Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album : Vachana Vaibhava Songs, Singer : Rajesh Krishnan, Devendhrakumar Mudhoal Music : M S Maruthi Label : Ashwini Audio
English Translation 2Alas, alas ! what airs and graces !
'Ōṁ Namaḥ Śivāya' is the spell ;
''Ōṁ Namaḥ Śivāya' ! the tailsman ;
Merely to think
Of our Lord Kūḍala Saṅgama
Is charm enough !
Translated by: L M A Menezes, S M Angadi
Hindi Translationहंत, यह साज श्रृंगार क्या है?
ऊँ नमः शिवाय ही मंत्र है,
ऊँ नमः शिवाय ही तंत्र है,
मम कूडलसंगमदेव का स्मरण ही मंत्र है॥
Translated by: Banakara K Gowdappa
Telugu Translationకటకటా వెడగు విన్నాణములన యేవో తెలియ;
ఓం నమశ్శివాయ’’ అన్నదే మంత్రము;
‘‘ఓం నమశ్శివాయ’’ అన్నదే తంత్రము;
మా కూడల సంగమ దేవుని తలచుటే మంత్రము,
Translated by: Dr. Badala Ramaiah
Tamil Translationஅடடா, அழகு, திறமை என்பதேனோ?
“ஓம் நமச்சிவாய” என்பதே மந்திரம்.
“ஓம் நமச்சிவாய” என்பதே தந்திரம்.
நம் கூடல சங்கம தேவனை உள்ளுதலே மந்திரம்.
Translated by: Smt. Kalyani Venkataraman, Chennai
Marathi Translationहाय हाय मानवा, वेद आगम शास्त्र
पुराण तर्क तंत्र, इतिहास
पठण करुनि काय, गाऊनि तरी काय
षडक्षरी शिवाय, व्यर्थ होय.
ॐ नमः शिवाय, षडाक्षरी मंत्र
जाण हेचि तंत्र, मजलागी
कूडलसंगमदेवा ! तुझे नामस्मरण
तंत्र, मंत्र जाण, साठियले
अर्थ - ज्या मंत्राचा अर्थ कळत नाही अशा मंत्राचे पठण केल्याने स्वतःचेही जीवन सफल होणार नाही. वा ऐकणाऱ्याचेही होणार नाही. मंत्र पठण करणे म्हणजेच केवळ ज्ञान घेण्यासाठी नव्हे तर ते परमेश्वराला प्राप्त करण्याचे एक साधन, एक मार्ग होय. म्हणून त्यात अवडंबर, दांभिकता चालणार नाही. म्हणून ॐ नम: शिवाय या मंत्राचा जप व ध्यान करा. कारण हाच एक मंत्र परमेश्वर प्राप्तीचा राजमार्ग होय. आणि परमेश्वर प्राप्तीचे हे खरे तंत्र व मंत्र होय. परमेश्वराचे स्मरण जागृत ठेवण्यासाठी या मंत्राची आठवण करा.
Translated by Rajendra Jirobe, Published by V B Patil, Hirabaug, Chembur, Mumbai, 1983अरे, हे कसले अवडंबर पांडित्य आहे.
ॐ नमः शिवाय हाच मंत्र आहे,
ॐ नमः शिवाय हेच तंत्र आहे.
कूडलसंगमाचे स्मरण हाच मंत्र आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಮಂತ್ರವನ್ನು ಮತ್ತು ಮಂತ್ರೋಚ್ಚಾರಣೆಯ ಕ್ರಮವನ್ನು ಅಂಗ-ಪಲ್ಲವ-ಪ್ರಯೋಗವೆಂಬ, ಕರನ್ಯಾಸ-ದೇಹನ್ಯಾಸ- ಅಂಗನ್ಯಾಸವೆಂಬ,ಸೃಷ್ಟಿ-ಸ್ಥಿತಿ-ಸಂಹಾರನ್ಯಾಸವೆಂಬ ಶಿಷ್ಟರ ಮುಚ್ಚುಮರೆಯ ಬೆಡಗಿನಿಂದ ಸಾಮಾನ್ಯ ಜನರಿಗೆ ತಿಳಿಯುವುದು ದುಸ್ಸಾಧ್ಯವೂ ಅಸಾಧ್ಯವೂ ಆಯಿತು,ಇಂಥ ಗೋಪ್ಯ ವಂಚಕ ಪರಿಸರದಲ್ಲಿ ಓಂ ನಮಶ್ಯಿವಾಯ ಎಂಬುದು ಇರುವ ಸ್ವರೂಪದಿಂದಲೇ ಶಿವಮಂತ್ರವಾಗಿರುವುದೆಂದೂ ಅದರ ಸಂಬಂಧವಾದ ಕಟ್ಟುಕಟ್ಟಳೆಯ ಬಿನ್ನಾಣವೆಲ್ಲಾ ಅನವಶ್ಯಕವೆಂದೂ ಬಸವಣ್ಣನವರು ಅಭಿಪ್ರಾಯಪಟ್ಟಿರುವಂತಿದೆ.
ಮತ್ತು ವರ್ಣ-ಪದ-ವಾಕ್ಯ ಘಟಿತವಾಗಿ “ ಶಬ್ಧ” ರೂಪವಾದ ಈ ಓಂ ನಮಶ್ಶಿವಾಯವು ಮಂತ್ರ ಶಾಸ್ತ್ರಗಳಲ್ಲಿ ವಿಜೃಂಭಿಸುವುದಾದರೂ-ಮೂಲತಃ ಶಿವನನ್ನು ಕೇವಲ ಮಾನಸಿಕವಾಗಿ ಉಪಾಸಿಸುವುದೇ ಹೆಚ್ಚು ಪರಿಣಾಮಕಾರಿಯೆಂದು ಬಸವಣ್ಣನವರು ಅಭಿಪ್ರಾಯಪಟ್ಟಿರುವಂತಿದೆ-“ಕೂಡಲಸಂಗಮದೇವರ ನೆನೆವುದೇ ಮಂತ್ರ” ವೆಂಬ ಮಾತಿನಿಂದ ಅದು ಸೂಚಿತವಾಗಿಯೂ ಇದೆ.
ಇಂಥ ಮಾನಸ ಶಿವಧ್ಯಾನವು-ಓಂ ನಮಶ್ಯಿವಾಯ ಎಂದು ವರ್ಣ-ಪದ-ವಾಕ್ಯಾತ್ಮಕವಾದ ವಾಚಕ ರೂಪವನ್ನು ಧರಿಸಿಲ್ಲವಾದರೂ-ಅದೇ ಕಾರಣದಿಂದ ಅದು “ಪರಾ” ಎನಿಸಿಕೊಂಡು ಉಕ್ತಿಯ ಮಿಕ್ಕ ಅವಸ್ಥೆ ಗಳಾದ ಪಶ್ಯಂತೀ ಮಧ್ಯಮಾ-ವೈಖರಿಗಳಿಗಿಂತ ಶ್ರೇಷ್ಠವೇ ಆಗಿದೆ.
ತಾವು ಉದ್ಧರಿಸಲು ಯತ್ನಿಸಿದ ಅನಕ್ಷರಸ್ಥ ದಲಿತಶಿವಭಕ್ತರಿಗೆ ಅಕ್ಷರಾತೀತವಾಗಿ ಶಿವನನ್ನು ನೆನೆವುದೇ ಮಂತ್ರವಾಗುವುದೆಂಬ ಬಸವಣ್ಣನವರ ಮಾತು ಗಮನಾರ್ಹವಾಗಿದೆ, ಸಾಂಪ್ರದಾಯಕವಾಗಿಯೂ ಮಾನಸಜಪವೇ ಉತ್ತಮ ಫಲದಾಯಕ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
C-633 
  Tue 04 Mar 2025  
ಶಿವ ನಾಮ ಒಂದೇ ಸರ್ವಶ್ರೇಷ್ಠ ಮಂತ್ರ ಅದ್ಭುತ ಅತ್ಯದ್ಭುತ ಇದಕ್ಕೆ ಸರಿಸಾಟಿ ಯಾವುದು ಇಲ್ಲಾ," "ಕೊಡಲ ಸಂಗಮ ದೇವ " ಓಂ ನಮಃ ಶಿವಾಯ 🙏🏼🙏🏼🙏🏼💐💐💐💐   M G ರಾಜಣ್ಣ
Bhadravathi karnataka
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.