•  
  •  
  •  
  •  
Index   ವಚನ - 82    Search  
 
ಪಂಚಾಕ್ಷರಿಸ್ಥಲ - ಶರಣಸತಿ-ಲಿಂಗಪತಿ
ಬಿಳಿಯ ಕರಿಕೆ, ಕಣಿಗಿಲೆಲೆಯ, ತೊರೆಯ ತಡಿಯ ಮಳಲ ತಂದು, ಗೌರಿಯ ನೋನುವ ಬನ್ನಿರೇ, ಚಿಕ್ಕ ಮಕ್ಕಳೆಲ್ಲರು ನೆರೆದು- ʼಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದುʼ.
Transliteration Biḷiya karike, kaṇigileleya, toreya taḍiya maḷala tandu, gauriya nōnuva bannirē, cikka cikka makkaḷellaru neredu- ʼanupamadāni kūḍalasaṅgamadēva gaṇḍanāgabēkenduʼ.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Bring with you the white grass, The oleander leaf, Sand from the river edge, And come. Gather ye, children: let us do Observance of the Gauri rite So Lord Kūḍala Saṅgama, The bountiful beyond compare, May be our husband ! Translated by: L M A Menezes, S M Angadi
Hindi Translation श्वेत दूर्वा, कणेर पत्र नदी तट की रेत लिए हे बालिकाओं, सब मिलकर आओ, हम गौरी का व्रत रखें, अनुपम दानी कूडलसंगमदेव पति बनें ॥ Translated by: Banakara K Gowdappa
Telugu Translation తెలిగరిక ; గన్నేరు; సెలయేటి యిసుక తెచ్చి అనుప మోదారుడగు సంగయ్యయే మగడు కావలేనని గౌరినోము నోచగ రండో బాలికలార! జతగూడి రండో రండు Translated by: Dr. Badala Ramaiah
Tamil Translation அறுகை அரளி இலையொடு ஆற்றுத்துறையின் மணலைத்தந்து கௌரி நோன்பு நூற்க வாரீர் சிறுசிறு குழந்தைகளனைவருங்கூடி இணையிலாவள்ளல் கூடல சங்கம தேவனைக் கொழுநனாக அடைதற்கு. Translated by: Smt. Kalyani Venkataraman, Chennai
Marathi Translation छोटी दुर्वा, शुभ्र कन्हेरीची फूले, नदी काठची वाळू आणूनी गौरीपूजा करु या ग. छोट्या-छोट्या मुली मिळूनी अनुपमदानी कूडलसंगमदेव पती मिळण्यासाठी पूजा करु. Translated by Shalini Sreeshaila Doddamani
ಶಬ್ದಾರ್ಥಗಳು ಅನುಪಮ = ಸಾಟಿ ಇಲ್ಲದ; ತಡಿ = ದಂಡೆ; ನೋನು = ವೃತ ಮಾಡು; ಮಳಲು = ಉಸುಕು;
ಕನ್ನಡ ವ್ಯಾಖ್ಯಾನ ಬಾಲ್ಯವಿವಾಹದ ಆಚರಣೆಯಿದ್ದ ಹಿಂದಿನ ಕಾಲದಲ್ಲಿ ದೊಡ್ಡವರು ಚಿಕ್ಕಚಿಕ್ಕ ಮಕ್ಕಳನ್ನು ಕೂಡಿಸಿಕೊಂಡು ತೊರೆಯ ತಡಿಗೆ ಹೋಗಿ ಮರಳನ್ನು ತರಿಸಿ ಕುಪ್ಪೆಮಾಡಿಸಿ ಅದನ್ನು ಗೌರಿಯೆಂದು ಕರೆದು ಅದಕ್ಕೆ ಬಿಳಿಯ ಗರಿಕೆಯ ಹುಲ್ಲು-ಕಣಿಗಿಲು ಹೂ-ಪತ್ರೆ ಮುಂತಾದವುಗಳಿಂದ ಪೂಜೆಮಾಡಿಸುತ್ತಿದ್ದರು. ತಪಸ್ಸುಮಾಡಿ ಶಿವನಂಥ ಒಳ್ಳೆಯ ಗಂಡನನ್ನು ಪಡೆದು ಜಗನ್ಮಾತೆಯಾದ ಗೌರಿದೇವಿಯನ್ನು ಪೂಜೆಯಿಂದ ಒಲಿಸಿಕೊಂಡರೆ-ಆ ಮಹಾಸತಿಯ ಅನುಗ್ರಹದಿಂದ ತಮ್ಮ ಮಕ್ಕಳಿಗೂ ಒಳ್ಳೆಯ ಗಂಡನೇ ಸಿಕ್ಕುವನೆಂಬ ವಿಶ್ವಾಸವೇ ಈ ಪೂಜೆಗೆ ಪ್ರೇರಕ. ಇಂಥ ಒಂದು ಆಚರಣೆಯ ಹಿನ್ನೆಲೆಯಲ್ಲಿ ಶರಣಸತಿ ಲಿಂಗಪತಿಸೂತ್ರದನ್ವಯ ಬಸವಣ್ಣನವರು ಜನರನ್ನು ಶಿವಪ್ರೇಯಸಿಯರಾಗಲು ಕರೆಯಿತ್ತಿರುವರು. ಹೆಣ್ಣೊಂದು ಒಳ್ಳೆಯ ಗಂಡನ್ನು ಪಡೆಯಲು ವ್ರತವನ್ನು ಮಾಡಬೇಕೆಂಬ,ಆ ವ್ರತವನ್ನು ಮಾಡಿಸಲೊಬ್ಬ ಬಂಧುವಿರಬೇಕೆಂಬ ಸಾದೃಶ್ಯದಲ್ಲಿ-ಬಸವಣ್ಣನವರೇ ಆ ಬಂಧುವಿನ ಸ್ಥಾನದಲ್ಲಿ ನಿಂತು ಜನರೆಲ್ಲರನ್ನೂ ಶಿವನೊಡತಣ ಭಕ್ತಿ ಸಂಸಾರಕ್ಕಾಗಿ ಆಹ್ವಾನಿಸುತ್ತಿರುವರು. ಆ ಜನರೂ ಆಧ್ಯಾತ್ಮಿಕವಾಗಿ ಚಿಕ್ಕ ಚಿಕ್ಕ ಮಕ್ಕಳೇ ಆಗಿರುವರು. ಆ ವಾತ್ಸಲ್ಯದಿಂದಲೇ ಬಸವಣ್ಣನವರು ಜನರನ್ನು ಅಕ್ಕರೆಯಿಂದ ಕರೆಯುತ್ತಿರುವರು. ಜನ ತಮ್ಮ ಜೀವನ ನದಿಯ ತಡಿಯಲ್ಲಿ ಮಾಡಬೇಕಾದ ಸಂಕಲ್ಪವಿದು, ನೇರವೇರಿಸಬೇಕಾದ ಪೂಜೆಯಿದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು