•  
  •  
  •  
  •  
Index   ವಚನ - 55    Search  
 
ಸಂಸಾರಹೇಯಸ್ಥಲ - ಅಸಹಾಯಕತೆ
ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತ್ತಿದ್ದೇನಯ್ಯಾ. ನೀವಲ್ಲದೆ ಮತ್ತಾರೂ ಎನ್ನನರಿವವರಿಲ್ಲ ನೋಡಯ್ಯಾ. ಕೂಡಲ ಸಂಗಮದೇವಾ ನೀವಲ್ಲದೊಳಕೆಂಬವರಿಲ್ಲಯ್ಯಾ.
Transliteration Samudradoḷagaṇa simpinante bāya biḍuttiddēnayyā. Nīvallade mattārū ennanarivavarilla nōḍayyā. Kūḍala saṅgamadēvā nīvalladoḷakembavarillayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 An oyster in the sea, I gape and gasp... Lo, save thou, there is none Who knows me, Lord Kūḍala Saṅgama, Besides thee there is none To take me to his heart ! Translated by: L M A Menezes, S M Angadi
Hindi Translation सागर – सीप - सम मुँह बाए ताकता हूँ ! देव देव तुम्हारे सिवा मुझे जाननेवाला कोई नहीं; कूडलसंगमदेव, तुम्हारे सिवा मुझे अपनानेवाला कोई नहीं ॥ Translated by: Banakara K Gowdappa
Telugu Translation నీవు తప్ప నను చూచువా రెవ్వరూ! లేరయ్య! దేవా; నీవు తప్ప యిక నను లోగొనువారు లేరయ్యా. Translated by: Dr. Badala Ramaiah
Tamil Translation ஆர்கலியுள்ளுள்ள சிப்பியைப் போல, வாய் திறந்துளேன் ஐயனே; நீயன்றி மற்றாருமெனை அறிபவரிலை, காணா யையனே; கூடல சங்கம தேவனே. நீயன்றி உட்கொள்பவரில்லை. Translated by: Smt. Kalyani Venkataraman, Chennai
Marathi Translation वाट पाही जैसे, सागरी शिंपले मन कळवळे, तुजलागी कूडलसंगमदेवा! ऐसी माझी गती तुज विण जाणती, दुजा कोण ? अर्थ - समुद्रात पडलेल्या शिंपल्याप्रमाणे माझी अवस्था झालेली आहे. तुझी कृपा बुद्धी कधी होईल याची वाट मी पाहात तोंड उघडून याचना करीत आहे. माझ्या मनाची स्थिती फक्त तूच जाणतोस. अन्यांना ते कसे कळणार? प्रभो! माझ्या वर शक्य तो लवकर कृपाबुद्धी कर. तू मला आपलेसे करून घ्यावे म्हणून एक शिवबिंदूची याचना करीत आहे. Translated by Rajendra Jirobe, Published by V B Patil, Hirabaug, Chembur, Mumbai, 1983 समुद्रातील शिंपल्याप्रमाणे तोंड उघडून पडलो आहे. तुझ्याशिवाय मला जाणणारे कोणी नाही देवा. कूडलसंगमदेवा, तुमच्याशिवाय मला कोणी जवळ घेणार नाही. Translated by Shalini Sreeshaila Doddamani
ಶಬ್ದಾರ್ಥಗಳು ಸಿಂಪಿ = ಕಪ್ಪೆಚಿಪ್ಪು;
ಕನ್ನಡ ವ್ಯಾಖ್ಯಾನ ಸಮುದ್ರದ ಮೇಲೆ-ಅದರ ಉಬ್ಬರ ತಳಮಳಗಳ ನಡುವೆ-ಆಕಾಶಕ್ಕೆ ಮುಖ ಮಾಡಿ ಮುತ್ತಿನ ಚಿಪ್ಪು ಬಾಯಿತೆರೆದು ಅಹೋರಾತ್ರಿ ತೇಲುತ್ತಿರುವುದೆಂದೂ, ಯಾವ ಮಳೆಯ ನೀರಿಗೂ ಅದು ಬೆದೆಗೊಳ್ಳದೆ ಸ್ವಾತಿಯ ಮಳೆ ಸುರಿದಾಗ, ಅದರ ಹನಿ ತನ್ನೊಳಗೆ ಸರಿದಾಗ ಮಾತ್ರ ಆ ಚಿಪ್ಪು ಬಾಯಿ ಮುಚ್ಚಿಕೊಂಡು-ಸಮುದ್ರದ ಆಳಕ್ಕಿಳಿದು ಅಲ್ಲಿ ಆ ಒತ್ತಡದಲ್ಲಿ ತನ್ನಲ್ಲಿಯ ಸ್ವಾತಿಯ ಹನಿಯನ್ನು ಅಣಿಮುತ್ತಾಗಿಸುವುದೆಂದೂ ಜನ ನಂಬುವರು. ಬಸವಣ್ಣನವರು ತಮ್ಮನ್ನು ಇಂಥ ಒಂದು ಮುತ್ತಿನ ಚಿಪ್ಪಿಗೆ ಹೋಲಿಸಿಕೊಂಡು ತಾವು ಈ ಸಂಸಾರದಲ್ಲಿ ಏನೇ ಆಘಾತ ಅಪಘಾತಗಳಾದರೂ ಏಕಚಿತ್ತವಾಗಿ ಕಾಯುತ್ತಿರುವುದು ಶಿವಚಿದ್ರೂಪರಸಬಿಂದುವೊಂದಕ್ಕಾಗಿಯಲ್ಲದೆ ವಿಷಯರೇತೋರುಗ್ಣ ಬಿಂದುವಿಗಾಗಿ ಅಲ್ಲವೆನ್ನುತ್ತ-ಆ ತಮ್ಮ ದಿವ್ಯರತಿದಾಹವನ್ನು ಬಲ್ಲವನು ಶಿವನೊಬ್ಬನೇ ಎನ್ನುತ್ತ, ಆ ಶಿವನಲ್ಲದೆ ಮತ್ತಾವುದೂ ತನ್ನ ವಿಸ್ತಾರವನ್ನು ತುಂಬಿ ತಣಿಸಿ ಅನಂದಗೊಳಿಸಲಾರದೆನ್ನುತ್ತ-ಅದನ್ನೆಲ್ಲ ಈಡೇರಿಸಿಕೊಳ್ಳಲು ಶಿವನಲ್ಲಿ ಬಿನ್ನೈಸಿಕೊಳ್ಳುತ್ತಿರುವರು. ಸಿಕ್ಕಿದ್ದಕ್ಕೆಲ್ಲ ಮೈತುರಿಸಿಕೊಳ್ಳುವ ಜೀವವು ಗುಳ್ಳೆಗೊರಚೆ ಕಪ್ಪೆಯ ಚಿಪ್ಪಿನಂತಾಗುವುದು-ಶಿವನೊಬ್ಬನಿಗಾಗಿಯೇ ಕಾದು, ಶಿವಶಕ್ತಿಯನ್ನು ತುಂಬಿಕೊಂಡು ಆತ್ಮದಾಳದಲ್ಲಿ ನಿಮಗ್ನವಾಗುವ ಜೀವಮಾತ್ರ ಜೀವರತ್ನವಾಗುವುದೆಂಬುದಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು