•  
  •  
  •  
  •  
Index   ವಚನ - 59    Search  
 
ಸಂಸಾರಹೇಯಸ್ಥಲ - ಆತ್ಮಶುದ್ಧಿ
ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ; ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ, ತಂದೆ; ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ, ತಂದೆ; ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲ ಸಂಗಮದೇವಾ.
Transliteration Attalittalu hōgadante heḷavana māḍayyā, tande; sutti suḷidu nōḍadante andhakana māḍayyā, tande; mattonda kēḷadante kivuḍana māḍayyā, tande; nim'ma śaraṇara pādavallade an'ya viṣayakkeḷasadante irisu, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Atthalittha Hogadanthe Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
English Translation 2 Cripple me, father, that I may not go here and there. Blind me, father, that I may not look at this and that Deafen me, father, that I may not hear anything else. Keep me at your men's feet looking for nothing else, O lord of the meeting rivers,

Translated by: A K Ramanujan
Book Name: Speaking Of Siva
Publisher: Penguin Books
----------------------------------
Make me, O Father, a crippled man Who will not wander here and there. Make me, O Father, a sightless man Whose glances will not rove astray. Make me, O Father, hard of ear Lest I should hear of aught but Thee. O Lord Kūḍala Saṅgama, Keep me from all enticements free But what will draw me to Thy feet ! Translated by: L M A Menezes, S M Angadi

Hindi Translation पिता, मुझे पंगु बना दो जिससे अन्यत्र न जा सकूँ; पिता, मुझे अंधा बना दो जिससे सर्वत्र न देख सकूँ; पिता मुझे बधिर बना दो जिससे कुछ और न सुन सकूँ; कूडलसंगमदेव, ऐसी कृपा करो जिससे तव शरणों के श्री चरणों के अतिरिक्त अन्य विषयों में आसक्त न होऊँ ॥ Translated by: Banakara K Gowdappa
Telugu Translation అటు నిటు కదలకుండ అవటిని సేయుమయ్యా: తండ్రి; చుట్టి సురగి చూడనటు గ్రుడ్డిని సేయుమయ్యా! - అయ్యా అన్యంబు వినకుండ చెవిటిని సేయుమయ్యా తండ్రీ! నీ శరణుల చరణముల దప్ప అన్య విషయముల కీడ్వకుమా కూడల సంగమదేవా! Translated by: Dr. Badala Ramaiah
Tamil Translation அங்குமிங்குஞ் செல்லாது முடவனாக்குவீர் தந்தையே, சுற்றிச்சுழன்று காணாது குருடனாக்குவீர் தந்தையே, வேறொன்றைக் கேளாது செவிடனாக்குவீர் தந்தையே, உம் அடியார்தம் தாளிணையன்றி வேறு செயல்களில் ஈடுபடாதிடுவீர் கூடல சங்கம தேவனே. Translated by: Smt. Kalyani Venkataraman, Chennai
Marathi Translation भटकू न कोठे, पांगळे करावे आंधळे करावे, दिसेनासे ऐकू नये अन्य, बहिरे करावे शरण चरणी राहावे, चित्त माझे कूडलसंगमदेवा ! प्रार्थना एवढे अन्य विषयाकडे, नको नको अर्थ - हे प्रभो! मी इकडे तिकडे भटकत फिरु नये म्हणून मला तू लंगडे कर. माझे डोळे वाईट पाहू नयेत व चमक धमक पाहून डोळे फिरु नयेत म्हणून मला आंधळे कर. अपशब्द ऐकू न यावे म्हणून कान बहिरे कर. नेहमी तुझ्या शरण- चरण सेवेत मला राहू दे. इतर कोणत्याही विषयाकडे आकर्षिले होऊ न देता माझे मन व बुद्धी स्थिर कर. माझ्या कूडलसंगमदेवा! (परमेश्वरा) एवढीच माझ्यावर करुणा कर Translated by Rajendra Jirobe, Published by V B Patil, Hirabaug, Chembur, Mumbai, 1983 इकडेतिकडे जाऊ नये असा पांगळा कर देवा. इकडेतिकडे पाहू नये असा आंधळा कर देवा. इकडेतिकडे ऐकू नये असा बहिरा कर देवा. तुमच्या शरणांच्या चरणाशिवाय अन्य विषयाकडे जावू देवू नकोस कूडलसंगमदेवा. Translated by Shalini Sreeshaila Doddamani
Urdu Translation مہرباں باپ مرے کوڈلا سنگم دیوا کہ مجھے پاؤں سےمحرو م کہ بھٹکوں نہ کہیں چھین لے میری بصارت مجھےاندھا کردے تاکہ الزام نہ آئےمری نظروں پہ کوئی میرے مالک مرے مشفق مجھے بہرا کردے سُن سکیں کان نہ باطل کی صداؤں کو کبھی یہ مرا ذہن نہ سوچے کوئی دیگر مضموں تیرےشرنوں کی قدم بوسی وخدمت کےسِوا Translated by: Hameed Almas
ಶಬ್ದಾರ್ಥಗಳು ಅಂಧಕ = ಅಂದಕ ಕುರುಡ; ವಿಷಯ = ಬಯಕೆ; ಹೆಳವ = ಕಾಲು ಇಲ್ಲದವ;
ಕನ್ನಡ ವ್ಯಾಖ್ಯಾನ ಒಳ್ಳೆಯ ವಿಷಯದತ್ತ ಗಮನ ಇದು ದೇವರಲ್ಲಿ ಬಸವಣ್ಣನವರು ಮಾಡಿಕೊಂಡ ಪ್ರಾರ್ಥನೆ. ಬಸವಣ್ಣನವರೇ ಏಕೆ? ಶಿವಪಥದಲ್ಲಿ ಅಡಿಯಿಟ್ಟಿರುವ ಪ್ರತಿಯೊಬ್ಬ ಮಾನವನೂ ಅವಶ್ಯವಾಗಿ ಮಾಡಲೇಬೇಕಾದ ಪ್ರಾರ್ಥನೆ. ಒಂದು ಕೊಳದ ತಳಭಾಗ ಕಣ್ಣಿಗೆ ಕಾಣಬೇಕಾದರೆ ಆ ಕೊಳದ ನೀರು ಸ್ವಚ್ಛವಾಗಿರಬೇಕಲ್ಲದೆ ಮುಖ್ಯವಾಗಿ ಅಲೆಗಳೂ ಇರಕೂಡದು. ನೀರು ಎಷ್ಟೇ ಸ್ವಚ್ಛವಾಗಿದ್ದು ಅಲೆಗಳಿಂದ ಕೂಡಿದ್ದರೂ, ಅಲೆಗಳಿಲ್ಲದೆ ಅಲ್ಲಾಡದೆ ನೀರು ಎಷ್ಟೇ ಶಾಂತವಾಗಿದ್ದು ಸ್ವಚ್ಛವಾಗಿಲ್ಲದಿದ್ದರೂ (ಬಗ್ಗಡವಾಗಿದ್ದರೂ) ಕೊಳದ ತಳ ಭಾಗವನ್ನು ಕಾಣಲಾಗುವುದಿಲ್ಲ. ನೀರು ಅಲೆಗಳಿಂದ ಕೂಡಿರಬಾರದೆಂಬುದು ಎಷ್ಟು ಮುಖ್ಯವೋ, ಸ್ವಚ್ಛ (ನಿರ್ಮಲ) ವಾಗಿರಬೇಕೆಂಬುದು ಅಷ್ಟೇ ಮುಖ್ಯ. ಇದೇ ರೀತಿ ಈ ಶರೀರವೆಂಬುದು ಒಂದು ಕೊಳ, ಈ ಕೊಳದಲ್ಲಿ ಚಂಚಲವಾದ ಮನಸ್ಸೇ ಅಲೆಗಳಿಂದ ಕೂಡಿರುವ ನೀರು. ಆದ್ದರಿಂದ ಈ ಶರೀರವೆಂಬ ಕೊಳದಲ್ಲಿ ಆತ್ಮ ದರ್ಶನವಾಗಬೇಕಾದರೆ ಅಲೆಗಳಿಲ್ಲದ ನೀರಿನಂತೆ ಚಂಚಲತೆಯಿಂದ ದೂರಾದ ಮನಸ್ಸಾಗಬೇಕು. ಅಂದರೆ ಮನಸ್ಸು ಏಕಾಗ್ರವಾಗುತ್ತದೆ. ಆದರೆ ಅದು ಈ ದಿಶೆಯಲ್ಲಿ ಮಾರಕವಾಗುವುದೇ ಹೊರತು ಪೂರಕವಾಗಲಾರದು. ಆದ್ದರಿಂದ ಒಳ್ಳೆಯ ವಿಚಾರಗಳಲ್ಲಿ ಮನಸ್ಸು ಕೇಂದ್ರೀಕೃತವಾಗಿ ಸದ್ಭಾವನೆಯನ್ನು ಹೊಂದುವುದು, ನಿರ್ಮಲವಾಗುವುದು, ನೀರು ಸ್ವಚ್ಛ (ನಿರ್ಮಲ) ವಾಗಿರಬೇಕೆಂದು ಮೇಲೆ ಹೇಳಿರುವಂತೆಯೇ ಬಹು ಮುಖ್ಯ. ಇಂತಿರುವಾಗ ಕೆಟ್ಟ ಕೆಟ್ಟ ವಿಚಾರಗಳು ಮನಸ್ಸಿಗೆ ಬರುವುದೆಂದರೆ ಕೊಳದ ನೀರಿಗೆ ಕಲ್ಲನ್ನೆಸೆದಂತೆ. ಅದರ ಪರಿಣಾಮಗೊತ್ತಿದ್ದೇ ಇದೆ. ಅಲೆ ಅಲೆಗಳೆದ್ದು ತಳ ಭಾಗವನ್ನು ಕಾಣಲು ಸಾಧ್ಯವೇ ಆಗುವುದಿಲ್ಲ ಈ ಕಾರಣದಿಂದಲೇ ಇಲ್ಲಿ ಬಸವಣ್ಣನವರು ‘ಅತ್ತಲಿತ್ತಲೂ ಹೋಗದಂತೆ ಹೆಳವನ ಮಾಡಯ್ಯಾ ತಂದೆ .....' ಎಂದು ಪ್ರಾರ್ಥಿಸುತ್ತಿದ್ದಾರೆ. ಅಂದರೆ ಸಂಪೂರ್ಣವಾಗಿ ಕಾಲಿಲ್ಲದವನನ್ನಾಗಿ ಮಾಡಿ, ಆ ಕಡೆ ಈ ಕಡೆ ಓಡಾಡದಂತೆ ಮಾಡು ಎಂದು ಅದರ ಅರ್ಥವಲ್ಲ. ಹಾಗೆ ಬೇಡಿಕೊಂಡು ಹೆಳವನಾಗಿ ಇನ್ನೊಬ್ಬರಿಗೆ ಹೊರೆಯಾಗುವುದು ಅಣ್ಣನವರ ತತ್ವಕ್ಕೆ ವಿರೋಧವಾದುದು. ಇಲ್ಲಿ ಅವರು ಕೇಳಿಕೊಳ್ಳುತ್ತಿರುವುದು ದುರ್ವ್ಯವಹಾರಗಳಲ್ಲಿ ದುರ್ಮಾರ್ಗದಲ್ಲಿ ಅಡಿಯಿಡದಂತೆ ಮಾಡು ಎಂದು. ಬಸವಣ್ಣನು ಕಾಲಿದ್ದರೂ ದುರ್ಮಾರ್ಗದಲ್ಲಿ ಅಡಿಯಿಡಲಾಗದಂತಹ ಹೆಳವನು. ಅಂತೆಯೇ ಪ್ರತಿಯೊಬ್ಬ ಮಾನವನೂ ಈ ರೀತಿ ದುರ್ಮಾರ್ಗದಲ್ಲಿ ನಡೆಯಲಾರದ ಹೆಳವನಾಗಬೇಕು. ಎದುರಿಗೆ ಮುಳ್ಳು ಕಾಣಿಸಿದರೆ ಕಾಲಲ್ಲಿ ಪಾದರಕ್ಷೆಗಳಿದ್ದರೂ ಮುಳ್ಳು ಏನು ಮಾಡಿಯಾವು. ಎಂದು ಆ ದುರ್ಮಾರ್ಗದಲ್ಲಿ. ಹೋಗ ಬಯಸದೆ ಪಕ್ಕದಲ್ಲೇ ಇರುವ ಸರಿಯಾದ ದಾರಿಯಲ್ಲಿ ಅಡಿಯಿಡಬಯಸಿದರು ಅಣ್ಣ ಬಸವಣ್ಣನವರು. ಮನಸ್ಸು ವಿಕಾರಗೊಳ್ಳುವುದು, ಚಂಚಲವಾಗುವುದು ಯಾವಾಗ? ವಿಕಾರ ಗೊಳಿಸುವ ವಸ್ತುಗಳು ಇದ್ದಾಗ ಅಥವಾ ಅವುಗಳ ಬಗ್ಗೆ ಕೇಳಿದಾಗ, ಚಿಂತಿಸಿದಾಗ ತಾನೆ? ಹಾಗಾದರೆ ಅವುಗಳನ್ನು ಕೇಳದೆಯೇ ಅಥವಾ ನೋಡದೆಯೇ ಇದ್ದರೆ ವಿಕಾರಗೊಳ್ಳುವ ಸಂಭವವೆಂತು? ಅಂತೆಯೇ ಬಸವಣ್ಣನವರು ‘ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ; ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ ......' ಎಂದು ದೇವರಲ್ಲಿ ಮೊರೆಯಿಡುತ್ತಿದ್ದಾರೆ. "ವಿಕಾರಹೇತೌ ಸತಿ ವಿಕ್ರೀಯಂತೇ | ಯೇಷಾಂನ ಚೇತಾಂಸಿ ತ ಏವ ಧೀರಾಃ ||” ಎಂಬ ಕಾಳಿದಾಸನ ಉಕ್ತಿಯಂತೆ ವಿಕಾರಗೊಳಿಸುವ ವಸ್ತುಗಳಿದ್ದಾಗ್ಯೂ ವಿಕಾರಕ್ಕೊಳಗಾಗದವನು ನಿಜವಾದ ಧೀರನು. ಇಂತಿರುವಾಗ ವಿಕಾರಗೊಳಿಸುವ ವಸ್ತುಗಳಿಂದಲೇ ಇಲ್ಲಿ ಅಣ್ಣನವರು ದೂರ ಇರ ಬಯಸಿದುದು ಅಂಜುಕುಳಿತನವಾಗಲಿಲ್ಲವೇ ಎನ್ನಬಹುದು ನಿಜ. ಆದರೆ ಸಾಧಕ ಸಾಧನೆಯ ಮೊದಲ ಘಟ್ಟದಲ್ಲಿರುವಾಗ ಅಪರಿಪಕ್ವನಾಗಿರುವುದರಿಂದ ಅವುಗಳಿಂದ ದೂರವಿರಬೇಕಾಗುತ್ತದೆ. ಆದ್ದರಿಂದಲೇ ಸಾಧನೆಯ ಮೊದಲ ಸೋಪಾನದಲ್ಲಿ ಅಣ್ಣನವರು ನಿಂತು ಆಡಿದ ಮಾತುಗಳಿವು, ಯಾವುದೇ ವಸ್ತುವಾಗಲೀ ತತ್ವಶಃ ಕೆಟ್ಟದ್ದಲ್ಲ. ನೋಡುವ ದೃಷ್ಟಿ, ಬಳಸುವ ರೀತಿ ಕೆಟ್ಟದಾಗಬಹುದೇ ವಿನಾ ಆ ವಸ್ತುವಲ್ಲ ಆದ್ದರಿಂದಲೇ ಇಲ್ಲಿಯೂ ಬಸವಣ್ಣನವರು ಕಣ್ಣಿದ್ದೂ ಯಾವನೇ ವ್ಯಕ್ತಿಯನ್ನಾಗಲಿ ಅಥವಾ ವಸ್ತುವನ್ನಾಗಲೀ ಕೆಟ್ಟ ದೃಷ್ಟಿಯಿಂದ ನೋಡದ ಕುರುಡರಾದರು. ಅಂತೆಯೇ ಕಿವಿಯಿದ್ದೂ ಕೆಟ್ಟ ವಿಚಾರಗಳನ್ನು ಕೇಳದ ಕಿವುಡರಾದರು. ಶಿವಪಥದಲ್ಲಿ ನಡೆಯುವ ಶರಣರ ಪಾದಸೇವಕರಾದರು; ಅವರ ಚಮ್ಮಾವುಗೆ (ಪಾದರಕ್ಷೆ) ಯಾಗಬಯಸಿದರು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-733 

  Sun 16 Mar 2025  

 🙏
  Santosh
Mudigere