ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
'ಓಂ ನಮಃ ಶಿವಾಯ', 'ಓಂ ನಮಃ ಶಿವಾಯ' ಎನುತಿರ್ದೇನೆ.
ಎನಗಿದೇ ಮಂತ್ರ; ಎನಗಿದೇ ಜಪ;
ಕೂಡಲಸಂಗಮದೇವಾ, ನೀನೇ ಬಲ್ಲೆ, ಎಲೆ ಲಿಂಗವೇ.
Transliteration Enna manadalli mattondanariyenayyā,
'ōṁ namaḥ śivāya', 'ōṁ namaḥ śivāya' enutirdēne.
Enagidē mantra; enagidē japa;
kūḍalasaṅgamadēvā, nīnē balle, ele liṅgavē.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Nought else I know
Within my heart :
I keep on saying : 'Ōṁ
Namaḥ Śivāya !'
This is the charm for me,
This is my talisman,
This is my telling of beads :
Thou only knowest, O Liṅga
O Kūḍala Saṅgama Lord !
Translated by: L M A Menezes, S M Angadi
Hindi Translation मैं अपने मन में और कुछ नहीं जानता,
‘ऊँ नमः शिवाय’ ‘ऊँ नमः शिवाय’ जप रहा हूँ,
मेरे लिए यही मंत्र है, यही जप है,
कूडलसंगमदेव, लिंगदेव, यह तुम ही जानते हो ॥
Translated by: Banakara K Gowdappa
Telugu Translation మన్ననంబున వేరొండు తెలియనయ్య;
ఓం నమశ్శివాయ; ఓం నమశ్శివాయ యనుచుంటి:
నా మంత్ర మిదే నా తంత్ర మిదే;
నా జపమిదే; శివా; ఇది నీకే తెలుసునయ్యా.
Translated by: Dr. Badala Ramaiah
Tamil Translation என்னுள்ளத்திலே பிறிதொன்றை அறியேன் ஐயனே,
“ஓம் நமச்சிவாய”, “ஓம் நமச்சிவாய” எனப் பன்னுகிறே னையனே,
எனக்கு இதே மந்திரம் செபம்,
கூடல சங்கம தேவனே நீரேயறிவீர், இலிங்கமே.
Translated by: Smt. Kalyani Venkataraman, Chennai
Marathi Translation
माझ्या मन दुसरे काहीही जाणत नाही.
ॐ नमः शिवाय, ॐ नमः शिवाय हाच माझा मंत्र, हाच जप.
कूडलसंगमेश्वरलिंगा हे आपणच जाणता.
Translated by Shalini Sreeshaila Doddamani
