•  
  •  
  •  
  •  
Index   ವಚನ - 67    Search  
 
ಸಂಸಾರಹೇಯಸ್ಥಲ - ಅವಗುಣಿ
ಮೇರುಗುಣವನರಸುವುದೆ ಕಾಗೆಯಲ್ಲಿ? ಪರುಷದಗುಣವನರಸುವುದೆ ಕಬ್ಬುನದಲ್ಲಿ? ಸಾಧುಗುಣವನರಸುವುದೆ ಅವಗುಣಿಯಲ್ಲಿ? ಚಂದನಗುಣವನರಸುವುದೆ ತರುಗಳಲ್ಲಿ? ಸರ್ವಗುಣಸಂಪನ್ನ ಲಿಂಗವೆ, ನೀನೆನ್ನಲ್ಲಿ ಅವಗುಣವನರಸುವುದೆ, ಕೂಡಲ ಸಂಗಮದೇವಾ?
Transliteration Mēruguṇavanarasuvude kāgeyalli? Paruṣadaguṇavanarasuvude kabbunadalli? Sādhuguṇavanarasuvude avaguṇiyalli? Candanaguṇavanarasuvude tarugaḷalli? Sarvaguṇasampanna liṅgave, nīnennalli avaguṇavanarasuvude, kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Singer: Raja Hanumanna Nayaka Dore, Music Director: Raja Hanumanna Nayaka Dore, Music Publisher: Aananda Audio
English Translation 2 Does Mēru look for virtue in a crow ? Does the alchemic stone look for Virtue in iron ? And does the Saint Seek virtue in the worthless man ? Does a sandal-tree look for Virtue in trees ? And why should you, Kūḍala Saṅgama, all-virtuous Liṅga , Look so for sin in me ? Translated by: L M A Menezes, S M Angadi
Hindi Translation मेरु गुण देखता है काक में? पारस गुण देखता है लोहे में? साधु गुण देखता है अवगुणि में? चंदन गुण देखता है तरुओं में? सर्वगुण – संपन्न लिंगदेव तुम्हें मुझमें अवगुण खोजना है कूडलसंगमदेव ॥ Translated by: Banakara K Gowdappa
Telugu Translation మేరు గుణమును కాకిలో చూతువే! పర సుగుణమును లోహమున చూతువే? సాధు గుణమును దుర్జనునిలో చూతువే? చందన గుణంబు తరువుల చూతువే? సకలగుణ సంపన్నా శివా! నీవు నాలో అవగుణము చూతువే కూడల సంగమ దేవా! Translated by: Dr. Badala Ramaiah
Tamil Translation மேரு காக்கையின் இயல்பினை ஆராயுமோ? பொன் இரும்பின் இயல்பினை ஆராயுமோ? பண்பாளன் கீழோன் இயல்பினை ஆராய்வதே? சந்தனம் மரங்க ளியல்பினை ஆராயுமோ? குறையிலா நிறையே, இலிங்கமே நீ என் தீயியல்பை யாராய்வதோ கூடல சங்கம தேவனே. Translated by: Smt. Kalyani Venkataraman, Chennai
Marathi Translation पर्वत कावळ्यातील गुण शोधेल ? परिस लोखंडातील अवगुण शोधेल? साधू लोकांच्यातील दोष शोधेल? चंदन झाडातील दोष शोधेल? सर्वगुणसंपन्न लिंगदेव, माझ्यातील अवगुण शोधेल का कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಅವಗುಣಿ = ಕೆಟ್ಟಗುಣ ಉಳ್ಳವ; ಚಂದನ = ಶ್ರೀಗಂಧ; ತರು = ಮರ; ಪರುಷ = ಸ್ಪರ್ಶದಿಂದ ಕಬ್ಬಿಣವನ್ನು ಬಂಗಾರ ಮಾಡುವ ಮಣಿ; ಮೇರು = ಶ್ರೇಷ್ಠ;
ಕನ್ನಡ ವ್ಯಾಖ್ಯಾನ ಶಿವನೇ ನಿನ್ನ ಉದ್ಯಾನದ ಕ್ರೀಡಾಶೈಲವಾದ ಮೇರುಪರ್ವತ-ತನ್ನಲ್ಲಿಗೆ ಬಂದ ಕಾಗೆಯನ್ನು ಸುವರ್ಣಪಕ್ಷಿಯನ್ನಾಗಿ ಪರಿವರ್ತಿಸುವುದು, ನಿನ್ನ ಮನೆಯ ನೆಲಕ್ಕೆ ಹಾಸಿರುವ ಸ್ಪರ್ಶಶಿಲೆಯು-ತನ್ನನ್ನು ಸೋಕಿದ ಕಬ್ಬಿಣವನ್ನು ಚಿನ್ನ ಮಾಡುವುದು, ನಿನ್ನ ಅನುಲೇಪನವಾದ “ಸಾದು” ಎಂಬ ಸುಗಂಧದ್ರವ್ಯವು-ಲೇಪಿಸಿಕೊಂಡವರು ದುರ್ಗಂಧಿಯಾಗಿರಲಿ ಅವರ ಮೈಯನ್ನು ಪರಿಮಳಗೊಳಿಸುವುದು. ಹೀಗೆ ನಿನ್ನದೆನಿಸಿದ ಯಾವುದೂ-ತನ್ನನ್ನು ಆಶ್ರಯಿಸಿದ ಯಾವುದನ್ನೂ-ಅದರ ಕುಂದುಕೊರತೆಯನ್ನು ಲೆಕ್ಕಿಸದೆ-ತನ್ನ ಸಂಪನ್ನತೆಯಿಂದ ಸಂಪದ್ಯುಕ್ತ ಮಾಡುತ್ತಿರುವಲ್ಲಿ ಸ್ವತಃ ಸರ್ವಗುಣಸಂಪನ್ನನಾದ ಎಲೆ ಶಿವನೇ, ನಿನಗೆ ಶರಣಾಗತನಾದ ನನ್ನಲ್ಲಿ-ನೀನು ತಪ್ಪನ್ನು ಹುಡುಕುವುದು ಬೇಡ. ನಿನ್ನ ಕೃಪಾತಿಶಯದಿಂದ ನನ್ನ ಕಾಳಿಮೆ ಕಳೆಯಲಿ, ಕರ್ಕಶತೆ ನೀಗಲಿ, ಮಿಕ್ಕಾವ ದುರ್ಗುಣವೂ ದೂರವಾಗಲಿ-ಅವು ನನ್ನ ಮೂಳೆಗೇ ಅಂಟಿ ಹೆಪ್ಪುಗಟ್ಟಿವೆ, ದೂಷ್ಯವಾದ ಇವನ್ನೆಲ್ಲ ಹೆರೆದು ತೆಗೆದು ನಿನ್ನ ದೈವೀ ಸಂಪದವನ್ನು ನನ್ನಲ್ಲಿ ಢಾಳವಾಗಿ ರಂಗಳಿಸು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು