Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2The elephant fears the goad ;
The mountain, the thunderbolt ;
Darkness is afraid of light ;
The forest fears the fire ;
The five great sins fear, Lord,
The name of Kūḍala Saṅgama.
Translated by: L M A Menezes, S M Angadi
Hindi Translationकरी डरता है अंकुश से,
गिरि डरता है कुलिश से,
तम डरता है ज्योति से,
कानन डरता है दावानल से,
पंचमहापातक डरते हैं,
कूडलसंगमेश के नाम से ॥
Translated by: Banakara K Gowdappa
ಕನ್ನಡ ವ್ಯಾಖ್ಯಾನಮೊಳದುದ್ದ ಅಂಕುಶ ಆನೆಯನ್ನೂ ಬಗ್ಗಿಸುವುದು, ಎಳೆಎಳೆಯಾದ ಸಿಡಿಲು ಆಕಾಶದೆತ್ತರದ ಪರ್ವತವನ್ನೂ ಪುಡಿಗುಟ್ಟುವುದು, ಕೈದೀವಿಗೆಯೊಂದು ಹತ್ತೂ ಕಡೆಗೆ ಆವರಿಸಿ ಲಗ್ಗೆ ಹತ್ತಿದ ಕತ್ತಲೆಯನ್ನೂ ಓಡಿಸುವುದು, ನವಿರಾದ ಬೆಂಕಿಯ ಜ್ವಾಲೆ ದಟ್ಟವಾದ ಕಾಡನ್ನೂ ಸುಟ್ಟು ಬೂದಿಮಾಡುವುದು.
ಹೀಗೆ ಆನೆ ಮುಂತಾದ ದೊಡ್ಡ ದೊಡ್ಡ ವಸ್ತುಗಳು ಅಂಕುಶ ಮುಂತಾದ ಚಿಕ್ಕಪುಟ್ಟ ಸಾಧನಗಳಿಗೆ ಅಂಜುವಂತೆ, ಮಹಾಪಾತಕಗಳೂ ಶಿವನಾಮದೈದಕ್ಷರಕ್ಕೆ ಅಂಜುತ್ತವೆ.ನಮಶ್ಯಿವಾಯ ಎಂಬ ಮಹಾಮಂತ್ರದಲ್ಲಿರುವ ಒಂದೊಂದಕ್ಷರಕ್ಕೂ-ಪಾತಕವೇನು-ಮಹಾಪಾತಕವೂ ಅಂಜುತ್ತದೆಂಬುದು ಅಭಿಪ್ರಾಯ.
ಅಂದರೆ ಅಶಿವವಾದುದನ್ನು ಧಿಃಕರಿಸಿ ಶಿವನಿಗೆ ಶರಣಾಗತನಾದವನೆಂದಿಗೂ ಪಾಪಬುದ್ದಿಯವನಾಗುವುದಿಲ್ಲ : ಅವನು ದಯಾಪರನಾದುದರಿಂದ ಕೊಲೆ ಮತ್ತು ಸುಲಿಗೆಯಲ್ಲಿ, ನಿಯತೇಂದ್ರಿಯನಾದುದರಿಂದ ಗುರುತಲ್ಪಗಮನ ಮುಂತಾದ ವಿಕೃತಕಾಮದಲ್ಲಿ, ಪ್ರಸಾದಜೀವಿಯಾದುದರಿಂದ ಸುರಾಪಾನ ಮತ್ತು ಮಾಂಸ ಭಕ್ಷಣೆ ಮುಂತಾದ ಅಪೇಯಪಾನ ಅಭಕ್ಷ್ಯಭಕ್ಷಣ ಮುಂತಾದ ಕಟುರುಚಿಯಲ್ಲಿ ಎಂದಿಗೂ ತೊಡಗನು, ಅದುದರಿಂದಲೇ ಬಸವಣ್ಣನವರು ಹೇಳಿರುವುದು-“ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯ” ಎಂದು.
ಮನುಷ್ಯನು ಪಾಪಗಳನ್ನು ಮಾಡುವುದೇ ಕಾಮದಿಂದ ಕ್ರೋಧದಿಂದ ಮೋಹದಿಂದ ಅಹಂಕಾರದಿಂದ. ಅದರೆ ಶಿವಭಕ್ತನಿಗೆ-ಶಿವಪ್ರೇಮವಲ್ಲದೆ ಮತ್ತೊಂದು ಕಾಮವಿಲ್ಲವಾಗಿ, ಸತ್ಯಾಗ್ರಹವಲ್ಲದೆ ಮತ್ತೊಂದು ಕ್ರೋಧವಿಲ್ಲವಾಗಿ, ಶರಣಸಂಗಮೋಹವಲ್ಲದೆ ಮತ್ತೊಂದು ವ್ಯಾಮೋಹವಿಲ್ಲವಾಗಿ, ಶಿವದಾಸೋಹಂಭಾವವಲ್ಲದೆ ಮತ್ತೊಂದು ಅಹಂಕಾರವಿಲ್ಲವಾಗಿ-ಅವನಿಗೆ ಪಾಪ ಎದುರಾಗುವ ಅಥವಾ ಬೆಂಬೀಳುವ ಪ್ರಮೇಯವೇ ಇಲ್ಲ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.