•  
  •  
  •  
  •  
Index   ವಚನ - 57    Search  
 
ಸಂಸಾರಹೇಯಸ್ಥಲ - ಹುಟ್ಟು-ಸಾವು
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೆ, ಅಯ್ಯಾ? ನೀವಿರಿಸಿದಲ್ಲಿರದೆ, ಎನ್ನ ವಶವೇ, ಅಯ್ಯಾ? ಅಕಟಕಟಾ! ʼಎನ್ನವನೆನ್ನವನೆʼನ್ನಯ್ಯಾ, ಕೂಡಲ ಸಂಗಮದೇವಯ್ಯಾ.
Transliteration Nī huṭṭisidalli huṭṭi, nī kondalli sāyade enna vaśave, ayyā? Nīvirisidallirade, enna vaśavē, ayyā? Akaṭakaṭā! ʼennavanennavaneʼnnayyā, kūḍala saṅgamadēvayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation Is it in my hands to be born where I want Nor to die where I wish ? It is all Your Wish and Will, O Lord! I have no choice, but to live where you want me to live, Alas! Alas! O Lord Kūḍala Saṅgama! I am longing for you to hug, telling me “O my dear son! O my lovely child !“
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Where you bid I be born, There needs must I be born. Where you say I should die, It needs be I must die : I never have the choice ; I have no choice but live Where you say I should live : Alas, alas ! But say, Kūḍala Saṅgama Lord, 'Mine own you are, mine own !' Translated by: L M A Menezes, S M Angadi
Hindi Translation देव, जहाँ तुम जन्म देते हो वहाँ जन्म न लेना जहाँ तुम मृत्यु देते हो वहाँ न मरना क्या मेरे वश में है? जहाँ रखते हो वहाँ नहीं रहना क्या मेरे वश में है प्रभो? हाय, तुम मुझे अपना, अपना कहो, कूडलसंगमदेव ॥ Translated by: Banakara K Gowdappa
Telugu Translation నీవు పుట్టించునెడ పుట్టక చంపునెడ చావక నా వశమగునే అయ్యా! నీవు నిల్చినకడ నిల్వకున్కి నా వశమే? కటకటా! వీడు నావాడు నావాడని పల్కుమయ్యా కూడల సంగమ దేవా! Translated by: Dr. Badala Ramaiah
Tamil Translation நீ பிறப்பித்தவிடத்திலே பிறந்து; நீ மாய்க்குமிடத்து மாயாது, தன் வயமோ ஐயனே? நீ இட்ட இடத்திலிராது தன் வயமோ ஐயனே? அடடா, என்னவ னென்னவ னென்னையா கூடல சங்கம தேவனே. Translated by: Smt. Kalyani Venkataraman, Chennai
Marathi Translation तुम्ही जेथे जन्माला घातले तेथे जन्म घेऊन, तुम्ही मारल्यावर मरणार, माझ्या हाती काय देवा ? तुम्ही जेथे ठेवाल तेथे जगणार, माझ्या हाती काय देवा? अरे देवा ! माझा आहे, असे म्हणावे कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾನು ಎಲ್ಲಿ ಯಾವ ಯೋನಿಯಲ್ಲಿ ಹುಟ್ಟಬೇಕು, ಹೇಗೆ ಜೀವಿಸಬೇಕು, ಯಾವಾಗ ಸಾಯಬೇಕು ಎಂಬುದೊಂದೂ ನನ್ನಧೀನವಲ್ಲ-ಅವೆಲ್ಲಾ ನಿನ್ನ ಲೀಲಾಧೀನ. ಆದರೆ ಉದ್ದಕ್ಕೂ ನಿನ್ನವನೆನಿಸಿಕೊಳ್ಳಬೇಕೆಂದು ಹಂಬಲಿಸುವುದು ಮಾತ್ರ ನನ್ನಧೀನವಲ್ಲ -ಎನ್ನುವರು ಬಸವಣ್ಣನವರು. ತಾವು ಜನ್ಮಜನ್ಮಾಂತರದಲ್ಲಿ ಹುಟ್ಟಿನಿಂದ ಕೀಳಾಗಿರಲಿ ಅಥವಾ ಮೇಲಾಗಿರಲಿ, ಸ್ಥಿತಿವಂತಿಕೆಯಿಂದ ಶ್ರೀಮಂತನಾಗಿರಲಿ ಅಥವಾ ಸಾಮಾನ್ಯನಾಗಿರಲಿ, ಆಯುರ್ಮಾನದಿಂದ ಅಲ್ಪಾಯುಷಿಯಾಗಿರಲಿ ಅಥವಾ ದೀರ್ಘಾಯುವಾಗಿರಲಿ-ನಾನು ಎಂತಾದರೂ ಇರಲಿ-ಶಿವಭಕ್ತನಾಗಿದ್ದರೆ ಸಾಕೆಂದು ಬಸವಣ್ಣನವರು ಶಿವನಲ್ಲಿ ಭಿನ್ನವಿಸಿಕೊಳ್ಳುತ್ತಿರುವರು. -

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು