ಜಪ-ತಪ-ನಿತ್ಯನೇಮವೆನಗುಪದೇಶ:
ನಿಮ್ಮ ನಾಮವೆನಗೆ ಮಂತ್ರ,
ಶಿವನಾಮವೆನಗೆ ತಂತ್ರ,
ಕೂಡಲ ಸಂಗಮದೇವಯ್ಯಾ,
ನಿಮ್ಮ ನಾಮ ಕಾಮಧೇನುವೆನಗೆ.
Transliteration Japa-tapa-nityanēmavenagupadēśa:
Nim'ma nāmavenage mantra,
śivanāmavenage tantra,
kūḍala saṅgamadēvayyā,
nim'ma nāma kāmadhēnuvenage.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The telling of beads,
Penance and daily rites
Are a lesson to me.
Thy name, to me, the spell,
And Śiva's name the talisman ;
Thy name, Lord Kūḍala Saṅgama,
To me, the Wishing-Cow.
Translated by: L M A Menezes, S M Angadi
Hindi Translation जप-तप नित्य-नेम मेरे लिए उपदेश हैं;
तव नाम मेरे लिए मंत्र है;
शिवनाम मेरे लिए तंत्र है,
कूडलसंगमदेव तव नाम
मेरे लिए कामधेनु है॥
Translated by: Banakara K Gowdappa
Telugu Translation జపతపనిత్యవ్రతమే నా కుపదేశము;
నీ నామమే నాకు మంత్రము;
శివనామమే నాకు తంత్రము;
కూడల సంగయ్యా నీ నామమే నాకు కామధేనువయ్యా!
Translated by: Dr. Badala Ramaiah
Tamil Translation செபம், தவம் நெறிமுறை நாடோறுமெனக் கறிவுரை,
உமது திருப்பெயரெனக்கு மந்திரம்,
உமது திருப்பெயரெனக்குத் தந்திரம்,
கூடல சங்கம தேவனே.
உமது திருப்பெயரெனக்குக் காமதேனு.
Translated by: Smt. Kalyani Venkataraman, Chennai
Marathi Translation
जप जप नित्य नेम, मज वाटे उपदेश
तव नाम वाटे खास, तंत्र मंत्र
कूडलसंगमदेवा ! तुझे नाम, जणु
मजलागी कामधेनु, खास वाटे
अर्थ - उपदेश सांगणारे व उपदेश ऐकणारे हे दोघेही आपला अमूल्य वेळ घालवित असतात. शिवाय उपदेश सांगणारा श्रेष्ठ व ऐकणारा सामान्य ही भावना त्यांच्यात बळावत जाते. जो पर्यन्त स्वतः कार्यान्वित होणार नाही. अर्थात आचारात आणणार नाही, तोपर्यंन्त त्यांना खरे समाधान व स्वर्गानंद प्राप्त होणार नाही. म्हणून महात्मा बसवेश्वर आपल्या वचनात म्हणतात. की जप-तप नित्य नेम, हाच खरा उपदेश आहे. पण ते सर्व स्वहस्ते करावे. शिवनाम, शिवचिंतन हेच खरे मंत्र आहेत. आणि भक्तीचे हेच खरे तंत्र आहेत. हे कूडलसंगमदेवा ! (परमेश्वरा) तुझे नामस्मरण करणे म्हणजेच कामधेनु प्राप्त करून घेणे होय. मला जे हवे आहे ते तुझ्या नामस्मरणाने होत आहे. म्हणून इतर गोष्टीकडे माझे मन कसे आकर्षिले जाईल. कारण इतर सर्व गोष्टी वशीकरण, देहदंडन इत्यादि ज्या तुझ्या नावाने केल्या जातात त्या सर्व फोल व अवडंबर वाटतात.
Translated by Rajendra Jirobe, Published by V B Patil, Hirabaug, Chembur, Mumbai, 1983
जप, तप, नित्य नेम हाच मला उपदेश.
आपले नाम हाच माझा मंत्र,
शिवनाम हेच मला तंत्र. कूडलसंगमदेवा
आपले नाम ही कामधेनू मजला.
Translated by Shalini Sreeshaila Doddamani
ಶಬ್ದಾರ್ಥಗಳು ಕಾಮಧೇನು = ಹಸು; ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು; ನೇಮ = ನಿಯಮ ವೃತ;
ಕನ್ನಡ ವ್ಯಾಖ್ಯಾನ ಜಪವೆಂದರೆ ಉಪಾಸ್ಯವಾದ ದೇವರ ನಾಮವನ್ನು ಒಂದು ನಿಗದಿಯಾದ ಸಂಖ್ಯೆಯಲ್ಲಿ ಮತ್ತು ರೀತಿಯಲ್ಲಿ ಪುರಶ್ಚರಿಸುವುದು, ತಪವೆಂದರೆ ಇಂದ್ರಿಯನಿಗ್ರಹದಿಂದ (ಕೆಲವೊಮ್ಮೆ ಇಂದ್ರಿಯನಿಗ್ರಹಕ್ಕಾಗಿ) ಮಾಡುವ ಒಂದು ಸಾಥನೆ.ನಿತ್ಯವೆಂದರೆ ಅನುದಿನವೂ ತಪ್ಪದೆ ಅಚರಿಸಬೇಕಾದ ಪೂಜಾದಿ ಕರ್ಮ, ನೇಮವೆಂದರೆ ದೀಕ್ಷಾಕಾಲದಲ್ಲಿ ಗುರು ಶಿಷ್ಯನಿಗೆ ವಿಶೇಷ ಅವಧಾರಣೆಯಿಂದ ನಿಯಾಮಿಸುವ ಒಂದು ವಿಶಿಷ್ಟ ಜೀವನ ಶೈಲಿ, ಇದೆಲ್ಲವನ್ನೂ ಅನುಷ್ಠಾನಕ್ಕೆ ತರು ನನಗೆ ಬೇಕಾದ ಚೈತನ್ಯಕ್ಕೆಲ್ಲ ಮೂಲಸ್ರೋತರೂಪಿಯಾದುದು ಶಿವನಾಮವೇ ಆಗಿದೆ.
ನಾನಾ ಶಕ್ತಿ ಸಾಮರ್ಥ್ಯಸಂಪನ್ನತೆಗಳನ್ನು ಒದಗಿಸುವ ಏಳುಕೋಟಿ ಮಂತ್ರಗಳಲ್ಲಿ ಸರ್ವಶ್ರೇಷ್ಠವಾದ ಆ ಶಿವನಾಮವೇ ನನಗೆ ಮಂತ್ರ, ಸೃಷ್ಟಿ-ಸ್ಥಿತಿ-ಲಯ-ಉಪಾಸನೆ-ಸಿದ್ದಿ-ಎಂಬ ಐದರ ಸಂಬಂಧವಾಗಿ ಬೇಕಾದ ಎಲ್ಲ ಅರಿವನ್ನು ಉಂಟುಮಾಡಿಕೊಡುವ ತಂತ್ರವೂ ನನಗೆ ಶಿವನಾಮವೇ ಆಗಿದೆ.
ಹೀಗೆ ಐಹಿಕವೆಂಬ ಆಮುಷ್ಮಿಕವೆಂಬ ನನ್ನೆಲ್ಲ ಶುಭಕಾಮನೆಗಳನ್ನೂ ಕೈಗೂಡಿಸಿಕೊಡುವಂಥದು ಶಿವನಾಮವಲ್ಲದೆ ಬೇರೆಯಲ್ಲ-ಎನ್ನುತ್ತಿರುವರು ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು