•  
  •  
  •  
  •  
Index   ವಚನ - 83    Search  
 
ಪಂಚಾಕ್ಷರಿಸ್ಥಲ - ಶುಭದಿನ
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ; ರಾಶಿ ಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ; ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ; ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ; ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ!
Transliteration Em'mavaru besagoṇḍare śubhalagnavennirayyā; rāśi kūṭa r̥ṇasambandhavuṇṭendu hēḷirayyā; candrabala tārābalavuṇṭendu hēḷirayyā; nāḷina dinakindina dina lēsendu hēḷirayyā; kūḍalasaṅgamadēvana pūjisida phala nim'madayyā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name - Vachana Dhare Vol -3 Singer : B.S.Mallikarjuna, Nanditha, Meghana Music : M.S. Maruthi Label : Ashwini audio
English Translation 2 Whenever our own say so Deem that to be The auspicious time ; Think the compatible signs are there, And that the union is predestinate ; That favourable are the moon and stars ; And that Today is better than tomorrow : The purchase that accrues To Lord Kūḍala Saṅgama worshippers Is thine ! Translated by: L M A Menezes, S M Angadi
Hindi Translation आप्त जनों के पूछने पर कहो, शुभ लग्न है, कहो, राशिकूट ऋणसंबंध प्रस्तुत है; कहो, चंद्रबल, ताराबल प्रस्तुत है, कहो, कल की अपेक्षा आज अच्छा है कूडलसंगमदेव का पूजा फल तुम्हारा है ॥ Translated by: Banakara K Gowdappa
Telugu Translation మావారు ప్రశ్నింప శుభ లగ్నంబని పల్కుడయ్యా, రాళికూటఋణసంబంధము గలదని చెప్పుడయ్యా: తారాబలచంద్రబలమున్నదని దెల్పుడయ్యా . నాటికంటే నేడే శుభదినమని చెప్పుడయ్యా, కూడల సంగమదేవుని పూజించిన ఫలము మీదయ్యా! Translated by: Dr. Badala Ramaiah
Tamil Translation எம்மவர் குறிகேட்பின், மங்கலநேரமென்பீ ரையனே, இராசிக் கூட்ட, கணஉறவு உண்டென உரைப்பீரையனே. சந்திரபலன், தாராபலன் உண்டெனப் பகர்வீரையனே, நாளையைவிட இன்றே நல்லநாளெனக் கூறுவீரையனே. கூடல சங்கம தேவனை வணங்கிய பலன் உம்மதையனே. Translated by: Smt. Kalyani Venkataraman, Chennai
Marathi Translation शरणांनी सांगितले तर तेच शुभलग्न समजावे. हाच उत्तम मुहुर्त, हाच शुभ मुहुर्त सांगावे. चंद्रबल आहे, ताराबल आहे म्हणूनी सांगावे उद्यापेक्षा आजचा दिवसच चांगला सांगावे. कूडलसंगमदेवाच्या पूजेचे फळ आपले आहे. Translated by Shalini Sreeshaila Doddamani
Urdu Translation بزرگ جب کوئی خدمت تمھیں سُپرد کریں یہ جان لوکہ بڑی شبھ گھڑی ہے پیشِ نظر فلک کو،چاند کو، تاروں کومہرباں سمجھو اوراپنےآپ کوفوراًہی وقفِ کارکرو نہ ہوگا آج سے بہترکسی طرح فردا تم اتنا جان کے پوجا کرو، جو روزانہ ملیں گے تم کویقیناً عبادتوں کے پھل ہمارےکوڈلا سنگا کی مہربانی سے Translated by: Hameed Almas
ಶಬ್ದಾರ್ಥಗಳು ಋಣ = ಉಪಕೃತ, ಉಪಕಾರ ಪಡೆದವ; ತಾರೆ = ನಕ್ಷತ್ರ; ಲೇಸು = ಒಳ್ಳೆಯದು;
ಕನ್ನಡ ವ್ಯಾಖ್ಯಾನ ಗುರುಗಳಲ್ಲಿಗೆ ಯಾರಾದರೊಬ್ಬರು ಬಂದು-ದೀಕ್ಷೆ ತೆಗೆದುಕೊಂಡು ಶಿವಪೂಜೆ ಮಾಡಬೇಕೆಂಬ ಹಂಬಲ ನನಗಾಗಿದೆ ಎಂದರೆ-ನೀನು ಕೇಳುವ ದೀಕ್ಷೆಗೆ ನೀನು ಬಂದಿರುವ ಈ ದಿನವೇ ನಾಳಿನ ದಿನಕ್ಕಿಂತ ಪ್ರಶಸ್ತವಾಗಿದೆ, ರಾಶಿಕೂಟಋಣಸಂಬಂಧ ಕೂಡಿಬಂದಿದೆ-ಎಂದು ಹೇಳಿ ಅಗಲೇ ಅವರಿಗೆ ದೀಕ್ಷೆಕೊಡಿರೆಂದು ಬಸವಣ್ಣನವರು ಆ ಗುರುವರ್ಗಕ್ಕೆ ವಿನಂತಿಸಿಕೊಳ್ಳುತ್ತಿರುವರು. ಅಲ್ಲದೆ ಭಕ್ತರು ದೀಕ್ಷೆಗೊಂಡು ಮಾಡಿದ ಶಿವಪೂಜೆಯ ಫಲದಲ್ಲಿ ಬಹುಪಾಲು ನಿಮ್ಮದೇ ಆಗುವುದೆಂದೂ ಅವರನ್ನು ಸಂಭಾವಿಸುತ್ತಿರುವರು.ಮಾಡಿದವನಿಗಿಂತ ಮಾಡಿಸಿದವನು ಹೆಚ್ಚಾಗಿ ಅನುಭವಿಸುವನೆಂಬುದು ಹೊಸ ಮಾತೇನಲ್ಲ-ಇದನ್ನು ದಂಡನೀತಿಯಿಂದ ಚೆನ್ನಾಗಿ ಮನವರಿಕೆಮಾಡಿಕೊಳ್ಳಬಹುದಾಗಿದೆ. ಶಿವ-ಜೀವರ ಮಿಲನರೂಪವಾದ ಇಂಥ ದೀಕ್ಷಾಮಂಗಳಕಾರ್ಯಕ್ಕೆ ಯಾವ ಕಾರಣದಿಂದಲಾಗಲಿ ಯಾರೂ ಅಡ್ಡಿಮಾಡಬಾರದೆಂಬಲ್ಲಿ-ಕಾಲ್ಪನಿಕವಾದ ಜ್ಯೋತಿಷ್ಯಕಾರಣಗಳಿಂದ ಅಡ್ಡಿಪಡಿಸುವುದಂತೂ ಸಲ್ಲದು ಎಂಬಂತೆ-ಬಸವಣ್ಣನವರು ಗುರುವರ್ಗದಿಂದ ಹೆಚ್ಚು ವೈಚಾರಿಕತೆಯನ್ನು ನಿರೀಕ್ಷಿಸುತ್ತಿರುವರು. ಮತ್ತು ದೀಕ್ಷಾರ್ಥಿಯಾಗಿ ಬಂದವರು ಹುಟ್ಟಿನಿಂದ ಲಿಂಗಾಯಿತರೇ ಆಗಿರಬೇಕಾಗಿಲ್ಲವೆಂಬಂತೆ ಎಲ್ಲರನ್ನೂ “ಎಮ್ಮವರು” ಎಂದು ವ್ಯವಹರಿಸುವ ಬಸವಣ್ಣನವರ ಜಾತ್ಯತೀತ ನಿಲುವನ್ನು ಈ ವಚನದಲ್ಲಿ ಗುರುತಿಸಬಹುದಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು