ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
`ಅಂಬೇ, ಅಂಬೇ' ಎಂದು ಕರೆಯುತ್ತಲಿದ್ದೇನೆ;
`ಅಂಬೇ, ಅಂಬೇ' ಎಂದು ಒರಲುತ್ತಲಿದ್ದೇನೆ
ಕೂಡಲ ಸಂಗಮದೇವಾ `ಬಾಳು ಬಾಳೆಂಬನ್ನಕ್ಕ.
Transliteration Aḍaviyoḷage holabugeṭṭa paśuvinante
`ambē, ambē' endu kareyuttaliddēne;
`ambē, ambē' endu oraluttaliddēne
kūḍala saṅgamadēvā `bāḷu bāḷembannakka.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Like a beast that has lost its way
Within a wood, I low and call ;
I cry and low, until, O Lord
Kūḍala Saṅgama, you say,
'Live ! Live !'
Translated by: L M A Menezes, S M Angadi
Hindi Translation वन के पथभ्रष्ट पशुवत् न पशुसा।
‘अंबा, अंबा’ पुकारता हूँ,
‘अंबा, अंबा’ चिल्लाता हूँ,
कूडलसंगमदेव के ‘जीते रहो’ कहने तक ॥
Translated by: Banakara K Gowdappa
Telugu Translation అడవిలో దారి దప్పిన పశువురీతి;
అంబా; అందా; యని అఱ......చుంటినయ్యా
సంగయ్య భయములేదు లేదనునందాక!
సముద్రమందున్న చిప్పవలె నోర్విడుచుచుంటినయ్యా!
Translated by: Dr. Badala Ramaiah
Tamil Translation அடவியிலே வழிதவறிய பசுவினைப் போல
“அம்மா அம்மா” என அழைக்கின்றேன்;
“அம்மா அம்மா” என ஓலமிடுகிறேன்;
கூடல சங்கம தேவன் “வாழி வாழி” என்னும் வரையிலே.
Translated by: Smt. Kalyani Venkataraman, Chennai
Marathi Translation
चुकलेले पाडस, भटकते जंगलात
हंबा हंबा म्हणत, हंबरडे
ऐसी माझी गत, तरी हाक मारीन
आर्त हाक ऐकून, देशीना ओ
जगत रहा कानी, नच पड़े जोवर
हंबरडे तोवर चालू राही
म्हणू कूडलसंगमदेवा ! देशी होकार मला
विश्वास मनाला, खासा वाटे
अर्थ - आईच्या शोधात जंगलात वाट मिळेल त्या मार्गाने हंबरडत जाणाऱ्या पाडसाप्रमाणे माझी भटकंती चालू आहे चालता चालता तुला आर्त हाक मारीत आहे. तुला बोलावीत आहे. जोवर तुझ्याकडून प्रतिसाद मिळणार नाही तोवर माझं हाक मारणे चालूच राहील. आणि तू कधीना कधी माझ्या हाकेला प्रतिसाद दिल्याशिवाय राहणार नाही याची मला पूर्ण खात्री आहे.
Translated by Rajendra Jirobe, Published by V B Patil, Hirabaug, Chembur, Mumbai, 1983
जंगलात भटकणाऱ्या पशुप्रमाणे
हंबा-हंबा म्हणून बोलवित आहे.
हंबा-हंबा म्हणून हाक मारीत आहे.
कूडलसंगमदेव घाबरु नको म्हणेपर्यंत.
Translated by Shalini Sreeshaila Doddamani
ಶಬ್ದಾರ್ಥಗಳು ಅಂಬೆ = ತಾಯಿ; ಒರಲು = ಕೂಗಿಕೊಳ್ಳು; ಹೊಲಬುಗೆಟ್ಟ = ದಾರಿತಪ್ಪಿದ ;
ಕನ್ನಡ ವ್ಯಾಖ್ಯಾನ ಕಾಡಿನಲ್ಲಿ ಮೇಯುತ್ತ ಮೇಯುತ್ತ-ಅಲ್ಲಿ ಹಸುರಾಗಿದೆ, ಅಲ್ಲಿಂದತ್ತ ಅಚ್ಚ ಹಸುರಾಗಿದೆ,ಇನ್ನೂ ಅಲ್ಲಿಂದಾಜೆಗೆ ಹುಲುಸಾಗಿದೆ ಎನ್ನುತ್ತ-ಒಡೆಯನಿಂದ ದೂರದೂರವಾಗಿ ಹೋಗುವ ದನಕರು ಹುಲಿಯ ಪಾಲಾಗುತ್ತದೆಂಬುದನ್ನು ಎಲ್ಲರೂ ಬಲ್ಲರು.
ವಿಷಯಶ್ರೇಣಿಗಳು ಸ್ತರಸ್ತರವಾಗಿ ನಿಬಿಡಾತಿನಿಬಿಡಗೊಳ್ಳುವ ಈ ಸಂಸಾರಾರಣ್ಯದಲ್ಲಿ ಕೂಡ-ಅಲ್ಲಿ ಹೆಣ್ಣಿನ ಮೋಹಕವಾದ ರೂಪಿದೆ, ಮತ್ತಲ್ಲಿ ಅನರ್ಘ್ಯವಾದ ಹೊನ್ನಿನ ಹೊಳಪಿದೆ, ಅಲ್ಲಿಂದಾಕಡೆ ದಣ್ಣನೆ ದಣಿಸುವ ಮಣ್ಣಿನ ಭೋಗೋಪಭೋಗವಿದೆಯೆನ್ನುತ್ತ-ಅಲ್ಲಿಂದಲ್ಲಿಗೆ ಶಿವನಿಂದ ದೂರವಾಗಿ ಲಾಲಸೆಯ ಗಹನದಲ್ಲಿ ನುಗ್ಗಿದರೆ-ಹೊಂಚುಹಾಕುತ್ತಿರುವ ಕಷ್ಟಕಾರ್ಪಣ್ಯಗಳ ದುಷ್ಟವ್ಯಾಘ್ರನ ಬಾಯಿಗೇ ತುತ್ತಾಗುವೆವೆಂಬುದನ್ನು ಯಾರೂ ಅರಿಯರು.
ಸವಿದಷ್ಟೂ ಹಿಂಗದ ಹಸಿವೆಯನ್ನೂ, ಈಂಟಿದಷ್ಟೂ ಆರದ ನೀರಡಿಕೆಯನ್ನೊ, ತಿಕ್ಕಿದಷ್ಟೂ ತೀರದ ತಿಮಿರವನ್ನೂ ಹುಟ್ಟಿಸುವ ಈ ಐಹಿಕ ಆಮಿಷದ ಮರುಮರೀಚಿಕೆಯ ಬೆನ್ನುಹತ್ತಿ ಏನೂ ದಕ್ಕದೆ-ಆದ ತೊಳಲಿಕೆಯಲ್ಲೇ, ಎದ್ದ ಉಬ್ಬಸದಲ್ಲೇ ಸತ್ತು-ಉತ್ತರೋತ್ತರ ಉತ್ತಮ ಸಾಧ್ಯತೆಗಳಿರುವ ಈ ಬಾಳನ್ನು ವ್ಯರ್ಥಮಾಡಬಾರದೆಂಬುದು ಈ ವಚನದ ಇಂಗಿತ.
ತಮ್ಮನ್ನು ಒಮ್ಮಿಂದೊಮ್ಮೆಗೇ ಹಿಡಿದು ಕಾಡುವ ಈ ಮಾಂಸಲ ವೃತ್ತಿಪ್ರವೃತ್ತಿಗಳನ್ನು ಸಾಧು ಗೊಳಿಸಿ ಆ ಮೂಲಕ ಅವನ್ನೆಲ್ಲ ಸೂಕ್ಷ್ಮವೂ ಅಗಾಧವೂ ಆದ ಶಿವಶಕ್ತಿಯಾಗಿ ಪರಿವರ್ತನಗೊಳಿಸಲು ಆ ಶಿವನ ಕೃಪಾಬಲ ತಮಗಾಗಲೆಂದು ಬಸವಣ್ಣನವರು ಹಂಬಲಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು