•  
  •  
  •  
  •  
Index   ವಚನ - 79    Search  
 
ಪಂಚಾಕ್ಷರಿಸ್ಥಲ - ಮಂತ್ರ
ಭವಬಂಧನ-ದುರಿತಂಗಳ ಗೆಲುವೊಡೆ 'ಓಂ ನಮಃ ಶಿವಾಯ'-ಶರಣೆಂದಡೆ ಸಾಲದೆ? 'ಹರ ಹರ ಶಂಕರ, ಶಿವ ಶಿವ ಶಂಕರ, ಜಯ ಜಯ ಶಂಕರ ಶರಣೆʼನ್ನುತ್ತಿರ್ದೇನೆ; ಎನ್ನ ಪಾತಕ ಪರಿಹಾರ! ʼಕೂಡಲಸಂಗಮದೇವಾ ಶರಣೆʼನ್ನುತ್ತಿರ್ದೇನೆ.
Transliteration Bhavabandhana-duritaṅgaḷa geluvoḍe 'ōṁ namaḥ śivāya'-śaraṇendaḍe sālade? 'Hara hara śaṅkara, śiva śiva śaṅkara, jaya jaya śaṅkara śaraṇeʼnnuttirdēne; enna pātaka parihāra! ʼkūḍalasaṅgamadēvā śaraṇeʼnnuttirdēne.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 To tame the sins that bind you to this life Won't it suffice to say : 'Ōṁ Namaḥ Śivāya: I bow'? I keep on saying: 'Hara, Hara, Saṅkara,Śiva ,Śiva,Saṅkara Hail, O hail,Saṅkara : to thee I bow', And all my sins are gone ! I keep on saying : 'To thee I bow, O Lord Kūḍala Saṅgama ! Translated by: L M A Menezes, S M Angadi
Hindi Translation भवबंधन-दुरित को जीतना हो, तो ‘ऊँ नमः शिवाय’ की शरण लेना पर्याप्त नहीं? हर हर शंकर, शिव शिव शंकर, जय जय शंकर कह तव शरण लेता हूँ मेरे पापहर कूडलसंगमदेव, तव शरण लेता हूँ ॥ Translated by: Banakara K Gowdappa
Telugu Translation భవబంధనదురితంబులు గెలువగ; ఓం నమశ్శివాయః శరణన చాలదే! హరహర శంకర; శివశివ శంకర; జయజయ శంకర; శరణనుచుంటి మత్పాతకపరిహార; సంగమదేవా; శరణనుచుంటి. Translated by: Dr. Badala Ramaiah
Tamil Translation பிறவிக்கட்டு, தீவினைகளை வெல்ல வேண்டுமெனின், “ஓம் நமச்சிவாய சிவனே தஞ்சம்” எனின் போதாதோ? “அர அர சங்கர”, “சிவ சிவ சங்கர” “சய சய சங்கர” தஞ்சமெனப் பகர்கிறேன். என் தீவினையினின்று விடுபட கூடல சங்கம தேவனே தஞ்சம் எனப் பகர்கின்றேனே. Translated by: Smt. Kalyani Venkataraman, Chennai
Marathi Translation भवबंधनाचे दुःख नष्ट करण्यासाठी ॐ नमः शिवाय मंत्राला शरण जाणे पूरेसे नाही का ? हर हर शंकर, शिव शिव शंकर, जय जय शंकर शरणागत झालो, माझे पातक नष्ट करावे. कूडलसंगमदेवा मी शरण आलो. Translated by Shalini Sreeshaila Doddamani
ಶಬ್ದಾರ್ಥಗಳು ದುರಿತ = ಕಷ್ಟ; ಪಾತಕ = ಪಾಪ, ದೋಷ, ಪಾಪಿ; ಭವ = ಜೀವನ;
ಕನ್ನಡ ವ್ಯಾಖ್ಯಾನ ಶಿವಪಂಚಾಕ್ಷರಮಂತ್ರವನ್ನು ನಮಶ್ಯಿವಾಯ ಎಂದು ನಮಶ್ಯಬ್ದಪೂರ್ವಕವಾಗಿ ಉಚ್ಚರಿಸಬೇಕು-ಶಿವಾಯನಮಃ ಎಂದಲ್ಲ ಅದೇ ಮಂತ್ರವನ್ನು ಓಂಕಾರಪುರಸ್ಸರವಾಗಿ ಉಚ್ಚರಿಸಿದರೆ ಅದು ಓಂ ನಮಶ್ಯಿವಾಯವೆಂದಾಗಿ ಷಡಕ್ಷರಿಯೆನಿಸಿಕೊಳ್ಳುವುದು. ಈ ಷಡಕ್ಷರಮಂತ್ರದಲ್ಲಿರುವ ನ-ಮ-ಶ್ಶಿ-ವಾ-ಯವೆಂದು ಐದು ಅಕ್ಷರಗಳು ಶಿವತತ್ತ್ವದ ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣವೆಂಬ ಐದು ಲಕ್ಷಣಕ್ಕೆ, ಅನಾದಿ-ಲಿಂಗಕ್ಷೇತ್ರ-ಶರೀರಸ್ಥ-ಗೂಢ-ಪರವೆಂಬ ಐದು ಸಂಜ್ಞೆಗಳಿಗೆ, ಮತ್ತು ಸದಾಶಿವತತ್ತ್ವದ ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ ಪಂಚ ಮುಖಗಳಿಗೆ,ಕರ್ಮ-ಕರ್ತೃ-ಮೂರ್ತ-ಅಮೂರ್ತ-ಶಿವ ಎಂಬ ಐದು ಸಾದಾಖ್ಯಗಳಿಗೆ,ಕ್ರಿಯಾ-ಜ್ಞಾನ-ಇಚ್ಛಾ-ಆದಿ-ಪರಾ ಎಂಬ ಐದು ಶಕ್ತಿಗಳಿಗೆ ಕ್ರಮವಾಗಿ ಪ್ರತೀಕವಾಗಿವೆ. ಓಂಕಾರವಾದರೋ ಮೇಲೆ ಹೇಳಿದ ಪಂಚ ಲಕ್ಷಣಗಳನ್ನೂ ಪಂಚ ಸಂಜ್ಞೆಗಳನ್ನೂ ಪಂಚ ಮುಖಗಳನ್ನೂ ಪಂಚ ಸಾದಾಖ್ಯಗಳನ್ನೂ ಪಂಚ ಶಕ್ತಿಗಳನ್ನೂ ಒಳಗೊಂಡಿರುವುದೇ ಅಲ್ಲದೆ ಅವೆಲ್ಲಕ್ಕೂ ಅತೀತವಾದುದರ ಸಂಕೇತವಾಗಿ ಸಾಕ್ಷಾತ್ ಪರಶಿವನೇ ಆಗಿದೆ-ಇಷ್ಟೆಲ್ಲ ಪ್ರಾಶಸ್ತ್ಯ ಓಂ ನಮಶ್ಯಿವಾಯವೆಂಬ ಷಡಕ್ಷರಮಂತ್ರಕ್ಕಿರುವುದಾಗಿ ತತ್ತ್ವಜ್ಞಾನಿಗಳು ಶಿವಾಗಮಾದಿ ಗ್ರಂಥೋಲ್ಲೇಖದಿಂದ ಪ್ರತಿಪಾದಿಸುವರು. ಸೂಕ್ಷ್ಮತಂತ್ರದಲ್ಲಿಯಾದರೋ ಈ ಮಂತ್ರಾಕ್ಷರಗಳನ್ನು “ನಮಶ್ಯಿವಾಯ ಓಂ”ಕ್ರಮದಲ್ಲಿ ಭಕ್ತ-ಮಾಹೇಶ್ವರ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯವೆಂಬ ಷಟ್ಸ್ಥಲದೊಡನೆ, ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ-ಪ್ರಸಾದಲಿಂಗ-ಮಹಾಲಿಂಗವೆಂಬ ಷಡ್ಲಿಂಗದೊಡನೆ ಸಮೀಕರಿಸಲಾಗಿದೆ. ಹೀಗೆ ಪ್ರಾಚೀನ-ಅರ್ವಾಚೀನ ಶೈವವೆರಡರ ದೃಷ್ಟಿಯಿಂದಲೂ ಮಹಿಮಾನ್ವಿತವೆನಿಸಿಕೊಂಡಿದೆ ಶಿವ ಷಡಕ್ಷರ ಮಂತ್ರ. ಬಂಧನವನ್ನು ಕತ್ತರಿಸಿಕೊಂಡು ಬಿಡುಗಡೆಯನ್ನು ಪಡೆಯಲು ಹೆಣಗುವ ಜೀವಜಾಲದ ಉಸುರಿನ(ಶಬ್ಧ)ರೂಪವೇ ಆಗಿದೆ ಈ ಶಿವಷಡಕ್ಷರ. ಮಂತ್ರ,ಅದುದರಿಂದಲೇ ಬಸವಣ್ಣನವರು ಈ ವಚನದಲ್ಲಿ-“ಭವಬಂಧನದುರಿತಂಗಳ ಗೆಲುವೊಡೆ ಓಂ ನಮಶ್ಯಿವಾಯ ಶರಣೆಂದರೆ ಸಾಲದೇ” ಎನ್ನುತ್ತ ಪ್ರಶ್ನಿಸಿ-ಆ ಸಂಬಂಧವಾದ ಸಂಶಯವನ್ನೆಲ್ಲ ನೀಗಿ ಶಿವಭಕ್ತರಿಗೆ ಹುರಿದುಂಬಿಸುತ್ತಿರುವರು ಇಲ್ಲಿ ಬಸವಣ್ಣನವರು ತಮ್ಮ ಚಿಕ್ಕಂದಿನ ಕೂಡಲ ಸಂಗಮದ ಸ್ವಂತ ಅನುಭವವನ್ನೇ ಕುರಿತು ಹೇಳುತ್ತಲೂ ಇರುವರೆನಿಸುವುದು-ನೋಡಿ ಬಸವರಾಜದೇವರ ರಗಳೆ: ದಿನದಿನಕೆ ಘಳಿಗೆಘಳಿಗೆಗೆ ಭಕ್ತಿ ಮಿಗಿಲಾಗೆ ಅನುದಿನಂ ನೇಹವಿಮ್ಮಡಿಸಿ ನೂರ್ಮಡಿಯಾಗೆ ಸಂಗನಾಮಂಗಳಂ ಪುರಜನಕ ಕಲಿಸುತಂ ಸಂಗ ಶರಣೆಂದವರ ಪದತಳಿಕ್ಕೆರಗುತಂ -ಇತ್ಯಾದಿ. ಮತ್ತು ಈ ವಚನದಲ್ಲಿ ಷಡಕ್ಷರಮಂತ್ರವನ್ನೇ ಅಲ್ಲದೆ ಅದರ ಜೊತೆಗೆ-“ಹರಹರ ಶಂಕರ, ಶಿವಶಿವ ಶಂಕರ, ಜಯಜಯ ಶಂಕರ ಶರಣೆನುತ್ತಿದ್ದೇನೆ” ಎಂಬ ವಾಕ್ಯಗಳನ್ನು ಅನುಸಂಧಾನಿಸಿ-ಭಕ್ತರು ಉಚ್ಚರಿಸಬಹುದಾದ ಶಿವಮಂತ್ರವೆಂದರೆ ಓಂ ನಮಶ್ಯಿವಾಯವೆಂಬುದಷ್ಟೇ ಅಲ್ಲ,ಅದರ ಜೊತೆಗೆ ಹರಹರ ಶಂಕರ ಮುಂತಾದ ಶಿವಪರ್ಯಾಯನಾಮಗಳನ್ನೂ ಸೇರಿಸಿ ಉಚ್ಚರಿಸಬಹುದೆಂದೂ,ಹಾಗೆ ಉಚ್ಚರಿಸುವುದರಿಂದ ಮುಖ್ಯ ಮಂತ್ರಕ್ಕೆ ಉಪಚಾರವೇ ಆದೀತು ಅಪಚಾರವಲ್ಲವೆಂದೂ ಬಸವಣ್ಣನವರು ಅಭಿಪ್ರಾಯಪಟ್ಟಿರುವಂತಿದೆ, ಇದನ್ನು ಸಾಬೀತುಪಡಿಸಲು-ನರಕದಲ್ಲಿ ಬಿದ್ದವರನ್ನು ಮೇಲೆತ್ತಲು ಸಾನಂದಗಣೇಶ್ವರನು(ಸ್ಕಂದಪುರಾಣದ ಪ್ರಕಾರ) ಉಚ್ಚರಿಸಿ(ಹೇಳಿ)ದನೆಂಬ ಈ ಮುಂದಣ ಮಂತ್ರವಿನ್ಯಾಸವನ್ನೂ ಗಮನಿಸ ಬಹುದು : ಹರಹರ ಇತಿ ಶಬ್ಧಮಾದಿತೋ ವೈ ಮುಹುರಭಿದಾಯ ಮುನೀಂದ್ರ ವೃಂದವಂದ್ಯಃ | ಅಪಠದಖಿಲಮೇಘಘೋಷಸಾಮ್ಯಂ ಸಕಲಹಿತಾಯ ನಮಶ್ಯಿವಾಯಮಂತ್ರಂ || (ಶಿವಮಂತ್ರಜಪವಿಧಿ-ಸಂಗ್ರಹಕರ್ತಾ : ಹುಬ್ಬಳ್ಳಿ ಮೂರು ಸಾವಿರ ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಗಂಗಾಧರ ಮಹಾಸ್ವಾಮಿಗಳು ಕ್ರಿ.ಶ 1921)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು