•  
  •  
  •  
  •  
Index   ವಚನ - 78    Search  
 
ಪಂಚಾಕ್ಷರಿಸ್ಥಲ - ಮಂತ್ರ
ವಶ್ಯವ ಬಲ್ಲೆವೆಂದೆಂಬಿರಯ್ಯಾ, ಬುದ್ಧಿಯನರಿಯದ ಮನುಜರು ಕೇಳಿರಯ್ಯಾ: ವಶ್ಯವಾವುದೆಂದರಿಯದೆ ಮರುಳುಗೊಂಬಿರೆಲೆ, ಗಾವಿಲ ಮನುಜರಿರಾ! 'ಓಂ ನಮಃ ಶಿವಾಯ'-ಎಂಬ ಮಂತ್ರ ಸರ್ವಜನವಶ್ಯ, ಕೂಡಲ ಸಂಗಮದೇವಾ.
Transliteration Vaśyava ballevendembirayyā, bud'dhiyanariyada manujaru kēḷirayyā: Vaśyavāvudendariyade maruḷugombirele, gāvila manujarirā! 'Ōṁ namaḥ śivāya'-emba mantra sarvajanavaśya, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You say you have the power to charm : Listen, you innocent of sense ! You only beguile yourselves, you boors, Not knowing what it is to charm ! The spell 'Ōṁ Namaḥ Śivāya' itself Is an all-subduing charm. Translated by: L M A Menezes, S M Angadi
Hindi Translation हमें वशीकरण विदित है कहनेवाले बुद्धिहीन मानवो, सुनो; वशीकरण बिना जाने पागल बनते हो गँवार मानवो ! ‘ऊँ नमः शिवाय’ नामक मंत्र सर्वजन वश्य मंत्र है, कूडलसंगमदेव॥ Translated by: Banakara K Gowdappa
Telugu Translation వశ్యవిద్య తెలిసితి మంటిరే ఓ మతి చెడ నరులారా వినుడో! వశ్య మేదియో తెలియక మరులుగొంటి రే? పామరులారా! ‘‘ఓం నమశ్శివాయ’’ అను మంత్రము సర్వజన వశ్యము కూడల సంగమదేవా! Translated by: Dr. Badala Ramaiah
Tamil Translation வசியந்தனை அறிவோமென உரைப்பீர் ஐயனே; பேதையீர், கேண்மின் வசியம் எது என அறியாது மருள் கொள்வீர், பேதையீர் “ஓம் நமச்சிவாய” எனும் மந்திரம் எல்லீரையுமீர்க்குமால் கூடல சங்கம தேவனே. Translated by: Smt. Kalyani Venkataraman, Chennai
Marathi Translation जाणोनि काय, वशीकरण कला बुद्धीहीन झाला, असूनी तू ॐ नमः शिवाय, मंत्र एक षडाक्षर वणीकरण सारे, साठियले कूडलसंगमदेवा! सोडूनी शिवशिवा मतिहीन मानवा, होशी कारे अर्थ - संमोहन, सर्ववशीकरण (राज, स्त्री व जनवशीकरण) जाणून घेऊन काय मिळणार? लोकांना बडेजावपणा दखविण्यासाठी या तंत्राचा उपयोग कराल का ? आणि त्यातून काय साधेल याचा विचार केला आहे का? यातून काहीही प्राप्त होणार नाही वशीकरण कला जाणणारे दुःखी होतात. निजानंद मिळणार नाही. इतरांना वा समाजाला त्याची गरजही नाही. म्हणून ओम् नमः शिवाय या मंत्राचा जप, ध्यान व मनन करा, त्यात सर्वाच्या वशीकरणाचा महामंत्र साठलेला आहे या महामंत्रामुळे आपण सर्वच चाहते व्हाल. शेवटी परमेश्वराचेही चाहते व्हाल. सर्वच आपले आहेत अशी भावना होईल. चांगले विचार निश्चीत येऊ लागतील. आणि दृष्टी विशाल होईल. मन निर्विकार होईल. व मोक्ष मिळवाल म्हणून वशीकरणासारख्या अघोरी विद्या मागे लागून जीवन वाया न घालविता ॐ नमः शिवाय सारख्या महामंत्राला वशीकरण करा. Translated by Rajendra Jirobe, Published by V B Patil, Hirabaug, Chembur, Mumbai, 1983 वशीकरण असे म्हणणाऱ्या बुध्दीहीन मानवा ऐका. वशीकरण काय आहे हे जाणल्याविना वेड लागले गाफिल मानवा. ॐ नमः शिवाय हा मंत्रच सर्व लोकांना वशीकरण आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಗಾವಿಲ = ದಡ್ಡ; ಮರುಳ = ಮೂರ್ಖ, ದಡ್ಡ; ವಶ್ಯ = ಜನರನ್ನು ವಶ ಮಾಡಿಕೊಳ್ಳುವ ವಿದ್ಯೆ;
ಕನ್ನಡ ವ್ಯಾಖ್ಯಾನ ಮುಗ್ಧರನ್ನೋ ವಿದಗ್ಧರನ್ನೋ ಮಚ್ಚರಿಗರನ್ನೋ ಮಹಾಶತ್ರುಗಳನ್ನೋ ಪ್ರತಿಷ್ಠಾವಂತರನ್ನೋ ಬಲಿಷ್ಠರನ್ನೋ, ಕೊನೆಗೆ ಹೆಂಡಿರನ್ನೋ ಮಕ್ಕಳನ್ನೋ ತನ್ನಂತೆ ಮಾಡಿಕೊಳ್ಳಲು ಮಾಂತ್ರಿಕರ ಮರೆಹೊಕ್ಕು ಅವರು ಕೊಟ್ಟ “ವಶ್ಯ” ಮಂತ್ರವನ್ನು ಆ ವೇಳೆಯಲ್ಲಿ ಆ ಸ್ಥಾನದಲ್ಲಿ ಅವಮಾನಕರ ರೀತಿಯಲ್ಲಿ ಬಡಬಡಿಸಿಯೋ, ಓಲೆ-ತಾಮ್ರ-ಬೆಳ್ಳಿ-ಚಿನ್ನದ ರೇಕುಗಳ ಮೇಲೆ ಬರೆಸಿ ಅಂತ್ರವೆಂದೋ ಯಂತ್ರವೆಂದೋ ತೋಳು-ಕೊರಳು-ಸೊಂಟಕ್ಕೆ ಕಟ್ಟಿಸಿಕೊಂಡೋ ಪಡಬಾರದ ಪಾಡು ಪಡುವ ಮೂಢರನ್ನು ಕಂಡು ಸಖೇದಾಶ್ಚರ್ಯದಿಂದ ಬಸವಣ್ಣನವರು ಆಡಿದ ಮಾತಿದು. ಎಲ್ಲರನ್ನೂ ಒಬ್ಬರ ಅಭಿಮಾನಕ್ಕೂ ಧಕ್ಕೆಯಾಗದಂತೆ ವಶಪಡಿಸಿಕೊಳ್ಳುವಂಥ ನಿಜವಾದ ವಶ್ಯವೆಂದರೆ ಓಂ ನಮಶ್ಯಿವಾಯ ಎಂಬ ಶಿವಮಂತ್ರ ಒಂದೆ, ಅದನ್ನು ಸದ್ಗುರುವಿನತ್ತಣಿಂದ ಪಡೆದು, ಮನಸ್ಸಿನಲ್ಲಿ ಅಚ್ಚೊತ್ತಿ, ಹೃದಯದಲ್ಲಿಕಟ್ಟಿಕೊಂಡರೆ-ಅದು ಸರ್ವರನ್ನೂ ನಮಗೆ ಪ್ರಿಯರೂ ದಾಕ್ಷಿಣ್ಯಪರರೂ ಆಗಿರುವಂತೆ ಪರಿವರ್ತಿಸುವುದು. ಲೋಕದಲ್ಲಿ ಒಲುಮೆಯನ್ನು ಕಾಣಬೇಕಾದರೆ-ಒಲಿಸಿಕೊಳ್ಳುವುದಲ್ಲ ಮಾರ್ಗ-ಒಲಿಯುವುದು ಮಾರ್ಗ, ವಿಶ್ವಪ್ರೇಮಿಗಳಾಗಿ ಬದುಕುವುದು ಮಾರ್ಗ, ಕಿರುಕುಳ ದೈವಗಳ ಹೆಸರೆತ್ತಿ ಸ್ವಾರ್ಥೈಕಪರರಾಗಿ ರಾಗ ದ್ವೇಷಗಳಿಂದ ಚಡಪಡಿಸುವುದಲ್ಲ ಮಾರ್ಗ. ಲೋಕನಾಥನಾದ ಶಿವನಿಗೇ ಶರಣಾಗತರಾದವರಿಗೆ ಲೋಕವೇ ಇಡಿಯಾಗಿ ಮಡಿಯಾಗಿ ಮನಃ ಪೂರ್ವಕವಾಗಿ ಜಾತ್ರೆ ಬಂದು ಶರಣೆನ್ನುವುದು ಎಂಬ ಧಾಟಿಯಿದೆ ಬಸವಣ್ಣನವರ ಈ ವಚನದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು