•  
  •  
  •  
  •  
Index   ವಚನ - 60    Search  
 
ಸಂಸಾರಹೇಯಸ್ಥಲ - ಶರಣಾಗತಿ
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ; ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ; ಎನ್ನ ಮಾನಾಪಮಾನ ನಿಮ್ಮದಯ್ಯಾ; ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲ ಸಂಗಮದೇವಾ.
Transliteration Enna vāma-kṣēma nim'madayyā; enna hāni-vr̥d'dhi nim'madayyā; enna mānāpamāna nim'madayyā; baḷḷige kāyi dim'mitte, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2 Thine are my weal and woe ; My loss and gain are thine ! Thine too my honour and shame : O Lord Kūḍala Saṅgama, How can the creeper feel the weight Of its own fruit ? Translated by: L M A Menezes, S M Angadi
Hindi Translation प्रभो, मेरा हिताहित तुम्हारा है, मेरी हानि - वृद्धि तुम्हारी है, मेरा मानापमान तुम्हारा है, क्या लता को फल भारी है कूडलसंगमदेव? Translated by: Banakara K Gowdappa
Telugu Translation నా సుఖదుఃఖంబులు నీదేనయ్యా, నా హాని వృద్ధులు నీదేనయ్యా, నా మానావమానము నీదేనయ్యా: తీగకు కాయ బరువైనే? కూడల సంగమదేవ! Translated by: Dr. Badala Ramaiah
Tamil Translation என் குறை -- நிறை உம்மது ஐயனே, என் தாழ்வு -- உயர்வு உம்மது ஐயனே, என் பெருமை, சிறுமையும் உம்மது ஐயனே, கொடிக்குக் காய் சுமையோ, கூடல சங்க தேவனே. Translated by: Smt. Kalyani Venkataraman, Chennai
Marathi Translation माझे वाम-क्षेम तुमचाच देवा. माझी हानी-वृध्दी तुमचीच देवा. माझा मान-अपमान तुमचाच देवा. वेलीला फळ ओझे होईल कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ದಿಮ್ಮಿ = ಕತ್ತಿರಿಸದ ಮರ, ಕೊರಳು; ವಾಮ = ಕೇಡು ಹಾನಿ; ವೃದ್ಧಿ = ಬೋವಿ;
ಕನ್ನಡ ವ್ಯಾಖ್ಯಾನ ನನಗೆ ಏಗುವ ಎಡವಟ್ಟು-ಆಯಕಟ್ಟು, ಆಗುವ ಹಾನಿ-ಆಭಿವೃದ್ಧಿ, ತಾಗುವ ಮಾನ-ಅವಮಾನ ಎಲ್ಲವೂ, ಎಲೆ ಶಿವನೆ, ನಿನ್ನನ್ನೇ ಅವಲಂಬಿಸಿದೆ. ನೀನು ಕೈಹಿಡಿದು ಕರೆದೊಯ್ಧೆಯಾದರೆ-ನಾನು ಆಯಕಟ್ಟಿನಲ್ಲಿದ್ದು ಅಭಿವೃದ್ಧಿಯಾಗಿ ಅಭಿಮಾನಶಾಲಿಯಾಗುವೆನು, ನೀನು ನನ್ನ ಕೈಬಿಚ್ಚಿ ಬಿಸಾಡಿದರೆ-ನಾನು ದುರ್ದೆಸೆಗೆ ಬಿದ್ದು ನಷ್ಟಪಟ್ಟು ಅವಮಾನಕ್ಕೊಳಗಾಗುವೆನು. ಈ ಎಲ್ಲವೂ ನಿನ್ನನ್ನೇ ಅವಲಂಬಿಸಿದೆ, ನೀನೊಂದು ಬಳ್ಳಿಯಾದರೆ-ನಾನದರ ಕಾಯಿ, ಬಳ್ಳಿಗೆ ತನ್ನ ಕಾಯಿ ಭಾರವೆ ? ಸೂರ್ಯಚಂದ್ರ ನಕ್ಷತ್ರ ನೀಹಾರಿಕೆಯೆಂದು ಅನಂತ ಲೋಕಗಳನ್ನು ಹೊತ್ತಿರುವ ನಿನಗೆ ನಾನು ಭಾರವೆ ? ನನ್ನನ್ನು ವಹಿಸಿಕೋ, ನನ್ನ ಅಭ್ಯುದಯವನ್ನು ನಿರ್ವಹಿಸಿಕೋ ಎನ್ನುತ್ತಿರುವರು ಆ ಶಿವನಿಗೆ ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-744 

  Wed 19 Mar 2025  

 Dhaubk you 8th class 12th
  Dhanush
Dhanush

C-428 

  Wed 17 Jan 2024  

 ?
  Basangouda Hadimani
Karanatak