ಶಬ್ದಾರ್ಥಗಳು ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು; ತಂತ್ರ = ಆಗಮ ಶಾಸ್ತ್ರ;
ಕನ್ನಡ ವ್ಯಾಖ್ಯಾನ ಶಿವಮಂತ್ರವನ್ನು ಇಂಥ ಪ್ರದೇಶದಲ್ಲಿ, ಇಂಥ ಸಮಯದಲ್ಲಿ, ಇಂಥ ಆಸನದಲ್ಲಿ ಕುಳಿತು ಜಪಿಸಿದರೆ ಇಂಥಿಂಥ ಫಲವಿದೆಯೆಂದೂ, ಜಪ ಮಾಡತ್ತ ಬೆರಳುಗಳನ್ನು ಉಪಯೋಗಿಸಿದರೆ-ಆ ಬೆರಳುಗಳಲ್ಲಿ ಎಣಿಕೆಯ ಕ್ರಮವೇನು, ಮಣಿಮಾಲೆ ಉಪಯೋಗಿಸಿದರೆ ಎಂಥ ಮಣಿ ಎಷ್ಟು ಮಣಿಯೆಂಬ ನಿಯಮಗಳನ್ನು ಹೇಳಿದೆ, ಜಪ ಮಾಡುವಾಗ ಪೇಟವಿಟ್ಟಿರಬಾರದು, ಅಂಗಿ ಧರಿಸಿರಬಾರದು, ನೀಚಪ್ರಾಣಿಗಳಿಗೆ ಕಾಣಬಾರದು ಎಂಬ ನಿಷೇಧಗಳಿವೆ, ಜಪಾರಂಭಕ್ಕೆ ಮೊದಲು ಪ್ರಾಣಾಯಾಮ ಮಾಡಬೇಕು,ಆಮೇಲೆ ಜಪಿಸುವ ಮಂತ್ರದ ದ್ರಷ್ಟಾರನಾದ ಋಷಿಯನ್ನು ಮಸ್ತಕದಲ್ಲಿ, ಅದರ ಛಂದಸ್ಸನ್ನು ಮುಖದಲ್ಲಿ, ಅಧಿದೇವತೆಯನ್ನು ಹೃದಯದಲ್ಲಿ, ಬೀಜವನ್ನು ನಾಭಿಯಲ್ಲಿ, ಕುಂಡಲಿನ್ಯಾದಿ ಶಕ್ತಿಯನ್ನು ಗುಹ್ಯದಲ್ಲಿ, ವಿಘ್ನನಿವರ್ತಕವಾದ ಕೀಲಕವನ್ನು ಪಾದದಲ್ಲಿ, ರಕ್ಷಕರಾದ ಉಮೆ ವಿಘ್ನೇಶ್ವರರನ್ನು ಕ್ರಮವಾಗಿ ಎಡಬಲ ಭುಜಗಳಲ್ಲಿ ನಮಸ್ಕಾರಪೂರ್ವಕವಾಗಿ ಆಗಾಗ ಆಯಾ ಸ್ಥಾನಗಳನ್ನು ಮುಟ್ಟಿಕೊಂಡು ಸ್ಮರಿಸಬೇಕು, ಆಮೇಲೆ ಕರನ್ಯಾಸಾದಿಗಳನ್ನು ಮಾಡಬೇಕು-ಮಾಡುವಾಗ ಇಂಥ ನ್ಯಾಸ ಇವರಿಗೆ,ಇಂಥ ನ್ಯಾಸ ಇವರಿಗಲ್ಲ, ಇಂಥ ಜಪಮಾಲೆಯನ್ನು ಈ ಬೆರಳುಗಳಿಂದ ಹಿಡಿಯಬೇಕು, ಈ ಬೆರಳುಗಳೆಂದ ಹಿಡಿಯಬಾರದು ಎಂಬವಿಧಿನಿಷೇಧವಿದೆ. ಆಮೇಲೆ ಮಂತ್ರಕ್ಕೆ ಒಂಬತ್ತು ಆವರಣಗಳಿವೆಯೆನ್ನುತ್ತ ಒಂದೊಂದು ಆವರಣದಲ್ಲಿ ಇಂತಿಷ್ಟು ದೇವತೆಗಳಿರುವರೆನ್ನಲಾಗಿದೆ-ಉದಾಹರಣೆಗೆ : ಮೂರನೇ ಆವರಣದಲ್ಲಿ ಉಮೆ-ಚಂಡೇಶ್ವರ-ನಂದಿಕೇಶ್ವರ-ಮಹಾಕಾಳ-ಭೃಂಗಿರಿಟಿ-ಗಣಪತಿ-ವೃಷಭ-ಷಣ್ಮುಖರೆಂಬ ಅಷ್ಟಗಣೇಶ್ಚರರಿರುವರೆಂದಿದೆ. ಈ ಆವರಣದೇವತೆಗಳ ಸಹಿತವಾಗಿಯೂ ಮಂತ್ರಾಧಿದೇವತೆಯನ್ನು ಧ್ಯಾನಿಸುತ್ತ ಜಪಿಸಬೇಕು. ಮತ್ತು ಇಂಥಿಂಥ ಫಲಕ್ಕಾಗಿ ಮಂತ್ರಾಕ್ಷರಗಳನ್ನು ಇಂಥಿಂಥ ಬಣ್ಣದಲ್ಲಿ ಇಂಥಿಂಥ ಮೂರ್ತಿರೂಪದಲ್ಲಿ ಜಪಿಸಬೇಕು.ಜಪ ಮುಗಿದ ಮೇಲೆ ಮರಳಿ ಪ್ರಾಣಾಯಾಮ ಮರಳಿ,ಮಂತ್ರದ ಛಂದಸ್ಸು ಋಷಿ ಮುಂತಾದುವನ್ನು ಸ್ಮರಿಸಬೇಕು. ಈ ಎಲ್ಲ ವಿಧಿ-ವಿಧಾನ-ನಿಷೇಧಗಳನ್ನು ಗುರುವಿನಿಂದಲೇ ತಿಳಿದು ಮಂತ್ರವನ್ನು ಜಪಿಸತಕ್ಕದ್ದು-ಸ್ವಂತ ಯುಕ್ತಿಯಿಂದಲೋ ಶಾಸ್ತ್ರಬಲದಿಂದಲೋ ಕಲ್ಪಿಸಿಕೊಂಡು ಜಪಿಸಲಾಗದು ಎಂದು ಮುಂತಾದ ನೂರಾರು ಕಟ್ಟುಪಾಡುಗಳಿವೆ.
ಶಿವನನ್ನು ಧ್ಯಾನಿಸುತ್ತ ಶಿವನಾಮವನ್ನು ಉಚ್ಚರಿಸುವಂಥ ನೈಜಭಕ್ತಿಗೂ ಷರತ್ತುಗಳು ಬಹಳವಿದ್ದು ಅವನ್ನು ಮೀರಿ ಜಪಿಸಿದರೆ ಉತ್ತಮ ಫಲ ದೊರೆಯುವುದಿಲ್ಲವಷ್ಟೇ ಅಲ್ಲ-ನಿಷ್ಫಲವಷ್ಟೇ ಅಲ್ಲ-ದುಷ್ಫಲ ಲಭಿಸೀತೆಂಬ ವಂಚಕ ಪುರೋಹಿತಷಾಹಿಯ ಬೆದರಿಕೆಗಳನ್ನು ಬಸವಣ್ಣನವರು ಉಪೇಕ್ಷಿಸಿ ‘ಮತ್ತೊಂದನರಿಯೆನಯ್ಯ” ಎನ್ನುತ್ತ ಬಹಳ ಗಂಭೀರವಾಗಿಯೇ ಪ್ರತಿಭಟಿಸಿದ್ದಾರೆ.
ಪ್ರಣವಪುರಸ್ಸರವೂ ನಮಶ್ಯಬ್ದಾದಿಯೂ ಆದ ಓಂ ನಮಶ್ಯಿವಾಯ ಮಂತ್ರವನ್ನು ಹೆಂಗಸರೂ ಶೂದ್ರರೂ ಜಪಿಸಬಾರದೆಂಬ-ಅದಕ್ಕೆ ಬದಲಾಗಿ ಅವರು “ಶಿವಾಯನಮಃ”ಎಂಬ ವಿನ್ಯಾಸದಲ್ಲಿ ಮಾತ್ರ ಶಿವ ಮಂತ್ರವನ್ನು ಜಪಿಸಬೇಕೆಂಬ ಅನೂಚಾನವಾಗಿ ಬಂದ ನೀಚೋಚ್ಚಭಾವಕಲುಷಿತ ಆಚಾರಾತಿರೇಕಗಳಿಗೆ ಬಸವಣ್ಣನವರು-ಅವನ್ನು ಪ್ರಸ್ತಾಪಿಸಿ ಅಲ್ಲಗಳೆಯುವಷ್ಟು ಗಣ್ಯತೆಯನ್ನೂ ಕೊಡಲೊಲ್ಲದೆ-ಅವನ್ನೆಲ್ಲ ತಮ್ಮ ಅವಜ್ಞಾ ಮೌನದಿಂದ ತಿರಸ್ಕರಿಸಿರುವರು.
ಹೀಗಾಗಿ ಸಪ್ತಕೋಟಿ ಮಂತ್ರಗಳಲ್ಲಿ ಅತಿಶ್ರೇಷ್ಠವೆನಿಸಿದ ಓಂ ನಮಶ್ಯಿವಾಯ ಮಂತ್ರವನ್ನು-ಅದರ ಮಿಥ್ಯಾವರಣಗಳಿಂದ ಬಿಡಿಸಿ ಭಕ್ತರ ಭಾವಪ್ರಭಾವಳಿಯ ಮಾನಸ ಪೀಠದ ಮೇಲೆ ರಾರಾಜಿಸುವಂತೆಯಾದರೂ ನಿರಾಭರಣಸುಂದರವಾಗಿಯೇ ಪ್ರತಿಷ್ಠಾಪಿಸಿರುವರು ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು