•  
  •  
  •  
  •  
Index   ವಚನ - 56    Search  
 
ಸಂಸಾರಹೇಯಸ್ಥಲ - ಅಸಹಾಯಕತೆ
ಅಯ್ಯಾ, ಅಯ್ಯಾ ಎಂದು ಕರೆಯುತ್ತಲಿದ್ದೇನೆ; ʼಅಯ್ಯಾ, ಅಯ್ಯಾʼ ಎಂದೊರಲುತ್ತಲಿದ್ದೇನೆ; ʼಓʼ ಎನ್ನಲಾಗದೆ, ಅಯ್ಯಾ? ಆಗಳೂ ನಿಮ್ಮುವ ಕರೆಯುತ್ತಲಿದ್ದೇನೆ; ಮೌನವೇ, ಕೂಡಲ ಸಂಗಮದೇವಾ?
Transliteration ʼayyā, ayyāʼ endu kareyuttaliddēne; ʼayyā, ayyāʼ endoraluttaliddēne; ʼōʼ ennalāgade, ayyā? Āgaḷū nim'muva kareyuttaliddēne; maunavē, kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation 2 Lord, O Lord, I call and call ; Lord, O Lord, I cry and cry. Could you not answer `Ay`? I call and call and never cease : Could you be dumb, O Lord Kūḍala Saṅgama ? Translated by: L M A Menezes, S M Angadi
Hindi Translation स्वामी स्वामी कह पुकार रहा हूँ, स्वामी स्वामी कह क्रंदन कर रहा हूँ उत्तर नहीं दे सकते प्रभो, सदा तुम्हें पुकार रहा हूँ, मौन क्यों हो कूडलसंगमदेव? Translated by: Banakara K Gowdappa
Telugu Translation అయ్యా; అయ్యా యని వాపోవుచుంటి అయ్యా అయ్యా యని మొఱలిడుచుంటి; ఓ యన కూడదే అయ్యా, ఐనా నిన్నే పిలుచుచుంటి మౌనమే కూడల సంగమదేవా! Translated by: Dr. Badala Ramaiah
Tamil Translation ஐயனே -- ஐயனே என கூவுகிறேனன்றோ “ஐயனே -- ஐயனே” என கதறுகிறேனன்றோ, “ஓ” என்னலாகாதோ ஐயனே எஞ்ஞான்றுமும்மை அழைக்கிறேனன்றோ, வாளாமை ஏனோ, கூடல சங்கம தேவனே. Translated by: Smt. Kalyani Venkataraman, Chennai
Marathi Translation स्वामी स्वामी म्हणूनी, मारी तुज हाक ध्यास लागो एक, तुजलागी कूडलसंगमदेवा ! कासिया धरी मौन तरी हाक मारीन, होकार दे अर्थ - हे प्रभू ! तुला मी स्वामी, स्वामी म्हणून आर्त हाक मारीत आहे. पण तू काहीच उत्तर देत नाहीत, तरीही मी तुझ्याकडे पृच्छा करणे सोडणार नाहीं. हाक मारणे, नामस्मरण करणे सोडणार नाही. तू मौन धारण करण्याचे कारण एकदा तरी सांग. तुझ्या सांगण्याने संपूर्ण जगातील मानव कोटीला वरदानच प्राप्त होईल. कारण तुझे एकदाचे सांगणे कळाल्यास त्याप्रमाणे पूर्तता करण्यासाठी आमच्या जवळ मनबुद्धी व शक्ती तुझ्याच कृपेने प्राप्त झाली आहे. त्याद्वारे सर्वाचे कल्याण होईल. हे तुला नको आहे का ? म्हणून का असे मौन धारण केले आहेस? Translated by Rajendra Jirobe, Published by V B Patil, Hirabaug, Chembur, Mumbai, 1983 देवा, देवा म्हणून बोलवित आहे. देवा, देवा म्हणून हाक मारीत आहे. ओ का देत नाही देवा? तरीही तुला बोलावित आहे. मौन का कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಒರಲು = ಕೂಗಿಕೊಳ್ಳು;
ಕನ್ನಡ ವ್ಯಾಖ್ಯಾನ ನನ್ನನ್ನು ಈ ಮರ್ತ್ಯಕ್ಕೆ ತಂದವನು ನೀನೇ-ನನ್ನ ತಂದೆ ನೀನೇ. ಈವರೆಗೆ ನನ್ನಲ್ಲಿಗೆ ಬಾರದೆ ನನಗೆ ಮೊಗದೋರದೆ ನೀನೆಲ್ಲಿದ್ದೀಯ? ಎತ್ತರದಿಂದ ಕೆಳಕ್ಕೆ ಬಿದ್ದ ನೋವಿನಿಂದ, ಅದಕ್ಕೂ ಮಿಗಿಲಾಗಿ ನಿನ್ನ ಅಗಲಿಕೆಯಿಂದಾದ ವೇದನೆಯಿಂದ ಅಪ್ಪ ಅಯ್ಯ ಅಪ್ಪಯ್ಯ ಎಂದು ಒಂದೇ ಉಸಿರಿಗೆ ಒರಲುತ್ತಿದ್ದೇನೆ ಯಾಕೆ ನೀನು ಓ ಎನ್ನುತ್ತಿಲ್ಲ? ನನ್ನ ಬಳಿಗೆ ಬರಲಾಗದ ಕಾರ್ಯಭಾರ ನಿನಗಿದ್ದಲ್ಲಿ ಅಲ್ಲಿಂದಲೇ ಒಮ್ಮೆ ಓಗೊಡು ಸಾಕು. ಕಂಗೆಟ್ಟಿರುವ ನನಗೆ ಆ ನಿನ್ನ ಸ್ವರವೇ ಸೂತ್ರವಾಗಿ ನಿನ್ನಲ್ಲಿಗೆ ನಾನು ಬರುವೆ.ನಾನು ನಿನ್ನನ್ನೇ ನಂಬಿರುವೆ, ನಿನ್ನತ್ತಣಿಂದ ಬರುವ ಅಭಯವನ್ನೇ ನೆಮ್ಮಿರುವೆ-ಒಮ್ಮೆಯಾದರೂ ಓ ಎನ್ನು ಎಂದು ಬಸವಣ್ಣನವರು ಶಿವಪಕ್ಷವಾಗಿ ತಮಗಿರುವ ಅದಮ್ಯ ಅನನ್ಯಭಾವವನ್ನು ಅರಿಕೆಮಾಡಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು