ಸಂಸಾರಹೇಯಸ್ಥಲ - ಹುಟ್ಟು-ಸಾವು
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ, ಇಳಿಯಬಿಟ್ಟೊಡೆ
ನಿಮ್ಮ ನಗುವರಯ್ಯಾ.
ಶಿವಬಟ್ಟೆಯೊಳೆನ್ನನು ಇರಿಸಯ್ಯಾ, ಹರನೇ, ಹೊಲಬುಗೆಟ್ಟೆನು,
ಬಟ್ಟೆಯ ತೋರಯ್ಯಾ!
ಹುಯ್ಯಲಿಟ್ಟೆನು: ʼಗಣಂಗಳು ಕೇಳಿರಯ್ಯಾ!
ಕೂಡಲ ಸಂಗಮದೇವಯ್ಯನೆನ್ನ ಕಾಡಿಹನಯ್ಯಾ!ʼ
Transliteration Huṭṭendu lōkadalli huṭṭisi, iḷiyabiṭṭoḍe
nim'ma naguvarayyā.
Śivabaṭṭeyoḷennanu irisayyā, haranē, holabugeṭṭenu,
baṭṭeya tōrayyā!
Huyyaliṭṭenu: ʼgaṇaṅgaḷu kēḷirayyā!
Kūḍala saṅgamadēvayyanenna kāḍ'̔ihanayyā!ʼ
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 They laugh at you, O Lord,
Whenever, to give me birth,
You plunge me in this world
And say, 'Be born !'
I've lost my way, Lord Hara ;
Make me to walk in Śivā's path !
Show me the way !
Forlorn I cry: 'Hear me, O Saints,
Lord Kūḍala Saṅgama
Is making sport of me !'
Translated by: L M A Menezes, S M Angadi
Hindi Translation जन्म लेने का आदेश देकर,
संसार में मेरा सृजन कर उतारने से
तव परिहास होगा स्वामी ।
मुझे शिवपथ पर तत्पर रखो, महादेव;
पथ-भ्रष्ट हूँ, मार्ग दिखाओ;
हे शिवगण, मेरा क्रंदन सुनो;
कूडलसंगमदेव मुझे सताते हैं ॥
Translated by: Banakara K Gowdappa
Telugu Translation పుట్టుమని లోకమున పుట్టించి నను
డిగవిడచిన నిన్ను చూచి నవ్వెదరయ్యా!
శివధమున నిల్పుమయ్యా!
హరా దారి దప్పెను; దరి చూపుమయ్యా;
కుయ్యో యంటి వినుడో గణంబులారా
సంగడు నను బట్టి బాధించునయ్యా!
Translated by: Dr. Badala Ramaiah
Tamil Translation பிற என அவனியிலே பிறப்பித்துக் கைவிடின்
உம்மை நகையாடுவர் ஐயனே.
சிவநெறியிலே என்னை இடும் ஐயனே.
வழிதவறினேன் வழிதனைக் காண்பியு மையனே
அரற்றுகிறேன் கணங்களே கேண்மின்,
கூடல சங்கம தேவன் என்னை வாட்டுகிறா னையனே.
Translated by: Smt. Kalyani Venkataraman, Chennai
Marathi Translation
जगी जन्म घेऊनि, आलो तुझ्या मर्जीने
कासया सतविणे, येता जगी
शिवमार्गी लावणे, तुझेचि ते कर्तव्य
नसता खासा होय, हसू तुझे
मनी एक ध्यास, शिवमार्ग धरावा
पथभ्रष्ट न व्हावा, तुझ्या जगी
कूडलसंगमदेवा! सतवी मजला हो
शरणांनो ऐका, हो ऐका तुम्ही
अर्थ - देवा, मी नर जन्माला येत असताना तू मौन धारण केले होतेस. याचा अर्थ माझे तर जन्म घेणे ही तुझी इच्छाच असावी असे मला वाटत होते. पण या संसारात आल्यावर पाहतो तर तेथे षड्वैरी व विषय वासना मानवाला पूर्ण व्यापून टाकीत आहेत. त्यांना त्यांच्या अंतीम ध्येयाकडे जाऊच देत नाहीत. म्हणून तूच आम्हाला यातून वाचव. आम्हाला हात धरून सद्मार्गावर लाव. नाहीतर तुझेच हसू होईल. तुझी चेष्टा होईल. हे प्रभो ! तुझ्याकडे येण्याचा मार्ग मला माहीत नाही. आम्हाला हात धरून शिवपथावर चालवावे. अशी प्रार्थना आहे. अन्य मार्ग मला नको आहे. अशा रीतीने महात्मा बसवेश्वर परमेश्वराला आर्त हाक मारीत आहेत. त्यांच्या आर्त हाकेला परमेश्वराने साद न दिल्यामुळे ते शिवशरणांकडे दाद मागत आहेत. परमेश्वरानंतर शिवशरणच या जगात श्रेष्ठ आहेत अशी त्यांची खात्री आहे.
Translated by Rajendra Jirobe, Published by V B Patil, Hirabaug, Chembur, Mumbai, 1983
जन्म घे म्हणूनी जगात जन्मून
सोडलात तर जग हसेल तुम्हाला,
सत्पथावर चालवावे देवा.
पथभ्रष्ट झालो, पथ दाखवा देवा,
शरणांनो माझी आर्तहाक ऐका,
कूडलसंगमदेव मला त्रास देत आहेत.
Translated by Shalini Sreeshaila Doddamani
ಶಬ್ದಾರ್ಥಗಳು ಬಟ್ಟೆ = ದಾರಿ, ಮಾರ್ಗ, ಹಾದಿ; ಹರ = ಶಿವ ; ಹುಯ್ಯಲು = ಮೊರೆ, ದುಃಖ, ದುಃಖದ ಧ್ವನಿ ಆರ್ತನಾದ; ಹೊಲಬು = ಸರಿಯಾದ ಕ್ರಮ ದಾರಿ;
ಕನ್ನಡ ವ್ಯಾಖ್ಯಾನ ಶಿವನೇ, ನನ್ನನ್ನು ಹುಟ್ಟೆಂದು ಕಳಿಸಿದವನೂ ನೀನೆ, ಈ ಲೋಕದಲ್ಲಿ ಹುಟ್ಟಿದ ಮೇಲೆ ನನ್ನ ಕೈಬಿಟ್ಟವನೂ ನೀನೆ-ಹೀಗೆ ನಡುದಾರಿಯಲ್ಲಿ ನನ್ನನ್ನು ಅನಾಥನನ್ನಾಗಿ ಮಾಡಿಹೋದರೆ-ಭಕ್ತವತ್ಸಲನೆಂಬ ನಿನ್ನ ಕೀರ್ತಿ ನಗೆಪಾಟಲಾಗುವುದಿಲ್ಲವೆ ?
ನಾನು ಅನಾಥನೆಂಬುದನ್ನು ಸಹಿಸಿಯೇನು-ಆದರೆ ನೀನು ಅನಾಥರಕ್ಷಕನಲ್ಲವೆಂಬಂಥ (ಅಪ) ಪ್ರಚಾರವನ್ನು ಸಹಿಸಲಾರೆ. ದಯೆತೋರಿ ನನ್ನನ್ನು ಶುಭದ ಹಾದಿಯಲ್ಲಿ ಕರೆದೊಯ್ಯಿ, ದಾರಿತಪ್ಪಿದ್ದೇನೆ ಆ ದಾರಿ ತೋರಿಸು-ಎಂದು ಬಸವಣ್ಣನವರು ತಮಗೆ ಶಿವನು ಕೃಪೆದೋರಲಿಲ್ಲವೆಂದು ಪರಿತಪಿಸುತ್ತ ಪ್ರಲಪಿಸುತ್ತ-ಮನೆಯ ಗಂಡ ಮುನಿದರೆ ಮನೆಯ ಹಿರಿಯರಲ್ಲಿ ತನ್ನ ಸಂಕಟವನ್ನು ತೋಡಿಕೊಳ್ಳುವ ದಿಟ್ಟ ಸಾಧ್ವಿಯಂತೆ ತಮ್ಮ ಒಳಗುದಿಯನ್ನು ಶಿವಶರಣರಲ್ಲಿ ನಿವೇದಿಸಿಕೊಳ್ಳುತ್ತಿರುವರು.
ದೇವರೂ ಕೈಬಿಟ್ಟನೆಂಬ ದುರ್ಧರನಿಸ್ಸಹಾಯಕ ಸ್ಥಿತಿಯಲ್ಲಿ ಭಕ್ತನಿಗೆ ಧ್ರುವತಾರೆಯಾಗಿ ಜ್ಯೋತಿ ಸ್ತಂಭವಾಗಿ ನೆರವಾಗುವ ಚೈತನ್ಯಗಳು ಶಿವಶರಣರೆ. ಶಿವಶರಣರೆಂದರೆ ಈ ಭೂಮಿಯಲ್ಲಿ ಭಕ್ತೋದ್ಧಾರಕ್ಕಾಗಿ ತಿರುಗಾಡುವ ಶಿವಪ್ರತಿನಿಧಿಗಳೇ ಆಗಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು