•  
  •  
  •  
  •  
Index   ವಚನ - 58    Search  
 
ಸಂಸಾರಹೇಯಸ್ಥಲ - ಭಕ್ತಿ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ ʼಶಿವ ಶಿವಾʼ ಎಂದೋದಿಸಯ್ಯಾ. ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು, ಕೂಡಲ ಸಂಗಮದೇವಾ.
Transliteration Naravindhyadoḷagenna hulugiḷiya māḍi salahutta ʼśiva śivāʼ endōdisayyā. Bhaktiyemba pan̄jaradoḷagikki salahu, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachana Sumana ℗ 2021 Pebble Productions Released on: 2008-07-15 Music Publisher: Pebble Productions
English Translation 2 Let me a paltry parrot be Upon the mountain of mankind ; And teach me, Lord, to say : God, God ! Enclose me in devotion's cage, O Lord Kūḍala Saṅgama ! Translated by: L M A Menezes, S M Angadi
Hindi Translation स्वामी, नरविंध्य में शुक शावक बनाकर पालो ‘शिव शिव’ की शिक्षा दो भक्ति पंजर में रखकर पालो कूडलसंगमदेव ॥ Translated by: Banakara K Gowdappa
Telugu Translation నర వింధ్యా వనమున; నన్నొక చిలుకను చేసి సాకుచు శివశివా యని చదివింపుమయ్యా! భక్తి యను పంజరమును పెట్టి కావుమో ప్రభూ! కూడల సంగమదేవా Translated by: Dr. Badala Ramaiah
Tamil Translation நாரடவியிலே எனைச் சிறுகிளியாக்கிப் பேணி “சிவசிவா” என ஓதுவிப்பீரையனே. பக்தியெனும் கூட்டினிலிட்டருள்வாய் கூடல சங்கம தேவனே. Translated by: Smt. Kalyani Venkataraman, Chennai
Marathi Translation नरविंध्यात मला पाळलेला पोपट करुन, शिवशिवा म्हणण्यास शिकवा देवा. भक्तीरुपी पिंजऱ्यात ठेवून पालन करा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ನರವಿಂಧ್ಯ = ಜನವಸತಿಯೆಂಬ ಕಾಡು; ಹುಲುಗಿಳಿ = ಕ್ಷುದ್ರ ಗಿಳಿ;
ಕನ್ನಡ ವ್ಯಾಖ್ಯಾನ ನಾನೊಂದು ಅರಗಿಳಿಯಾಗಿ ವೇಶ್ಯಾವಾಟಿಕೆಯಲ್ಲಿ, ಸಿರಿವಂತರ ಮಹಲುಗಳಲ್ಲಿ, ರಾಜಮಹಾರಾಜರ ಅರಮನೆಗಳಲ್ಲಿ-ಸುವರ್ಣ ಪಂಜರದಲ್ಲಿ ಇರಬೇಕೆಂಬ ಭ್ರಮೆ ನನಗಿಲ್ಲ, ಅಲ್ಲಿ ಕಾಮುಕ ಕಾಮಿನಿಯರು ಕಲಿಸುವ ಕಾಮಶಾಸ್ತ್ರವನ್ನು ಕಂಠಪಾಠ ಮಾಡಬೇಕೆಂಬ ಗೀಳೂ ನನಗಿಲ್ಲ, ಅವರು ಕೊಡುವ ನೇರಳೆ ದಾಳಿಂಬೆ ದ್ರಾಕ್ಷಿಯ ತಿಳಿರಸದಲ್ಲೂ ನನಗೆ ಅಭಿರುಚಿಯಿಲ್ಲ. ನನ್ನ ಮಹದಾಕಾಂಕ್ಷೆಯೆಂದರೆ-ಮನೆ ನೋಡಾ ಬಡವರು, ಮನ ನೋಡಾ ಘನವೆಂಬಂಥ ಶಿವಭಕ್ತರ ಮನೆಯಲ್ಲಿ ಒಂದು ಹುಲುಗಿಳಿಯಾಗಿರಬೇಕು, ಶಿವತತ್ತ್ವಗೀತೆಯನ್ನು ಅವರ ಬಾಯಿಂದ ಕೇಳಿ ಕಲಿಯಬೇಕು, ಶಿವನಾಮಾಮೃತ ಪಾನ ಮಾಡಬೇಕು-ಎಂಬುದೇ ಆಗಿದೆ, ನನಗೆ ಶಿವರಾಗಾಂಚಿತ ಕೊಕ್ಕು, ಶಿವಶಾಂತಿ ಹಸುರಾದ ಮೈಯಿ, ಶಿವನಾಂದ ಚಿಲಿಮಿಲಿ ಸಾಕು-ಎಂದು ಬಸವಣ್ಣನವರು ತಮ್ಮನ್ನೊಂದು ಗಿಳಿಯ ಮರಿಗೆ ಹೋಲಿಸಿಕೊಂಡು-ಶಿವರಕ್ಷೆ ಶಿವಶಿಕ್ಷೆಗಾಗಿ ಮಾತ್ರ ಹಾರೈಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು