಳಿಸುತ್ತಿ ಹರಿಯುತ್ತಿರುವ ಈ ಸಂಸಾರಪ್ರವಾಹದಲ್ಲಿ ಈ ಜೀವ ಸಿಕ್ಕಿಸಾಯಬಾರದೆಂಬುದೇ ಬಸವಣ್ಣನವರ ಆಶಯ. ಈ ಹುಚ್ಚು ಹೊಳೆಯಲ್ಲಿ ಯಾರಾಗಲಿ ಕೊಚ್ಚಿಹೋಗದಿರಬೇಕಾದರೆ-ಚಿತ್ತದಲ್ಲಿ ಶಿವನನ್ನು ದೃಢವಾಗಿ ಧರಿಸಬೇಕು. ಹಾಗಲ್ಲದೆ ಭಂಡತನದ ಅಲ್ಪಜೀವನಕ್ಕೆ ಆಶೆಬಟ್ಟರೆ ಈ ಮಾಯಾಪ್ರವಾಹದಲ್ಲಿ ಕೊಚ್ಚಿ ಹೋಗಿ ಯಾವುದೋ ಕೊಚ್ಚೆಯ ತೀರದಲ್ಲಿ ಹೆಣವಾಗಿ ತೇಲುವುದು ತಪ್ಪಿದ್ದಲ್ಲ. ಹೀಗೆ ಅತಿಚೇಷ್ಟೆಯಿಂದ ಪ್ರಾರಂಭವಾಗಿ ನಿಶ್ಚೇಷ್ಟೆಯಲ್ಲಿ ಕೊನೆಗೊಳ್ಳುವ ವ್ಯರ್ಥಜೀವನ ತಮಗೆ ಒದಗದಿರಲೆಂದು ಶಿವನಲ್ಲಿಯೂ ಶಿವಶರಣರಲ್ಲಿಯೂ ಆ ಬಸವಣ್ಣನವರು ಮೊರೆಯಿಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು