•  
  •  
  •  
  •  
Index   ವಚನ - 64    Search  
 
ಸಂಸಾರಹೇಯಸ್ಥಲ - ಹುಟ್ಟು-ಸಾವು
ಅಕಟಕಟಾ! ಶಿವ, ನಿನಗಿನಿತು ಕರುಣವಿಲ್ಲಾ; ಅಕಟಕಟಾ! ಶಿವ ನಿನಗಿನಿತು ಕೃಪೆಯಿಲ್ಲಾ. ಏಕೆ ಹುಟ್ಟಿಸಿದೆ ಇಹಲೋಕದುಃಖಿಯ ಪರಲೋಕ ದೂರನ? ಏಕೆ ಹುಟ್ಟಿಸಿದೆ? ಕೂಡಲ ಸಂಗಮದೇವಾ ಕೇಳಯ್ಯಾ, ಎನಗಾಗಿ ಮತ್ತೊಂದು ತರುಮರನಿಲ್ಲವೇ?
Transliteration Akaṭakaṭā! Śiva, ninaginitu karuṇavillā; akaṭakaṭā! Śiva ninaginitu kr̥peyillā. Ēke huṭṭiside ihalōkaduḥkhiya paralōka dūrana? Ēke huṭṭiside? Kūḍala saṅgamadēvā kēḷayyā, enagāgi mattondu tarumaranillavē?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Śiva, you have no mercy. Śiva, you have no heart. Why why did you bring me to birth, wretch in this world, exile from the other? Tell me, lord, don't you have one more little tree or plant made just for me?

Translated by: A K Ramanujan
Book Name: Speaking Of Siva
Publisher: Penguin Books
----------------------------------
Alas ! alas ! O Śiva, there is No pity in you ! Alas ! alas ! O Śiva,, there is No mercy in you ! Why did you give me birth, To travail on this earth, A stranger unto Heaven ? Why did you give me birth ? Hear me, Lord Kūḍala Saṅgama, Could you not well have made A tree or bush instead ? Translated by: L M A Menezes, S M Angadi

Hindi Translation हाय शिव, तुममें किंचित् भी करूणा नहीं हाय शिव, तुममें किंचित् भी कृपा नहीं क्यों सृजन किया? इहलोक-दुःखी का। क्यों सृजन किया? परलोक वंचित दूरस्थ का। क्यों सृजन किया? सुनो कूडलसंगमदेव मुझे पेडपौधा नहीं बना सकते थे॥ Translated by: Banakara K Gowdappa
Telugu Translation కటకటా! శివా సుంతయూ నీకు; కరుణ లేదు; కటకటా శివా! యిసుమంతయు నీకు కృపలేదు; ఏల పుట్టించితి ఇహలోక దుఃఖితు; పరలోక దూరుని ఏల పుట్టించితి? సంగమదేవా వినవయ్యా! ఈ జన్మకంటె ఏ చెట్టుగానై న పుట్టింపరాదే? Translated by: Dr. Badala Ramaiah
Tamil Translation அடடா, சிவனே, உனக்குச் சற்றும் அருளில்லை; அடடா, சிவனே உனக்குச் சற்றும் தண்ணளியில்லை, எதற்குத் தோற்றினை மண்ணுலகிலே அல்லலுறுவோனை? வீட்டுலகிற்குச் சேய்மையோனை ஏன் தோற்றினை? கூடல சங்கம தேவனே, கேளீர் ஐயனே எனக்காக -- வேறொரு -- தரு மர மிலையோ! Translated by: Smt. Kalyani Venkataraman, Chennai
Marathi Translation हाय हाय शिवा, ना तू करुणाकरा कृपावंत नाही, खरा आम्हालागी कासया दिला जन्म, दुःखि या इहलोकी दूर सारी परलोकी, आम्हालागी कूडलसंगमदेवा ! करुण हाक ऐका तरुवृक्ष आम्हा का केला नाही ? अर्थ - महात्मा बसवेश्वर परमेश्वर चरणी अंतर मनाने हाक मारीत आहेत पण त्यांच्या आर्त हाकेला प्रतिसाद मिळत नसलेला पाहून त्यांना असे वाटत आहे की, परमेश्वराजवळ करुणा नाही त्यांच्या जवळ कृपादृष्टी नाही तो आम्हाला आपल्या पासून वेगळा समजतो. म्हणून की काय त्याने आम्हाला दुःख भोगण्यासाठीच इहलोकात जन्म घेऊ दिला आहे. व परलोक आम्हापासून दूर केला. आम्हाला नर जन्माला घालण्याऐवजी तरु फुलझाडे केले असते तर प्रभू चरणी अर्पिलो असतो. तरीही आम्ही निराश न होता आलिया भोगासी होऊ: नित्य शिवाशी अशी जिद्द बाळगून इहलोकांना शिवमय करू. Translated by Rajendra Jirobe, Published by V B Patil, Hirabaug, Chembur, Mumbai, 1983 हे देवा, आपल्याला जराही दया नाही. हे देवा, आपल्याला जराही कृपा नाही. कशाला जन्माला घातले, इहलोकीच्या दुःखीला? कशाला जन्माला घातले परलोक दूरकाला? कूडलसंगमदेवा ऐका, जन्माला घालायचे तर मला एखादे झाड वृक्ष करायचे होते. Translated by Shalini Sreeshaila Doddamani
ಶಬ್ದಾರ್ಥಗಳು ಇನಿತು = ಇಷ್ಟು; ಇಹಲೋಕ = ಮರ್ತ್ಯ ಲೋಕ, ಭೂಲೋಕ; ತರು = ಮರ; ಪರಲೋಕ = ದೇವಲೋಕ;
ಕನ್ನಡ ವ್ಯಾಖ್ಯಾನ ಸಾಯುವುದಕ್ಕಿಂತ-ಇಹಲೋಕದುಃಖಿಯಾಗಿ ಬದುಕಿರುವುದು ಬಹಳ ಹೀನಾಯ, ಇಹಲೋಕ ದುಃಖವೆಂದರೆ-ದೇಹದಲ್ಲಿ ವ್ಯಾಧಿ, ಮನದಲ್ಲಿ ಆಧಿ, ಭಾವದಲ್ಲಿ ಭ್ರಮೆ. ಎಲೆ ಶಿವನೆ, ನೀನು ಕರುಣಾಮಯಿ ಕೃಪಾಸಾಗರನೆಂಬುದು ನಿಜವಾದರೆ-ನನ್ನನ್ನು ನೀನು ಹೀಗೆ ಇಹಲೋಕದುಃಖಿಯಾಗಿರಲು ಬಿಡುತ್ತಿದ್ದೆಯಾ ? ನೀನು ಕರುಣಾಮಯಿಯಲ್ಲ-ನಿನ್ನಲ್ಲಿ ಕರುಣೆ ಲವಲೇಶವೂ ಇಲ್ಲ, ನೀನು ಕೃಪಾಸಾಗರನಲ್ಲ-ನಿನ್ನಲ್ಲಿ ಒಂದು ಹನಿಯೂ ಕೃಪೆಯಿಲ್ಲ. ಎಲೆ ಶಿವನೆ, ನಿನಗೆ ಜೀವಜಾಲವನ್ನು ಹುಟ್ಟಿಸಿ ಅದನ್ನು ಸ್ವೇಚ್ಛೆಯಾಗಿ ಪೀಡಿಸುವ ಚಟವೇ ಲೀಲೆಯಾಗಿದ್ದರೆ ನಾನೇ ನಿನಗೆ ಬೇಕಾಗಿತ್ತೇಕೆ ? ನನಗೆ ಬದಲಾಗಿ ಯಾವುದಾದರಿನ್ನೊಂದು ಗಿಡವನ್ನೋ ಮರವನ್ನೋ ಹುಟ್ಟಿಸಿ ಅದನ್ನು ಹಿಗ್ಗಾಮುಗ್ಗ ಎಳೆದಾಡಬಹುದಾಗಿತ್ತಲ್ಲಾ! ಕಡಿದರೆ ಕಡಿಸಿಕೊಳ್ಳುವ, ಸುಟ್ಟರೆ ಸುಡಿಸಿಕೊಳ್ಳುವ, ಮೈಯೆಲ್ಲ ಮರಗಟ್ಟಿರುವ ಬಡಮರಗಿಡ ನಾನಲ್ಲ! ನಾನು ಮನುಷ್ಯ-ನನಗೆ ತೀವ್ರಸಂವೇದನೆಯಿದೆ-ಶಿವಾನಂದವನ್ನು ಸವಿಯಬೇಕೆಂದು ಕನಸುಗಣ್ಣಲ್ಲಿ ಅಲೆಯುತ್ತಿರುವೆನಲ್ಲಾ! ಇದು ನಿನಗೆ ತಿಳಿಯದೆ ? ಬಾ-ನನ್ನನ್ನು ಉದ್ಧರಿಸು ಎಂದು ಬಸವಣ್ಣನವರು ಈ ಭವಬಾಧೆಗೆ ಬೇಸತ್ತು ಶಿವನಲ್ಲಿ ಆಕ್ಷೇಪಪೂರ್ವಕವಾಗಿ ಮೊರೆಯುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು