•  
  •  
  •  
  •  
Index   ವಚನ - 81    Search  
 
ಪಂಚಾಕ್ಷರಿಸ್ಥಲ - ಮಂತ್ರ
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದುದು ವೇದ! 'ಓಂ ನಮಃ ಶಿವಾಯ' ಎಂಬ ಮಂತ್ರವ ಮೀರಲಮ್ಮದೆ ನಿಂದುದು ಶಾಸ್ತ್ರ! 'ಓಂ ನಮಃ ಶಿವಾಯ' ಎಂಬ ಮಂತ್ರವ ಮೀರಲಮ್ಮದೆ ನಿಂದುದು ತರ್ಕ! ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ! ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ! ಕೂಡಲಸಂಗಮದೇವ ಶ್ವಪಚನ ಮೆರೆದೊಡೆ ಜಾತಿಭೇದವ ಮಾಡಲಮ್ಮವು!
Transliteration ʼōṁ namaḥ śivāya' emba mantrava mīralam'made nindudu vēda! 'Ōṁ namaḥ śivāya' emba mantrava mīralam'made nindudu śāstra! 'Ōṁ namaḥ śivāya' emba mantrava mīralam'made nindudu tarka! Bhayaṅkara bhramegoṇḍittu mantra-tantra! Śivanantuvanariyade cintisuttiddittu lōka! Kūḍalasaṅgamadēva śvapacana meredoḍe jātibhēdava māḍalam'mavu!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Ōṁ, namaḥ Śivāya !- Short of this spell the Veda stays ! 'Ōṁ, namaḥ Śivāya!- Short of this spell the Śāstra stays ! 'Ōṁ, namaḥ Śivāya !- Short of this spell the Tarka stays ! All charms and talismans are held Aghast and amazed ! Ignorant of Śiva's essence, the world Is troubled with thought. Since Lord Kūḍala Saṅgama upraised A sweeper, they can make no more Distinctions between caste and caste ! Translated by: L M A Menezes, S M Angadi
Hindi Translation ‘ऊँ नम शिवाय’ मंत्र का अतिक्रमण न करने के कारण वेद स्तब्ध हुए; ‘ऊँ नम शिवाय’ मंत्र का अतिक्रमण न करने के कारण शस्त्र स्तब्ध हुए; ‘ऊँ नम शिवाय’ मंत्र का अतिक्रमण न करने के कारण तर्क स्तब्ध हुए; भयंकर भ्रम में पडगये मंत्र-तंत्र शिव का मर्म न जान चिंताग्रस्त है यह लोक कूडलसंगमदेव ने श्वपच का सम्मान किया अतः वे जाति भेद नहीं कर सकते ॥ Translated by: Banakara K Gowdappa
Telugu Translation ఓం నమశ్శివాయ అను మంత్రమును మీర లేక వేదము నిల్చిపోయె; ‘‘ఓం నమశ్శివాయ’’ అను మంత్రమును; మీర లేక శాస్త్రము నిల్చిపోయె; ‘‘ఓం నమశ్శివాయ’’ యను మంత్రమును మీర లేక తర్కము నిలిచిపోయె; భయంకరభ్రమకు లోనయ్యే మంత్రతంత్రములు శివుని అంతు తెలియక చింతించుచుండె లోకము: కూడల సంగమదేవుడు శ్వపచుని మెరయింప జాతి భేదము సేయవయ్యె, Translated by: Dr. Badala Ramaiah
Tamil Translation ஓம் நமச்சிவாய எனும் மந்திரத்தை மீறலாகாது நின்றது வேதம். ஓம் நமச்சிவாய எனும் மந்திரத்தை மீறலாகாது நின்றது சாத்திரம். ஓம் நமச்சிவாய எனும் மந்திரத்தை மீறலாகாது நின்றது தருக்கம், அச்சம் நல்கும் மயக்கம் கொண்டது மந்திர -- தந்திரம். சிவநிலையினை அறியாது எண்ணியது உலகம். கூடல சங்கம தேவன் புலையனுக்கு அருள்வான் சாதி வேறுபாட்டினைச் செய்யான். Translated by: Smt. Kalyani Venkataraman, Chennai
Marathi Translation ॐ नमः शिवाय मंत्राला घाबरला टिकू न शकला, वेद मंत्र ॐ नमः शिवाय मंत्राला घाबरले तोडके पडले, शास्त्र मंत्र ॐ नमः शिवाय मंत्राला घाबरले भ्रमात पडले, मंत्र तंत्र न जाणता शिवाला, व्यर्थच जगले चिंतेत पडले, जगी लोक कूडलसंगमदेवा ! श्वपच न जाणिले जाती भेद केले, शतमूर्ख अर्थ - ओम नमः शिवाय या षडाक्षरी मंत्रापुढे वेद, शास्त्र, तर्क, मंत्र, तंत्र, हे सर्व टिकू शकले नाही. ते बंध- मोक्ष, द्वंद - कर्म, जात-पात, धर्म-कर्म, सुख-दुःख आवड-निवड, नकार-होकार, पाप-पुण्य इत्यादी काहीही सांगितल्यास शिव परमात्मा शिक्षा करील या भीतीमुळे तोंड उघडण्याची हिम्मत देखील करू शकले नाहीत. शिवाच्या षडाक्षरी मंत्रापुढे ते सारे घाबरून भ्रमात पडले व मौन धारण केले. ज्यांनी तोंड उघडण्याचा प्रयत्न केला त्यांना उलट भयंकर भ्रमात पडावे लागले. त्याचप्रमाणे जे लोक शिवाला व त्यांच्या मंत्राला जाणू शकले नाहीत. त्याला समजू शकले नाहीत ते देखील शेवटी चिंतेत राहूनच त्यांना आपली इहलोकीची यात्रा संपवून घ्यावी लागली. म्हणून ओम नम : शिवाय हा षडाक्षरी मंत्र मूल मंत्र जाणावा. जे लोक जाणू शकले ते शिवाचे शरण बनले. आणि त्यांनी जाती-भेद नष्ट केला. कारण माझ्या कूडल संगमदेवाला (शिवाला) जातीभेद मान्य नाही. तो दलितोद्धारक व मानवकोटीचा पालक आहे. Translated by Rajendra Jirobe, Published by V B Patil, Hirabaug, Chembur, Mumbai, 1983 ॐ नमः शिवाय मंत्राहून श्रेष्ठ झाले नाही वेद, ॐनमः शिवाय मंत्राहून श्रेष्ठ झाले नाही शास्त्र. ॐ नमः शिवाय मंत्राहून श्रेष्ठ झाले नाही तर्क. ॐ नमःशिवाय मंत्राहून श्रेष्ठ झाले नाही आगम. ॐ नमः शिवाय मंत्राहून श्रेष्ठ झाले नाही पुराण. भयंकर भ्रमाने ग्रासले मंत्र-तंत्राला, शिवाला जाणल्याविना चिंतेत पडले लोक, श्वपचोधारकर्ता कूडलसंगमदेवा समोर जातीभेद रहात नाही. Translated by Shalini Sreeshaila Doddamani
ಶಬ್ದಾರ್ಥಗಳು ತಂತ್ರ = ಆಗಮ ಶಾಸ್ತ್ರ; ತರ್ಕ = ಚರ್ಚೆ, ಷಡದರ್ಶನಗಳಲ್ಲಿ ಒಂದು; ಶ್ವಪಚ = ಚಾಂಡಾಲ;
ಕನ್ನಡ ವ್ಯಾಖ್ಯಾನ ಎಲ್ಲವನ್ನೂ ತನ್ನಂಶವೆಂದೇ ಮುದ್ದಿಸುವ ಶಿವನ ಮತ್ತು ಆ ಶಿವನಿಗೇ ಅಂಕಿತವಾದ ಓಂ ನಮಶ್ಯಿವಾಯವೆಂಬ ಷಡಕ್ಷರಮಂತ್ರದ ಗೂಢವನ್ನು ಅನ್ವಯಿಕವಾಗಿ ಬೇದಿಸಲಾರದೆ ಧರ್ಮಶಾಸ್ತ್ರಕಾರರೂ, ಅವರನ್ನೇ ಸಮರ್ಥಿಸಿಕೊಂಡು ಬಂದ ತಾರ್ಕಿಕರೂ ಈ ಎರಡಕ್ಕೂ ಅಡಿಪಾಯವಾಗಿದ್ದ ವೇದಪ್ರವರ್ತಕರೂ ಲೋಕದಲ್ಲಿ ನೀಚೋಚ್ಛಭಾವನೆಯನ್ನೇ ಉತ್ತು-ಬಿತ್ತಿ-ಬೆಳೆದರು, ಮಂತ್ರತಂತ್ತಜ್ಞರಾದರೋ ಗಣನೆಗೆ ಬಾರದ ಹುಡುಕುಳಿ ದೇವತೆಗಳನ್ನೆಲ್ಲ ಆಶ್ರಯಿಸಿ ಕಾಮದಿಂದಲೂ ಕ್ರೋಧದಿಂದಲೂ ಕೋಟ್ಯಂತರ ಮಂತ್ರಗಳನ್ನು ಕಟ್ಟಿ-ಅವುಗಳ ಉಪಾಸನೆಯ ಕ್ರಮವನ್ನೂ, ಪಡೆಯಬಹುದಾದ ಸಿದ್ಧಿಗಳನ್ನೂ ಕುರಿತಂತೆ ರಹಸ್ಯದ ಗುಂಗಿನಲ್ಲಿ ತಲೆಕೆಡಿಸಿಕೊಂಡರು. ಸತ್ಯ ಮತ್ತು ಜ್ಞಾನ ಮತ್ತು ಆನಂದಸ್ವರೂಪಿಯಾದ ಆ ಶಿವನ ಆಶಯವನ್ನು ಅರಿತು-ಈ ಯಾರೂ ಆ ಮಾರ್ಗವಾಗಿ ಮುಂದುವರಿಯದೆ ಎಲ್ಲರನ್ನೂ ಶೋಚನೀಯ ಸ್ಥಿತಿಗೆ ತಂದರು. ಓಂ ನಮಶ್ಯಿವಾಯ ಮಂತ್ರದ ವಾಚ್ಯನಾದ ಶಿವನು-ಜಾತಿಯಿಂದ ಕೀಳಾದ ಒಬ್ಬ ಅಂತ್ಯಜನನ್ನೂ ಮಮಕರಿಸಿರುವುದು ಶ್ವಪಚಯ್ಯ ಮಾದಾರಚೆನ್ನಯ್ಯ ಮುಂತಾದ ದಲಿತಸಂತರ ಜೀವನ ಸಂದರ್ಭಗಳಲ್ಲಿ ವ್ಯಕ್ತಪಟ್ಟಿರುವಾಗ-ಆ ಶಿವಾಶಯವನ್ನು ಮೀರಿ ಯಾರೂ ಮಾನವ ಸಮಾಜದ ಯಾವ ಸ್ತರದಲ್ಲಿಯೇ ಆಗಲಿ ಜಾತಿಭೇದವನ್ನು ಮಾಡಲಾಗದು. ಅದರೂ ಜಾತಿಯ ಜಾಲಗಳನ್ನು ನೇಯುವುದರಲ್ಲಿಯೇ ತಮ್ಮ ಪಾಂಡಿತ್ಯವನ್ನು ಮೆರೆದ ಶಿಷ್ಟರ ಶಾಸ್ತ್ರಗಳನ್ನು ಕುರಿತಂತೆ ಬಸವಣ್ಣನವರು ತಮ್ಮ ಅಸಂತೋಷವನ್ನು ಈ ವಚನದಲ್ಲಿ ಬಿಂಬಿಸಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು