Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2The lotus lends the water grace,
And billows to the sea ;
A woman's virtue is her grace,
The sky's the moon !
The ashmark on the brow
Lends grace to a Śaraṇa
Of our Lord Kūḍala Saṅgama.
Translated by: L M A Menezes, S M Angadi
Hindi Translationकमल ही जल का श्रृंगार है;
लहर ही सागर का श्रृंगार है;
गुण ही नारी का श्रृंगार है;
चंद्र ही गगन का श्रृंगार है;
विभूति ही मम कूडलसंगमेश के
शरणों के ललाट का श्रृंगार है ॥
Translated by: Banakara K Gowdappa
Tamil Translationநீருக்கு நெய்தல் அழகு,
ஆழிக்குத் திரையே அழகு,
பெண்ணிற்கு நல்லியல்பே அழகு,
விண்ணிற்குத் திங்களே அழகு,
நம் கூடலசங்கனி னடியார்க்கு
நெற்றியிலே திருநீறே அழகு.
Translated by: Smt. Kalyani Venkataraman, Chennai
Marathi Translationपाण्याचे सौंदर्य, कमळ फुलताचि
सौंदर्य गावाची, वृक्ष झाडे
सागरा सौंदर्य, तरंग उठताचि
सौंदर्य नारीचे, सद्गुण
गगन सुंदर, चंद्र उगवताचि
सौंदर्य निसर्गाची, चैतन्य दे
कूडलसंगमदेवा! सौंदर्य शरणांचे
भाळी विभूतिही, चर्चिल्याने
अर्थ - कमळ हे पाण्याची शोभा वाढविते. कमळ सरोवराला शोभायमान करते. तरंग सागराची शोभा आहे. सौंदर्य आहे. सद्गुण हे नारीची शोभा आहे. तर चंद्रमा गगनाची शोभा होऊन राहिली आहे. ह्या सर्व निसर्गदत्त वस्तू दुसऱ्या निसर्ग दत्त वस्तुंची शोभा वाढवित आहेत. ते एकमेकांची गुणवैशिष्टे वाढविण्यास पूरक आहेत. एकमेकांना शोभायमान आहेत. आल्हाददायक आहेत. सृष्टीला स्वर्ग सौंदर्य प्राप्त करून देणाऱ्यात ते सर्व श्रेष्ठ सिद्ध झाले आहेत. त्याचप्रमाणे शिवशरणांनी आपल्या कपाळाला लावलेली विभूती भस्म त्यांची नैसर्गिक शोभा व स्वाभिमान होऊन राहिलो आहे. शिवशरणांच्या भाळी चर्चिलेली विभूती भस्म त्यांच्या भक्ती मार्गात निसर्गदत्त पूरक होऊन राहिली आहे. त्यात दंभाचार दिखाऊपणा अजिबात नाही.
Translated by Rajendra Jirobe, Published by V B Patil, Hirabaug, Chembur, Mumbai, 1983सरोवराची कमळे ही शोभा,
सागराच्या लहरी ही शोभा,
नारीला सद्गुण ही शोभा,
गगनाला चंद्रमा ही शोभा.
मम कूडलसंगम शरणांच्या कपाळी विभूती हीच शोभा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನವಿಭೂತಿಯ ಮಹತ್ವ
ಅರಳಿದ ಕಮಲಗಳು ಸರೋವರದ ನೀರಿಗೆ ಶೋಭೆಯನ್ನುಂಟುಮಾಡುತ್ತವೆ. ನೋಡಿದವರ ಹೃದಯವನ್ನೂ ಅರಳಿಸುತ್ತವೆ. ಅದರಂತೆಯೇ ನೊರೆ ತೆರೆಗಳು ಸಮುದ್ರಕ್ಕೆ ಶೋಭೆಯನ್ನು ತರುತ್ತವೆ. ಹಾಗೆಯೇ ಸ್ತ್ರೀಯಾದವಳು ಮೈತುಂಬಾ ಆಭರಣಗಳನ್ನು ಹಾಕಿಕೊಳ್ಳುವುದರ ಜೊತೆಗೆ ಸದ್ಗುಣಗಳನ್ನೂ ಮೈತುಂಬಿಸಿಕೊಂಡರೆ ಆಭರಣಗಳಿಂದ ಬರಗಾಲದ ಅಪೂರ್ವ ಕಾಂತಿಯೊಂದುಹೊರಹೊಮ್ಮುವುದು. ಕೇವಲ ಆಭರಣಗಳನ್ನು ಹಾಕಿಕೊಳ್ಳುವುದು ಯೌವನವಿಲ್ಲದ ಮುದುಕಿಯು ಯುವತಿಯ ಉಡಿಗೆ ತೊಡಿಗೆಗಳನ್ನು ತೊಟ್ಟಂತೆ, ಆಭರಣಗಳು ಸ್ತ್ರೀಯಳ ಬಾಹ್ಯ ಶರೀರದ ಸೌಂದರ್ಯವನ್ನು ಹೆಚ್ಚಿಸಿದರೆ ಸದ್ಗುಣಗಳು ಅವಳ ಅಂತಃಶ್ರೀಯನ್ನು ಬೆಳಗಿಸುವವು. ಆಕಾಶವನ್ನು ಒಂದು ಸರೋವರವೆಂದು ಭಾವಿಸಿದರೆ ನಕ್ಷತ್ರಗಳು ಆ ಸರೋವರದ ಕಮಲಗಳು; ಚಂದ್ರ ಆಕಾಶ ಸರೋವರದಲ್ಲಿ ವಿಹರಿಸುವ ಏಕಮಾತ್ರ ರಾಜಹಂಸ. ಹೀಗೆ ಚಂದ್ರ ಆಕಾಶಕ್ಕೆ ಮೆರಗು ನೀಡುತ್ತಾನೆ. ಅಂತೆಯೇ ವಿಶಾಲವಾದ ಉದಾತ್ತವಾದ ಧ್ಯೇಯವುಳ್ಳ, ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ; ವಿಶಾಲವಾದ ಹಣೆಯಲ್ಲಿ ವಿಭೂತಿ ಶಿವನ ಚಿತ್ಕಳೆಯಂತೆ ರಾರಾಜಿಸುವುದು.
ನಮ್ಮ ಅನೇಕ ಹಳೆಯ ಸಂಪ್ರದಾಯಗಳಿಗೆ ಅರ್ಥವಿಲ್ಲದಿಲ್ಲ. ಒಬ್ಬ ಸಾಮಾನ್ಯ ಸ್ತ್ರೀಯು ಮನೆಯಲ್ಲಿ ಅಡಿಗೆ ಆದ ನಂತರ ಅಡಿಗೆ ಪಾತ್ರೆಯ ಹೊರ ಭಾಗವನ್ನು ಸ್ವಚ್ಛಗೊಳಿಸಿ ಒಲೆಯ ಬೂದಿಯಿಂದ ವಿಭೂತಿಯ ಕಟ್ಟನ್ನು ಹಾಕುವುದನ್ನು ನಾವು ನೋಡಿದ್ದೇವೆ. ಅದೇ ಸ್ತ್ರೀಯು ಬರಿಯ ಪಾತ್ರೆಗೆ ಆ ರೀತಿ ವಿಭೂತಿಯ ಕಟ್ಟನ್ನು ಎಳೆಯುವುದಿಲ್ಲ. ತುಂಬಿದ ಪಾತ್ರೆಗೆ ಆ ರೀತಿ ವಿಭೂತಿಯನ್ನು ಧರಿಸುವುದು ಇಲ್ಲಿ ವಿಭೂತಿಯ ಪಾತ್ರೆ ತುಂಬಿರುವುದರ ಸೂಚಕವಾಯಿತು. ಅದರಂತೆಯೇ ಶಿವಭಕ್ತನ ಹಣೆಯ ಮೇಲೆ ರಾರಾಜಿಸುವ ವಿಭೂತಿಯ ಜ್ಞಾನದಿಂದ ಅವನ ತಲೆ ತುಂಬಿರುವುದರ ದ್ಯೋತಕ. ಅಂತೆಯೇ ವಿಭೂತಿಯು ತನ್ನನ್ನು ಧರಿಸಬಯಸುವವರು ಜ್ಞಾನದಿಂದ ತಮ್ಮ ತಲೆಯನ್ನು ತುಂಬಿಸಿಕೊಳ್ಳಬೇಕೆನ್ನುವುದರ ಸೂಚಕ. 'ವಿಭೂತಿ' ಎಂದರೆ ಸಿರಿ ಸಂಪತ್ತು ಐಶ್ವರ್ಯ. ಶರಣರ ದೃಷ್ಟಿಯಲ್ಲಿ ಸಿರಿ, ಸಂಪತ್ತೆಂದರೆ ಜ್ಞಾನ ಇದನ್ನೇ ಪ್ರಭುದೇವರ ಮುಂದಿನ ಮಾತಿನಲ್ಲಿ ಕಾಣಬಹುದು.
"ನಿನ್ನೊಡವೆಯೆಂಬುದು ಜ್ಞಾನರತ್ನ,
ಅ೦ತಪ್ಪ ರತ್ನವ ಕೆಡಗುಡದೆ
ನೀ ಅಲಂಕರಿಸಿದೆಯಾದೊಡೆ ಗುಹೇಶ್ವರಲಿಂಗದಲ್ಲಿ
ನಿನಗಿಂತ ಬೇರೆ ಸಿರಿವಂತರಿಲ್ಲ ನೋಡಾ".
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
C-616 
  Fri 28 Feb 2025  
Wondurfull info ಜೈ ಶಿವ ತರಳಬಾಳು 🚩🙏   Uday G
Myduru
C-581 
  Mon 20 Jan 2025  
ತರಳಬಾಳು ಮಠದ ವಚನಗಳೆಂದರೆ ಇಡೀ ವಿಶ್ವಕ್ಕೆ ಗೊತ್ತು ಮಾಡಿದ ನಮ್ಮ ಮನೆಯ ದೇವರು ಶ್ರೀ ಶ್ರೀ ಶ್ರೀ ಶಿವಮೂರ್ತಿ ಮಹಾಸ್ವಾಮಿಜಿಯವರಿಗೆ ನನ್ನ ಪ್ರಣಾಮಗಳು. ನಿಮಗೆ ವಿದೇಶಿ ಮಹಿಳೆಯರು ವಚನವನ್ನು ಮೈಸೂರಿನಿಂದ ಕನ್ನಡದಲ್ಲಿ ಬರೆದು ವಾಟ್ಸಾಪ್ ಮುಖಾಂತರ ಕಳುಹಿಸಿದನ್ನು ನೋಡಿ ತುಂಬಾ ಸಂತೋಷವಾಯಿತು ಬುದ್ಧಿ. ಇಂತಿ ನಿಮ್ಮ ಶಿಷ್ಯ ಪಂಡರಹಳ್ಳ್ಳಿ ಎಂ. ಗುರುಶಾಂತಯ್ಯ ನವರ ಮಗ ಜಿ. ಎಸ್ ರೇವಯ್ಯ ರವಿ ಸ್ಟುಡಿಯೋ.ಚಿತ್ರದುರ್ಗ    ಪಂಡರಹಳ್ಳಿ ರವಿ ಸ್ಟುಡಿಯೋ ಚಿತ್ರದುರ್ಗ
??????????.??????? ????
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.