ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ:
ಕಹಿಸೋರೆಯ ಕಾಯ ತಂದು ವಿಭೂತಿಯ ತುಂಬಿದೊಡೆ
ಸಿಹಿಯಾಗದೆ ಮೂರು ದಿವಸಕ್ಕೆ?
ಹಲವುಕಾಲ ಕೊಂದ ಸೂನೆಗಾರನ ಕತ್ತಿಯಾದರೇನು,
ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ?
ಲಲಾಟದಲ್ಲಿ ವಿಭೂತಿ ಬರೆಯಲಿಕೆ
ಪಾಪ ಪಲ್ಲಟವಾಗದೆ, ಕೂಡಲ ಸಂಗಮದೇವಾ?
Transliteration Munna māḍida pāpaventu hōhudendu cintisabēḍa:
Kahisōreya kāya tandu vibhūtiya tumbidoḍe
sihiyāgade mūru divasakke?
Halavukāla konda sūnegārana kattiyādarēnu,
paruṣa muṭṭalike honnāgade ayyā?
Lalāṭadalli vibhūti bareyalike
pāpa pallaṭavāgade, kūḍala saṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Bother not how the bygone sin
Departs :
Will not the bitter bottle-gourd,
If filled with sacred ash,
Within three days be sweet ?
What if it be a butcher's knife
Which has slaughtered a long time ?
Will it not turn to gold when touched
By the philosopher's stone ?
O Kūḍala Saṅgama Lord,
Will, then, the sin fail to fade
When the ashmark paints the brow ?
Translated by: L M A Menezes, S M Angadi
Hindi Translation चिंता न करो पूर्वकृत पाप कैसे मिटेगा?
कडुआ कद्दू लाकर विभूति भरने से
तीन दिन में मीटा नहीं बनता?
अनंत काल तक वध किया हुआ
वधिक के हस्त का कृपाण क्यों न हो
पारस स्पर्श से सोना नहीं बनता?
ललाट पर विभूति धारण करने से
पाप नहीं मिटता, कूडलसंगमदेव ?
Translated by: Banakara K Gowdappa
Telugu Translation తొల్లి చేసిన పాపము తొలగు టెట్లని చింతింపవలదు
పచ్చి సొరకాయ దెచ్చి భస్మము నింప;
పండి రుచినిచ్చుకాదే మూడునాళ్ళకు?
చిరకాలము చంపు సూనరి కత్తిjైున నేమి?
స్పర్శవేది సోక బంగారు గాకుండునే?
నొసట విభూతి పూయ పల్లటిల్లదే
పాపము కూడల సంగమదేవా!
Translated by: Dr. Badala Ramaiah
Tamil Translation முன்செய்த தீவினை எங்ஙன மகலுமென எண்ணாய்,
கைப்புச் சுரைக்காயிலே திருநீற்றை நிறைப்பின்,
இனிப்புறாதோ மூன்று நாட்களிலே ஐயனே!
பலகாலங்கொன்ற கொலைஞனின் கத்தியாயிலென்ன?
பரிசவேதி தீண்டிட பொன்னாகாதோ ஐயனே?
நெற்றியிலே திருநீறு தரிக்கத் தீவினை யகலாதோ
கூடல சங்கம தேவனே.
Translated by: Smt. Kalyani Venkataraman, Chennai
Marathi Translation
पूर्वी केलेले पाप फिटेल काय आता
नका करु चिंता, मनामाजी
भरता विभूती, कडू दोडक्यात
तीन दिवसात होई गोड
माळी श्री विभूती, ज्यानी ज्यानी चर्चिले
पाप त्यांचे फिटले, खासा जाणा
कूडलसंगमदेवा ! परिस स्पर्श सुरी
कसाई हाती जरी, सोने होई
अर्थ - पूर्वी केलेले पाप धुवून काढण्यासाठी पैशाच्या जोरावर दान-धर्म, देव दर्शन, तिर्थ यात्रा करु नका. किंवा त्यातच चिंता करत वेळ व पैसा खर्ची घालू नका. गुरु, लिंग जंगम पूजा दासोहं (अन्न, वस्त्र, दान) इत्यादी नित्य नेम समजून करा. सदाचार सोडू नका. शरण सत्संगात राहा म्हणजे तुमचे पाप धूऊन जाईल. शेवटी परमेश्वरी कृपा अवश्य लाभेल. जसे कडू दोडक्यात भस्म विभूती भरल्यास त्यातील कडूपणा जाऊन गोड होण्यास तीन दिवस पुरे होतील. ज्याप्रमाणे कसायाच्या हातातील नेहमी वापरला जाणारा लोखंडी सुरा, असेना परीसाच्या स्पर्शाने सोने होणार नाही का? त्याप्रमाणे सदाचार, सद्भक्ती, कायक (श्रम) आणि शरण- सत्संग लाभल्यास पूर्वीचे पाप धुऊन निघेल. कपाळावर तीन बोट श्रीविभूती लावून तरी पाहा. तुमचे सात जन्माचे पाप नाश होईल. कारण विभूती भस्मात सवं श्री समावलेले आहे. हे तुम्हास निश्चित अनुभवास येईल.
Translated by Rajendra Jirobe, Published by V B Patil, Hirabaug, Chembur, Mumbai, 1983
पूर्वी केलेले पाप कसे नष्ट होणार याची चिंता करु नकोस.
कडू रसाचे फळ आणून विभूती भरता गोड होत नाही का दुसऱ्या दिवशी?
काही काळपर्यंत कापणाऱ्या कसायाच्या हातचा सुरा
परिसस्पर्शाने सोने होणार नाही का देवा ?
भाळी विभूती लावता विधीलिखित जाणार नाही कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಪರುಷ = ; ಲಲಾಟ = ಹಣೆ; ಸೂನೆಗಾರ = ಪ್ರಾಣಿಗಳನ್ನು ಕೊಲ್ಲುವವ ಕಟುಕ; ಹೋಹು = ;
ಕನ್ನಡ ವ್ಯಾಖ್ಯಾನ ಸದ್ಗುರುವು ಶಿಷ್ಯನಿಗೆ ಶಿವದೀಕ್ಷೆಯನ್ನು ಕೊಡುವಾಗ ಕ್ರಿಯಾದೀಕ್ಷೆಯಿಂದ ಕೈಯಲ್ಲಿ ಶಿವಲಿಂಗವನ್ನು ಇಡುವುದಕ್ಕೆ ಮುನ್ನ-ಮಂತ್ರದೀಕ್ಷೆಯಿಂದ ಅವನ ಕಿವಿಯಲ್ಲಿ ಶಿವಮಂತ್ರವನ್ನು ಉಪದೇಶಿಸುವನು. ಇದಕ್ಕೆಲ್ಲ ಮುನ್ನವೇ ಗುರು ತನ್ನ ಹಸ್ತಾಬ್ಜವನ್ನು ಶಿಷ್ಯನ ಮಸ್ತಕದ ಮೇಲಿಟ್ಟು ವೇಧಾದೀಕ್ಷೆಯನ್ನು ಕೊಟ್ಟು-ಅವನ ಹಣೆಯಲ್ಲಿ ವಿಭೂತಿಯನ್ನು ಧರಿಸುವನು.
ವಿಭೂತಿಧಾರಣೆಯ ಮಹಿಮೆ ಸಾಮಾನ್ಯವಾದುದಲ್ಲ. ಈ ಧರಿಸಿದ ವಿಭೂತಿಯಿಂದ ಜನ್ಮಜನ್ಮಾಂತರಗಳಲ್ಲಿ ಜೀವನು ಕಟ್ಟಿಕೊಂಡ ಸಂಚಿತಕರ್ಮವೆಲ್ಲಾ ಪರಿಹಾರವಾಗುವುದು.
ಕಹಿಸೋರೆಯ ಕಾಯಲ್ಲಿ ವಿಭೂತಿಯನ್ನು ತುಂಬಿಟ್ಟರೆ ಕಹಿಯೆಲ್ಲ ಹೋಗಿ ಸಿಹಿಯಾಗುವಂತೆ, ಮತ್ತು ಹಲವು ಕಾಲ ಪ್ರಾಣಿಹಿಂಸೆ ಮಾಡಿದ ಕಟುಗನ ಕತ್ತಿಯೂ ಪರುಷತಾಗಿ ಚಿನ್ನವಾಗುವಂತೆ-ಧರಿಸಿದ ವಿಭೂತಿಯು ಪಾಪವನ್ನು ಕಳೆಯುವುದೆಂಬುದರಲ್ಲಿ ಯಾವ ಸಂಶಯವೂ ಇಲ್ಲವೆಂದಿರುವರು ಬಸವಣ್ಣನವರು.
ಶಿವದೀಕ್ಷೆಯನ್ನು ಸ್ವೀಕರಿಸಿದ ಪಾಪಭೀರುಗಳಾದ ದಲಿತ ಜನರಿಗೆ ಬಸವಣ್ಣನವರು ಹೀಗೆ ನಿದರ್ಶನ ಪೂರ್ವಕವಾಗಿ ಭರವಸೆ ಕೊಟ್ಟು ಧೈರ್ಯ ಹೇಳುತ್ತಿದ್ದಾರೆ.
ಪಾಪಕ್ಕಿಂತಲೂ ಪಾಪಭೀತಿಯು ಭೀಕರದುಷ್ಫಲದಾಯಕ. ಸದಾಕಾಲವೂ ತಾನು ಪಾಪಿ ಎಂಬ ಅಳುಕು ಭಕ್ತರ ಧೀರಜೀವನಕ್ಕೆ ಅಡ್ಡಿಯಾಗಬಾರದೆಂಬುದು ಬಸವಣ್ಣನವರ ಇಂಗಿತ. ಜನ್ಮಜನ್ಮಾಂತರದ ಪಾಪವೆಲ್ಲ ಪ್ರಾಯಶ್ಚಿತ್ತಾದಿಗಳಿಂದ ಪರಿಹಾರವಾಗುವುದೆಂದು ಭಕ್ತರನ್ನು ಶೋಷಿಸುತ್ತ ಬಂದಿರುವ ಪುರೋಹಿತಷಾಹಿಯ ವಿರುದ್ಧ ಶಿವಭಕ್ತರಿಗೆ ಎಚ್ಚರ ಕೊಡುವ ಧ್ವನಿಯೂ ಈ ವಚನದಲ್ಲಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು