•  
  •  
  •  
  •  
Index   ವಚನ - 85    Search  
 
ಲಿಂಗಧಾರಣಸ್ಥಲ - ಆತ್ಮಶುದ್ಧಿ
ಲಿಂಗದ ಉಂಡಿಗೆಯ ಪಶುವಾನಯ್ಯಾ; ವೇಷಧಾರಿಯಾನು, ಉದರಪೋಷಕ ನಾನಯ್ಯಾ; ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು!
Transliteration Liṅgada uṇḍigeya paśuvānayyā; vēṣadhāriyānu, udarapōṣaka nānayyā; kūḍalasaṅgana śaraṇara dharmada kavileyānu!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I'am Liṅga's branded beast, A wearer of the garb, A feeder of my belly, Lord ; I am a cow Of Kūḍala Saṅga's Śaraṇās grace. Translated by: L M A Menezes, S M Angadi
Hindi Translation लिंग का मुद्रित पशु मैं हूँ, वेषधारी हूँ, उदर-पोषक हूँ, कूडलसंगमदेव के शरणों के घरों की दया की कपिला हूँ ॥ Translated by: Banakara K Gowdappa
Telugu Translation లింగముద్ర గల పశువు నేనయ్యా; వేషధారి నేను ఉదరపోషకుడ నేనయ్యా: కూడల సంగని శరణుల ధర్మకపిల నేనయ్య! Translated by: Dr. Badala Ramaiah
Tamil Translation இலிங்க முத்திரைப்பசு நான் ஐயனே, பொய்ம்மையோன் நான் வயிறு வளர்ப்போன் நான் ஐயனே, கூடல சங்கனின் அடியார்தம் அறத்திற்கு ஈந்த பசு நான் ஐயனே. Translated by: Smt. Kalyani Venkataraman, Chennai
Marathi Translation लिंगदेवाच्या मुद्रेचा पशू मी आहे. वेषधारी उदर पोषक मी आहे. कूडलसंगमदेवाच्या शरणाच्या धर्माची गाय मी आहे. Translated by Shalini Sreeshaila Doddamani
ಶಬ್ದಾರ್ಥಗಳು ಉಂಡಿಗೆ = ಮುದ್ರೆ; ಉದರ = ಹೊಟ್ಟೆ; ಕವಿಲೆ = ಆಕಳು;
ಕನ್ನಡ ವ್ಯಾಖ್ಯಾನ ಶಿವಲಾಂಛನಧಾರಿಯಾದರೂ ಆಂತರ್ಯದಲ್ಲಿ ತಮಗೆ ಶಿವಭಕ್ತಿ ಕುದುರಿಲ್ಲವೆಂಬ ಕೊರಗು ಮೊದಮೊದಲಲ್ಲಿ ಬಸವಣ್ಣನವರನ್ನು ಕಾಡುತ್ತಲೇ ಇತ್ತು. ಅಂಥ ಸಂದರ್ಭಗಳಲ್ಲಿ ಶಿವಲಾಂಛನ ಧರಿಸಿಯೂ, ಮೇದು ಮಲಗುವುದರಲ್ಲಿಯೇ ಮಗ್ನವಾಗಿರುವ (ಶರಣರ ಮನೆಯ) ಪಶು (ಹಸು)ವಿನ ಚಿತ್ರ ತಮ್ಮ ಭಾವಚಿತ್ರವಾಗಿ ಕಂಡು ಅವರು ಜುಗುಪ್ಸೆಪಟ್ಟಿದ್ದೂ ಉಂಟು. ಇಂಥ ದಾರುಣ ಸಂದರ್ಭಗಳಲ್ಲಿ ಬಸವಣ್ಣನವರಿಗಿದ್ದ ಒಂದು ಸಮಾಧಾನವೆಂದರೆ-ಆ ಶರಣರ ಮನೆಯ ಸೇವೆಯಾದರೂ ತಮಗೆ ದೊರೆತಿದೆಯೆಂಬುದು. ಕಪಿಲೆಯೆಂದರೆ ಹಸುವೆಂಬಲ್ಲಿ-ಶರಣರ ಮನೆಯ ಹಸುಕರುಗಳಿಗೂ ಲಿಂಗಮುದ್ರೆಯನ್ನು ಒತ್ತುತ್ತಿದ್ದರೆಂಬುದನ್ನು ಮರೆಯಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು