•  
  •  
  •  
  •  
Index   ವಚನ - 68    Search  
 
ಸಂಸಾರಹೇಯಸ್ಥಲ - ಪುನರ್ಜನ್ಮ
ಭವಭವದಲ್ಲೆನ್ನ ಮನವು ನೀವಲ್ಲದೆ ಭವಭವದಲ್ಲೆನ್ನ ಮನವು ಸಿಲುಕದೆ? ಭವರಾಟಳದೊಳು ತುಂಬದೆ? ಕೆಡಹದೆ? ಭವರೋಗವೈದ್ಯ ನೀನು, ಭವವಿರಹಿತ ನೀನು, ಅವಧಾರು, ಕರುಣಿಸುವುದು, ಕೂಡಲ ಸಂಗಮದೇವಾ.
Transliteration Bhavabhavadallenna manavu nīvallade bhavabhavadallenna manavu silukade? Bhavarāṭaḷadoḷu tumbade? Keḍahade? Bhavarōgavaidya nīnu, bhavavirahita nīnu, avadhāru, karuṇisuvudu, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Except for Thee, Will not my heart be caught In the wheel of births- Yea, in this wheel of births ? Will not the wheel Of birth fill up And empty again ? Thou only can'st minister - Thou who art free from it - To this disease called birth : Give me Thy heed and grace, O Kūḍala Saṅgama Lord ! Translated by: L M A Menezes, S M Angadi
Hindi Translation भव भव में मेरा मन तव बिना भव भव में मेरा मन नहीं फँसता भव चक्र में न गिरता? नष्ट न होता? भवरोग वैद्य तुम हो, भवरहित तुम हो । ध्यान दो, दया करो, कूडलसंगमदेव ॥ Translated by: Banakara K Gowdappa
Telugu Translation అడుగు భవంబున నా మనసు నీది కాదే? భవ భవంబున నా మనసు తగులదే? భవరాట్నమున నింప చెడపదే? భవరోగ వైద్యుడ వీవు భవవిరహితుడ వీవు: అవధరించి కరుణింపుమో కూడల సంగమదేవా! Translated by: Dr. Badala Ramaiah
Tamil Translation தொடரும் பிறப்பிலே என்மனம், நீயன்றி, தொடரும் பிறப்பிலே என்னுளம் சிக்குண்டுளதோ? பிறப்பு இராட்டிணத்திலே நிறைந்ததோ? வீழ்ந்ததோ! பிறவிப்பிணி மருத்துவன் நீ, பிறப்பிலோன் நீ, தெய்வமே செவிமடுத் தருள்வாய், கூடல சங்கம தேவனே. Translated by: Smt. Kalyani Venkataraman, Chennai
Marathi Translation प्रत्येक जन्मात माझे मन तुमच्यापासून दूर राहू नये, संसारात माझे मन फसू नये, भवसागरात माझे मन बुडू नये, भवचक्रात माझे मन अडकू नये, भवरोग वैद्य आपण, भवविरहीत आपण, कृपा करावी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅವಧಾರು = ಲಕ್ಷಕೊಡು; ಭವ = ಜೀವನ, ಜನ್ಮ ಜನ್ಮಾಂತರವನ್ನು ಹೊಂದುವುದು; ಭವರೋಗ = ಸತ್ತು ಸತ್ತು ಹುಟ್ಟುವುದು; ವಿರಹಿ = ದುಃಖ;
ಕನ್ನಡ ವ್ಯಾಖ್ಯಾನ ನನ್ನ ಮನಸ್ಸು ಜನ್ಮದಿಂದ ಜನ್ಮಕ್ಕೆ ಏಕಪ್ರಕಾರವಾಗಿ ನಿಮ್ಮನ್ನೇ ಕುರಿತು ಧ್ಯಾನಿಸದಿದ್ದರೆ-ಕೊರಳಿಗೆ ಸುತ್ತಿದ ನೇಣು ಹರಿಯುವುದಿಲ್ಲ, ಹುಟ್ಟುಸಾವಿನ ಭವರಾಟಳದಲ್ಲಿ ಸಿಲುಕಿ ಕರ್ಮಗಳನ್ನು ತುಂಬಿ ಕೊಳ್ಳುತ್ತ ಸ್ವರ್ಗನರಕದ ನಾಲೆಗೆ ಸುರಿಯುತ್ತ ಸುತ್ತಲೆಯುವುದು ತಪ್ಪುವುದಿಲ್ಲ. ಹುಟ್ಟುವುದು ಉಬ್ಬಸಪಡುವುದು-ಸಾಯುವುದು ಮರಳಿ ಹುಟ್ಟುವುದು-ಈ ಎಲ್ಲ ಭವರೋಗಕ್ಕೆ ಮಹಾವೈದ್ಯನೂ ಸ್ವತಃ ಭವರಹಿತನೂ ಆದ ನೀನು ನನ್ನನ್ನು ಈ ಅಲೆದಾಟಪರದಾಟಗಳಿಂದ ತಪ್ಪಿಸಿ ನಿನ್ನ ಸಾನ್ನಿಧ್ಯದಲ್ಲಿ ಸ್ವಸ್ಥಚಿತ್ತನನ್ನಾಗಿರಿಸಿಕೋ. ಹುಟ್ಟುವುದು ಸಾವಿನಲ್ಲಷ್ಟೇ ವಿನಿಯೋಗವಾಗುವುದು, ಮತ್ತು ಸಾಯುವುದು ಹುಟ್ಟುವುದರಲ್ಲಷ್ಟೇ ಜಮೆಯಾಗುವುದು ಜೀವದ ಘನತೆಗೆ ತಕ್ಕುದಲ್ಲವೆಂಬುದು ಬಸವಣ್ಣನವರ ಅಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು