•  
  •  
  •  
  •  
Index   ವಚನ - 69    Search  
 
ಸಂಸಾರಹೇಯಸ್ಥಲ - ಸಂಸಾರ
ಆಸೆಯೆಂಬ ಪಾಶದಲ್ಲಿ ಭವಬಂಧನವಾಗಿರ್ದೆನಯ್ಯಾ; ಸಕೃತು ನಿಮ್ಮ ನೆನೆಯಲೆನಗೆ ತೆರಹಿಲ್ಲವಯ್ಯಾ ! ಕರುಣಾಕರಾ, ಅಭಯಕರಾ, ವರದಾನೀ ಕರುಣಿಸಯ್ಯಾ. ಸಂಸಾರಬಂಧನವನು ಮಾಣಿಸೆನಗೆ, ಕೃಪೆಯ ಮಾಡಿ, ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು, ಭಕ್ತಜನಮನೋವಲ್ಲಭಾ, ಕೂಡಲ ಸಂಗಮದೇವಾ.
Transliteration Āseyemba pāśadalli bhavabandhananāgirdenayyā; sakr̥tu nim'ma neneyalenage terahillavayyā! Karuṇākarā, abhayakarā, varadānī karuṇisayyā. Sansārabandhanavanu māṇisi, kr̥peya māḍi, nim'ma śrīpādapadmadalli bhramaranāgirisu, bhaktajanamanōvallabhā, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Fettered by greed, a bondman to this earth, What chance have I to love you, Lord ? O treasury of compassion, you who make The heart brave, O most bountiful, Show me your mercy, Lord ! Pray, rid me of these bonds of earth. O Lord of pious hearts, Let me live as a bee In the lotus of your feet, Kūḍala Saṅgama Lord ! Translated by: L M A Menezes, S M Angadi
Hindi Translation आशापाश से भव में बंधित हूँ स्वामी, तव स्मरणार्थ कोई समय ही नहीं मिलता करुणाकर, अभयकर, वरदानी, दया करो, संसार बंधमुक्त दूर करने की कृपा करो । हे भक्तजनमनोवल्लभ कूडलसंगमदेव, निज श्रीपाद – पद्मों मे मुझे भ्रमर बना रखो ॥ Translated by: Banakara K Gowdappa
Telugu Translation ఆశాపాశంబను భవబంధంబున పడితినయ్యా! సకృతూ నిను స్మరించు బిడువు లేదయ్యా నాకు కరుణాకర! అభయంకర! వరదా! కరుణింపుమయ్యా! సంసారబంధమును తెంచి; కృపచూపి నన్ను మీ శ్రీపాదపద్మముల భ్రమరిగా నిల్పుమా ! భక్తజనమనోవల్ల భా కూడల సంగమ దేవా! Translated by: Dr. Badala Ramaiah
Tamil Translation அவாவெனும் வலையிலே பிறவிப்பிணைப்பிலுளே னையனே, சற்றுமுனை எண்ணுதற்கு நேரமிலை ஐயனே. அருளுடையோய், உய்விப்போய் வரமீவோய் நீ அருளாயையனே. வாழ்க்கைக் கட்டினையழித்து எனக்கருள் செய்து உனது நோன்தாளிணையிலே வண்டாக இடு ஐயனே; மெய்யன்பர் மனமறிந்தோய் கூடல சங்கம தேவனே. Translated by: Smt. Kalyani Venkataraman, Chennai
Marathi Translation आशारुपी पाशाने भवबंधनात बांधला गेलो. तुमच्या स्मरणाची एकही संधी घेतली नाही. करुणाकरा, अभयकरा, वरदाता माझ्यावर कृपा करा. भवबंधनातून वाचविण्याची कृपा करा. आपल्या श्रीचरणी भ्रमर बनवावे. भक्तजन मनोवल्लभ कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ತೆರಹಿ = ಬಿಡುವು, ಅವಕಾಶ ಎಡೆ ಸ್ಥಳ; ಪದ್ಮ = ಕಮಲ; ಪಾಶ = ಹಗ್ಗ; ಭವ = ಜೀವನ, ಜನ್ಮ ಜನ್ಮಾಂತರವನ್ನು ಹೊಂದುವುದು; ಭ್ರಮರ = ದುಂಬಿ; ವಲ್ಲಭ = ಪತಿ; ಸಕೃತ = ಪುಣ್ಯ;
ಕನ್ನಡ ವ್ಯಾಖ್ಯಾನ ಆಶೆಯ ಫಲವಾಗಿ ಜನ್ಮಜನ್ಮಾಂತರ, ಅದರಲ್ಲೂ ಬಿಡುಗಡೆಯಿಲ್ಲದ ಬಂಧನ, ಅದರ ಉದ್ದಕ್ಕೂ ಮಿತಿಯಿಲ್ಲದ ದಂದುಗ. ಕ್ಷಣವಾದರೂ ಶಿವಚಿಂತನೆಗೆ ಬಿಡುವಿಲ್ಲ. ಈ ದಂದುಗದಿಂದ ಪಾರಾಗುವ ಮಾರ್ಗೋಪಾಯಗಳನ್ನು ಚಿಂತಿಸಲೂ ವ್ಯವಧಾನವಿಲ್ಲದೆ-ವಿಪತ್ತಿನಿಂದ ಆಪತ್ತಿಗೆ, ಆಪತ್ತಿನಿಂದ ಸರ್ವನಾಶಕ್ಕೆ ತಲುಪುವ ಹಾದಿ ಹಿಡಿಯಬಾರದು. ಶಿವನಲ್ಲದೆ ನನಗಿನ್ನೊಂದು ಗತಿಯಿಲ್ಲವೆಂಬ ಪ್ರಪತ್ತಿಯಿಂದ ಸಂವಿತ್ತಿಗೆ, ಸಂವಿತ್ತಿಯಿಂದ ಮುಕ್ತಿಗೆ ತಲುಪುವ ಹಾದಿ ಹಿಡಿಯಬೇಕು. ಅಂಥ ಆತ್ಮಜೈತ್ರಯಾತ್ರೆಗೆ ಶಿವಧ್ಯಾನವೇ ಮೊದಲ ಹೆಜ್ಜೆಯೆಂಬುದು ಬಸವಣ್ಣನವರ ಅಭಿಪ್ರಾಯ. ಆದುದರಿಂದಲೇ ಅವರು-“ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು” ಎಂದು ಶಿವನನ್ನು ಪ್ರಾರ್ಥಿಸುತ್ತಿರುವರು. ಭ್ರಮಣೆಯನ್ನು ಬಿಟ್ಟು ತಾವರೆಯ ಬಂಡುಂಡ ಭ್ರಮರ ಆ ತಾವರೆಯ ತೆಕ್ಕೆಯಲ್ಲೇ ಮತ್ತೇರಿ ಮಲಗುವ ಉನ್ಮನದ ಮಾದಕಚಿತ್ರವಿಲ್ಲಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು