•  
  •  
  •  
  •  
Index   ವಚನ - 70    Search  
 
ಗುರುಕರುಣಸ್ಥಲ - ಶರಣಾಗತಿ
ಮಡಕೆಯ ಮಾಡುವರೆ ಮಣ್ಣೇ ಮೊದಲು; ತೊಡಿಗೆಯ ಮಾಡುವರೆ ಹೊನ್ನೇ ಮೊದಲು; ಶಿವಪಥವನರಿವರೆ ಗುರುಪಥವೇ ಮೊದಲು; ಕೂಡಲ ಸಂಗಮದೇವರನರಿವರೆ ಶರಣರ ಸಂಗವೇ ಮೊದಲು.
Transliteration Maḍakeya māḍuvare maṇṇē modalu; toḍigeya māḍuvare honnē modalu; śivapathavanarivare gurupathavē modalu; kūḍala saṅgamadēvaranarivare śaraṇara saṅgavē modalu.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: M. Venkatesh Kumar • H.K. Narayana • N.S. Prasad • Basavanna Vachana Sangama - Shiva Sharanara Vachanagalu - Part 4 ℗ Lahari Recording Company Released on: 2014-08-01
English Translation 2 In making a pot The clay comes first ; In making an ornament, The gold comes first; In knowing Śiva's path, The Guru's path comes first ; In knowing Kūḍala Saṅgama, The fellowship of Śaraṇās Comes first. Translated by: L M A Menezes, S M Angadi
Hindi Translation मटका बनाने में मिट्टी ही मूल है; गहना बनाने में स्वर्ण ही मूल है; शिवपथ जानने में गुरुपथ ही मूल है; कूडलसंगम को जानने में शरण संग ही मूल है ॥ Translated by: Banakara K Gowdappa
Telugu Translation మూలమునందన తెలియుగ; పొన్నే మూలము తొడవులు సేయగ గురుపదమే మూలము శివపథము తెలియ శరణుల సంఘమే మూలము సంగని తెలియగ. Translated by: Dr. Badala Ramaiah
Tamil Translation மட்கலம் வடித்தற்கு மண்ணே முதல் அணிகலன் செய்தற்கு பொன்னே முதல் சிவநெறியையறிதற்கு குரு தீட்சையே முதல் கூடல சங்கம தேவனை யறிதற்கு மெய்யன்பர் தொடர்பே முதல். Translated by: Smt. Kalyani Venkataraman, Chennai
Marathi Translation मडके करण्यासाठी माती पाहिजे प्रथम, दागिणे करण्यासाठी सोने पाहिजे प्रथम, शिवपथ जाणण्यासाठी गुरुपथ पाहिजे प्रथम कूडलसंगमदेव जाणण्यासाठी शरणसंग पाहिजे प्रथम. Translated by Shalini Sreeshaila Doddamani
ಶಬ್ದಾರ್ಥಗಳು ಶಿವಪಥ = ಮಂಗಳಕರ ದಾರಿ;
ಕನ್ನಡ ವ್ಯಾಖ್ಯಾನ ದೇವರನರಿವುದಕ್ಕೆ ಸಜ್ಜನರ ಸಂಗಬೇಕು ಒಂದು ಮಡಕೆಯನ್ನು ಮಾಡಲು ಕುಂಬಾರನಿಗೆ ಮಣ್ಣು ಅತ್ಯಾವಶ್ಯಕ. ಮಣ್ಣಿಲ್ಲದೆ ಮಡಕೆಯನ್ನು ಮಾಡಲು ಸಾಧ್ಯವಿಲ್ಲ. ಇದರಂತೆಯೇ ಆಭರಣವನ್ನು ಮಾಡಲು ಅಕ್ಕಸಾಲಿಗನಿಗೆ ಬಂಗಾರ ಅನಿವಾರ್ಯ. ಬಂಗಾರವಿಲ್ಲದೆ ಅವನು ಒಡವೆಯನ್ನು ಮಾಡಲಾರ. ಅಂತೆಯೇ ಶಿವಪಥವನ್ನು ತಿಳಿಯಬೇಕಾದರೆ ಗುರುಪಥ ಬೇಕೇ ಬೇಕು. ಗುರು ತೋರಿದ ಮಾರ್ಗದಲ್ಲಿ ಹೋದರೆ ಶಿವಪಥದತ್ತ ಸಾಗಲು ಸಾಧ್ಯ. ಸಂಸ್ಕೃತದಲ್ಲಿ 'ಶಿವ' ಎಂದರೆ 'ಮಂಗಲ', 'ಶುಭ', 'ಕಲ್ಯಾಣ' ಎಂದರ್ಥ. ‘ಪಥ’ ಎಂದರೆ ಮಾರ್ಗ. ಆದ್ದರಿಂದ 'ಶಿವಪಥ'ವೆಂದರೆ ನಮಗೆ ಮಂಗಲವನ್ನು ತರುವ, ಶುಭವನ್ನು ದೊರಕಿಸಿ ಕೊಡುವ, ಕಲ್ಯಾಣವನ್ನುಂಟುಮಾಡುವ ಮಾರ್ಗವೆಂದರ್ಥ. ಅಂತಹ ಮಾರ್ಗವನ್ನು ತೋರಿಸುವ ಅರ್ಹತೆ ಜ್ಞಾನಿಯಾದ ವ್ಯಕ್ತಿಗೇ ಇರುವುದು, ಅವನೇ ಗುರು ಎನಿಸಿಕೊಳ್ಳುವನು. “ಅಂಧೇನ ನಿಯಮಾನೋಯಥಾಂಧಃ” ಎಂದು ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. 'ಕುರುಡನಿಂದ ಕರೆದುಕೊಂಡು ಹೋಗಲ್ಪಡುವ ಕುರುಡನಂತೆ' ಎಂದು ಇದರ ಅರ್ಥ. ನಡೆಯುವವನೂ ಕುರುಡ, ನಡೆಸಿಕೊಂಡು ಹೋಗುವವನೂ ಕುರುಡ, ಹಾಗಾದರೆ ಗುರಿಮುಟ್ಟುವುದೆಂತು? ಅದನ್ನೇ ಸರ್ವಜ್ಞ ಕವಿ “ಬಳ್ಳಿ ಗುರುಡರು ಸೇರಿ ಹಳ್ಳವನು ಬಿದ್ದಂತೆ! ಒಳ್ಳೆಯಾ ಗುರುವಿನುಪದೇಶವಿಲ್ಲದಿರೆ ಎಲ್ಲಿಹುದು ಮುಕ್ತಿ ಸರ್ವಜ್ಞ” ಎಂದಿರುವುದು. ಯಾವನಾದರೂ ಒಬ್ಬ ಕೆಟ್ಟ ಕೃತ್ಯಗಳಲ್ಲಿ ತೊಡಗಿದ್ದರೆ ‘ಏನು ಮಾಡುವುದು, ಸಹವಾಸ ದೋಷ’ ಎನ್ನುತ್ತೇವೆ. ಕಟುಕನ ಮನೆ ಗಿಳಿ, ಹಿಡಿಯಿರಿ, ಬಡಿಯಿರಿ, ಎಂದರೆ, ಸಭ್ಯ ಗೃಹಸ್ಥನ ಮನೆಯ ಗಿಳಿ ‘ಶಿವ ಶಿವಾ, ಬನ್ನಿ, ಕುಳಿತುಕೊಳ್ಳಿ’ ಎನ್ನುತ್ತದೆ. ಆದ್ದರಿಂದ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಉತ್ತಮ ಸಹವಾಸ ಸಹಾಯಕಾರಿ ಹಾಗೂ ಪರಿಣಾಮಕಾರಿ. ಅಂತೆಯೇ ದೇವರನ್ನು ಅರಿಯಲು, ಸಾಕ್ಷಾತ್ಕಾರ ಮಾಡಿಕೊಳ್ಳಲು ಶರಣರ ಅಂದರೆ ಶಿವನಲ್ಲಿ ಶರಣಾಗತಿಯನ್ನು ಪಡೆದ ಶಿವಭಕ್ತರ ಸಹವಾಸ ಅವಶ್ಯಕ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-384 

  Sun 29 Oct 2023  

 ಪೂಜ್ಯರಿಗೆ ಶರಣು ಶರಣಾರ್ಥಿ. ವಾಸ್ತವ : ಕುಡಿದವರ ಜೊತೆ ಇರಿ ಕುಡಿದಂತೆ ಇರಿ ಆದರೆ ಕುಡಿ ಬೇಡಿ.
  ಡಾ. ಹಿತೇಶ್ವರ ಜಿ.ಹೆಚ್
???????. ???????? ??, ???? ??, ???????????