•  
  •  
  •  
  •  
Index   ವಚನ - 52    Search  
 
ಸಂಸಾರಹೇಯಸ್ಥಲ - ಅಸಹಾಯಕತೆ
ಕೆಸರಲ್ಲಿ ಬಿದ್ದ ಪಶುವಿನಂತಾನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನಯ್ಯಾ. ಅಯ್ಯಾ! ಆರೈವರಿಲ್ಲ, ಅಕಟಕಟಾ ! ಪಶುವೆಂದೆನ್ನ ಕೂಡಲ ಸಂಗಮದೇವಾ ಕೊಂಬ ಹಿಡಿದೆತ್ತುವನ್ನಕ್ಕ!
Transliteration Kesaralli bidda paśuvinantānu desedesege bāya biḍuttiddēnayyā. Ayyā! Āraivarilla, akaṭakaṭā! Paśuvendenna kūḍala saṅgamadēvā komba hiḍidettuvannakka!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Provided to YouTube by Mars Inc Kesaralli Bidda · Ambayya Nuli Vachana Naada ℗ Akash Audio Released on: 2022-05-21
English Translation 2 Like a cow fallen into a quagmire I make mouths at this corner and that, no one to look for me or find me till my lord sees this beast and lifts him out by the horns.

Translated by: A K Ramanujan
Book Name: Speaking Of Siva
Publisher: Penguin Books
----------------------------------
Like a beast fallen into a bog, I gasp this way and that ... O Lord, unless you lift Me, a poor creature, by the horns, There's none, alas ! to rescue me ! Translated by: L M A Menezes, S M Angadi

Hindi Translation पंक में पडे दीन पशु की भाँति, प्रति दिशा में मुँह बाकर हाँफता हूँ, हाय, हाय, कोई रक्षक नहीं जब तक कि पशु जान मुझे कूडलसंगमदेव सींग पकड नहीं उठाते ॥ Translated by: Banakara K Gowdappa
Telugu Translation ఋరదలో బడు పశువు రీతి దిక్కు దిక్కుల చూచుచు నోరు తెరచుచుంటినయ్యా అయ్యా చూచువారులేరు నను; కటకటాని! పళువని కొమ్ముపట్టి యెత్త నందాక అంగలార్చుచుంటి సంగయ్య నన్నెత్తు నందాక. Translated by: Dr. Badala Ramaiah
Tamil Translation சேற்றிலே விழுந்த ஆவினைப் போல நான் திசைதோறும் அழைக்கிறேன். கரையேற்றுவாரில்லை, அடடா, பசுவென்றென்றைக் கூடல சங்கம தேவன் கொம்பு பற்றிக் கரையேற்றும் வரை. Translated by: Smt. Kalyani Venkataraman, Chennai
Marathi Translation दलदलीत अडकलेल्या पशुप्रमाणे मी सर्व दिशांना मदत मागत आहे देवा. कोणाला ऐकूच जात नाही अरेरे देवा ! कूडलसंगमदेवा, पशुप्रमाणे शिंग धरुन मला बाहेर काढेपर्यंत. Translated by Shalini Sreeshaila Doddamani
ಶಬ್ದಾರ್ಥಗಳು ಆರೈವ = ರಕ್ಷಿಸು; ದೆಸೆ = ದಿಕ್ಕು;
ಕನ್ನಡ ವ್ಯಾಖ್ಯಾನ ಕಡಿದಾದ ಜಾಗದಲ್ಲಿ ಮೇಯುತ್ತಿದ್ದ ಹಸುವೊಂದು ಕಾಲುಜಾರಿ ಕೆಳಗಿರುವ ಕೆಸರಿನ ಹೊಂಡಕ್ಕೆ ಬಿದ್ದರೆ-ಅದು ಮಾಡುವುದೇನು? ಬೆನ್ನಡಿಯಾಗಿ ಬಿದ್ದುದರಿಂದ ಎದ್ದು ಬರಲಾರದೆ ಕಾಲುಗಳನ್ನು ಬಡಿಯುತ್ತ-ಬಡಿದಷ್ಟೂ ಆಳವಾಗಿ ಮೈಯೆಲ್ಲಾ ಹೂತುಹೋಗಿ ತಲೆ-ಕೊಂಬು ಮಾತ್ರ ಮೇಲಾಗಿರುವುದು, ಅಂಬೆ ಅಂಬೆ ಎಂದು ಅರಚುತ್ತಿರುವುದು. ಆ ದುರ್ದೆಶೆಯಲ್ಲಿ ಆ ಬಡಜೀವವನ್ನು ಯಜಮಾನನೇ ಅಲ್ಲ-ಕಂಡವರು ಯಾರಾದರೂ ಬಳಿಬಂದು ಅದರ ಕೊಂಬು ಹಿಡಿದು ಎತ್ತಬೇಕು. ಅದೇ ಕೊಂಬಿನಲ್ಲೇ ಅದು ಯಾರನ್ನಾದರೂ, ಅಥವಾ ಆ ಎತ್ತಲು ಬಂದವನನ್ನೇ ಹಿಂದೆ ಒಂದು ಸಲ ಹಾದಿರಲೂಬಹುದು. ಅದರೂ ಅದರ ತಪ್ಪನ್ನು ಮರೆತು ಅದಕ್ಕೆ ಪ್ರಾಣ ದಾನ ಮಾಡಬೇಕಾದ್ದು ಬಲ್ಲಿದರ ಕರ್ತವ್ಯ ಎಂದು ಮುಂತಾಗಿ ಬಸವಣ್ಣನವರು ತಮ್ಮನ್ನೊಂದು ಪಶುವಿಗೆ ಹೋಲಿಸಿಕೊಂಡು ಶಿವನಿಗೆ ಶಿವಶರಣರಿಗೆ ಮೊರೆಯಿಡುತ್ತಿರುವರೆಂಬಂತಿರುವ ಈ ವಚನದ ಆರ್ತಧ್ವನಿ-ದಿಕ್ಕುತಪ್ಪಿದ ಮತ್ತು ದಿಕ್ಕಿಲ್ಲದ ಪತಿತರ ಆರ್ತನಾದವಾಗಿ ಪ್ರತಿಧ್ವನಿಸುತ್ತಿರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು