ಬಂದ ಯೋನಿಯನರಿದು ಸಲಹೆನ್ನ, ತಂದೆ
ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು
ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು!
ಎನ್ನ ತಂದೆ ಕೂಡಲ ಸಂಗಮದೇವಾ;
ಇವ ಮಾಣಿಸು, ನಿಮ್ಮ ಧರ್ಮ!
Transliteration Banda yōniyanaridu salahenna, tande
benda manavenna gatigeḍisi kāḍittu
benda manavenna matigeḍisi kāḍittu!
Enna tande kūḍala saṅgamadēvā;
iva māṇisu, nim'ma dharma!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Know thou the womb that I came through
And save me, Father !
My feverish mind obstructs my way
And plagues me ;
My feverish mind obscures my reason
And plagues me !
O Father mine, Lord Kūḍala Saṅgama,
Show me thy mercy and
Make these things cease !
Translated by: L M A Menezes, S M Angadi
Hindi Translation हे परम पिता, मेरी आगत योनि जान मेरी रक्षा करो,
मेरा तप्त मन पथभ्रष्ट कर सताता है ।
मेरा तप्त मन मतिभ्रष्ट कर सताता है ।
मेरे पिता कूडलसंगमदेव, इनसे मुक्त करो, दया करो ॥
Translated by: Banakara K Gowdappa
Telugu Translation పుట్టిన పట్టు దెలిపి కాపాడుమో తండ్రీ!
పెట్టిన మది నాగతి చెఱచి గారించు;
చిట్లిన మనసు నామతి చెఱచి గారించు;
అయ్యా! కూడల సంగమ దేవయ్యా;
ఈవ్యధల మాన్పుట నీ ధర్మమయ్యా!
Translated by: Dr. Badala Ramaiah
Tamil Translation வந்தயோனியினை யறிந்தெனைப் பேணுவாய் தந்தையே,
வெந்தமனமெனை நிலைகெடுத் தல்லலை யீந்தது,
வெந்த மனமெனை அறிவழித் தல்லலை யீந்தது,
என் தந்தையே, கூடல சங்கம தேவனே, தவிர்ப்பது உம் அறம்.
Translated by: Smt. Kalyani Venkataraman, Chennai
Marathi Translation
या जन्मात माझे पालन करा देवा.
तप्त मनाने पथ-भ्रष्ट केले, तप्त मनाने मती-भ्रष्ट केले.
माझे पिता कूडलसंगमदेवा,
मज दूर करणे आपला धर्म.
Translated by Shalini Sreeshaila Doddamani
ಶಬ್ದಾರ್ಥಗಳು ಮತಿ = ಬುದ್ಧಿ; ಮಾಣಿಸು = ಬಿಡು; ಯೋನಿ = ಜನನೇಂದ್ರಿಯ;
ಕನ್ನಡ ವ್ಯಾಖ್ಯಾನ ಮೀನಾಗಿ ಮೊಸಳೆಯಾಗಿ ಹಾವಾಗಿ ಹದ್ದಾಗಿ ನಾಯಿ ನರಿಯಾಗಿ ಏನೇನಾಗಿ ಜನ್ಮಜನ್ಮಾಂತರಗಳಲ್ಲಿ ತಲ್ಲಣಿಸಿ ಮಾನವನಾಗಿ ಬಂದಾಗಲೂ ನಾನು ನಾನಾಗಲಿಲ್ಲ. ಶಿವನೇ, ನಾನಿನ್ನು ನೀನಾಗುವುದೆಲ್ಲಿ? ಹಿಂದಿನ ಜನ್ಮಗಳಲ್ಲಿ ನನ್ನನ್ನು ದಾರಿತಪ್ಪಿಸಿ ಭಂಗಪಡಿಸಿದ್ದು ಅಪ್ರಬುದ್ಧವಾದ ಈ ನನ್ನ ಮನವೇ. ಈಗಲಾದರೂ ತಿಳಿದು ಸರಿದಾರಿ ಹಿಡಿದೇನೆಂದರೆ ಮತಿಗೆಡಿಸುತ್ತಿರುವುದು ದೃಢವಿಲ್ಲದ ಈ ನನ್ನ ಮನವೇ.
ಶಿವನೇ, ಈ ಹಗರಣವನ್ನು ನಿಲ್ಲಿಸಿ-ನಾನು ಗಂಭೀರವಾದ ನಿಜಾನಂದ ನೈಜದಲ್ಲಿ ನಿಲ್ಲುವಂತೆ ಮಾಡು, ನನ್ನ ವಿಕಲ್ಪಗಳೆಲ್ಲಾ ನೀಗಿಹೋಗಿ ಶಿವಸಂಕಲ್ಪವೇ ತೇರ್ಗಡೆಯಾಗಲಿ-ಎಂದು ಹಾರೈಸುತ್ತಿರುವರು ಶ್ರೀ ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು