•  
  •  
  •  
  •  
Index   ವಚನ - 71    Search  
 
ಗುರುಕರುಣಸ್ಥಲ - ನೇಮ
ನೋಡಿ ನೋಡಿ ಮಾಡುವ ನೇಮ ಸಲ್ಲವು! ಸಲ್ಲವು!! ತನುವುದ್ದೇಶ, ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು! ಸಲ್ಲವು!! ಗುರುಪಥವ ಮೀರಿ ಮಾಡುವ ನೇಮ ಸಲ್ಲವು! ಸಲ್ಲವು!! ಕೂಡಲ ಸಂಗಮದೇವಯ್ಯಾ, ಇವು ನಿಮ್ಮ ನಿಜದೊಳಗೆ ನಿಲ್ಲವು! ನಿಲ್ಲವು!!
Transliteration Nōḍi nōḍi māḍuva nēma sallavu! Sallavu!! Tanuvuddēśa, manavuddēśavāgi māḍuva nēma sallavu! Sallavu!! Gurupathava mīri māḍuva nēma sallavu! Sallavu!! Kūḍala saṅgamadēvayyā, ivu nim'ma nijadoḷage nillavu! Nillavu!!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 In vain, in vain The shallow, aped observances ! Those undertaken for the body's sake Or mind's; observances That go athwart the Guru's path ! O Kūḍala Saṅgama Lord, Such have no place in Thee ! Translated by: L M A Menezes, S M Angadi
Hindi Translation अंधानुकरण से आचरित नियम योग्य नहीं, योग्य नहीं; शरीरार्थ, मनसार्थ आचरित नियम योग्य नहीं, योग्य नहीं; गुरुपथ को अतिक्रमण कर आचरित नियम योग्य नहीं, योग्य नहीं; कूडलसंगमदेव, ये तव यथार्थता में टिक नहीं सकते ॥ Translated by: Banakara K Gowdappa
Telugu Translation చూచి చూచి నోచు నోము చెల్లదు చెల్ల దురా; క%వ% తను మనముల నుద్దేశించి చేయు వ్రతము చెల్లదురా గురుపథము మీరి చేయు వ్రతము చెల్లదు చెల్లదురా; నిలువపురా ఇవి నీ నిలువన కూడల సంగయ్యా ! Translated by: Dr. Badala Ramaiah
Tamil Translation கண்டு, கண்டு ஆற்றும் நெறிமை செல்லாது, செல்லாது, உடலை முன்னிட்டு மனத்தை முன்னிட்டு, ஆற்றும் நெறிமை செல்லாது, செல்லாது, குருவழியை மீறும் நெறிமை செல்லாது, செல்லாது, இவை உம் உண்மையிலே நில்லாது, நில்லாது கூடல சங்கம தேவனே. Translated by: Smt. Kalyani Venkataraman, Chennai
Marathi Translation पाहून पाहून करावयाचे व्रत योग्य नाही, योग्य नाही. देहतृप्ती-मनतृप्तीसाठी व्रत करणे योग्य नाही, योग्य नाही. गुरुपथाची उपेक्षा करणारे व्रत योग्य नाही, योग्य नाही. कूडलसंगमदेवा, हे तुम्हाला प्रिय नाही, प्रिय नाही. Translated by Shalini Sreeshaila Doddamani
ಶಬ್ದಾರ್ಥಗಳು ನೇಮ = ನಿಯಮ; ಸಲ್ಲು = ಯೋಗ್ಯವಾದ, ಸಮ್ಮತವಾಗು, ಪ್ರಚಾರವಾಗು;
ಕನ್ನಡ ವ್ಯಾಖ್ಯಾನ ಗುರು ತೋರಿದ ಮಾರ್ಗ(ಗುರುಪಥ)ದಲ್ಲಿ ಮುಂದುವರಿಯುವ ಚೈತನ್ಯದ ವರ್ಧನೆಗೆ ಅಡ್ಡಿಯಾಗುವುದನ್ನು ತ್ಯಜಿಸುವ,ಉತ್ತೇಜಕವಾದುದನ್ನು ಭಜಿಸುವ ಕಾಯಕ-ವಾಚಕ-ಮಾನಸಿಕ ವರ್ತನೆಗೆ ನೇಮವೆನ್ನುವರು. ಸುಳ್ಳನ್ನು ಹೇಳುವುದಿಲ್ಲ, ಪರಾಂಗನೆಯರನ್ನು ಕಾಮಿಸುವುದಿಲ್ಲ, ಅನ್ಯದೈವವನ್ನು ಉಪಾಸಿಸುವುದಿಲ್ಲ ಎಂದು ಮುಂತಾದ ವ್ರತರೂಪದಲ್ಲಿಯೂ ಇರುವುದುಂಟು ಈ ನೇಮ. ನೇಮವನ್ನು ಶಿಷ್ಯನಿಗೆ ದೀಕ್ಷೆ ಕೊಡುವಾಗಲೇ-ಕಾಯಕರೂಪದಲ್ಲಿ-ಇಂಥದು ನಿನ್ನ ನೇಮ ಎಂದು ಗುರು ನಿಗದಿಪಡಿಸುವುದೂ ಉಂಟು-ನೋಡಿ ಸಿದ್ಧರಾಮ ಚಾರಿತ್ರ 3-14: ಉದಯವಪ್ಪಂದು ಕೂಡುತ್ತುಮಾಂಗದಲಿ ಮೂ ಡಿದ ಗೂಢಲಿಂಗಮಂ ತೋರಿ ಪಂಚಾಕ್ಷರಿಯ ಹೃದಯಮಂ ತಿಳಿಪಿ ನಿಜಭಕ್ತಿಯಂ ಗುರುಪೂಜೆಯಾಗಿ ಕೈಕೊಂಡು ಬಳಿಕ | ಮೊದಲ ನಾಮವನೆ ದೀಕ್ಷಾನಾಮವಿತ್ತು ಭೂ ತದಯಾವಿಚಾರಮಂ ನೇಮಮಂ ಕೊಟ್ಟು ನೋ ಡಿದಡೆ ಕನ್ನಡಿಗೆ ಕನ್ನಡಿದೋರೆದಂತೆರಡನಳಿದಂದುವಿಡಿದಿರ್ದನು || ಹೀಗೆ ಗುರು ನಿಗದಿಪಡಿಸಿಕೊಟ್ಟ ನೇಮವನ್ನು ಬಿಟ್ಟು-ಅವರಿವರನ್ನು ನೋಡಿ-ತನ್ನ ಸ್ವಭಾವಕ್ಕೂ ಸಾಮರ್ಥ್ಯಕ್ಕೂ ಜೀವನ ಸಂದರ್ಭಕ್ಕೂ ಒಗ್ಗದ ನೇಮವಿನ್ನೊಂದನ್ನು-ಜನಮರುಳೋ ಜಾತ್ರೆಮರುಳೋ ಎಂಬಂತೆ-ಅನುಕರಿಸಬಾರದು, ಅಥವಾ ಹಾಲು ಚೆನ್ನ, ಹಾಲುಕೆನೆ ಇನ್ನೂ ಚೆನ್ನವೆಂದು ತನುಉದ್ದೇಶವಾಗಿಯೂ ನೇಮಗಳನ್ನು ಕೈಗೊಳ್ಳಬಾರದು ಅಥವಾ ಯಾವನಾದರೊಬ್ಬ ಯಾವುದಾದರೊಂದು ನೇಮ ಮಾಡುತ್ತ ಅತಿಶಯನೆನಿಸಿದರೆ-ನಾನೂ ಹಾಗೆ ಮಾಡುವೆನೆಂಬ ಮನ ಉದ್ದೇಶವಾಗಿಯೂ ನೇಮವನ್ನು ಅಚರಿಸಬಾರದು. ಇಂಥ ನೇಮಗಳು ಸದ್ಭಕ್ತನಿಗೆ ನೈಜವಲ್ಲವಾಗಿ ನಿಷ್ಟ್ರಯೋಜಕ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು