•  
  •  
  •  
  •  
Index   ವಚನ - 86    Search  
 
ಲಿಂಗಧಾರಣಸ್ಥಲ - ಶಿವಜ್ಙಾನ
ನಮಃ ಶಿವಾಯ, ನಮಃ ಶಿವಾಯ, ನಮಃ ಶಿವಾಯ' ಶರಣೆಂದಿತ್ತು ಲಲಾಟಲಿಖಿತ ಬರೆದ ಬಳಿಕ ಪಲ್ಲಟವ ಮಾಡಬಾರದು. ಎನ್ನ ಉರದ ಉಂಡಿಗೆ, ಶಿರದ ಅಕ್ಷರ ಕೂಡಲಸಂಗಯ್ಯಾ ಶರಣೆಂದಿತ್ತು.
Transliteration Namaḥ śivāya' 'namaḥ śivāya''namaḥ śivāya' śaraṇendittu lalāṭalikhita bareda baḷika pallaṭava māḍabāradu. Enna urada uṇḍige, śirada akṣara 'kūḍalasaṅgayyā śaraṇeṁ'dittu.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When once the writing on your brow has said, 'I bow to Thee, O Śiva !' It cannot be unwrit !.. The brand Upon my breast, the letters on my head Have said : 'O Kūḍala Saṅgā Lord, I bow to Thee !' Translated by: L M A Menezes, S M Angadi
Hindi Translation ललाट में अंकित है:- ‘नमः शिवाय, नमः शिवाय, नमः शिवाय प्रणाम’ लिखने के पश्चात् पलटना मत । मेरे उर की मुद्रा, ललाटलिपि कहती है- कूडलसंगमदेव, तुम्हें प्रणाम॥ Translated by: Banakara K Gowdappa
Telugu Translation నమశ్శివాయ; నమశ్శివాయ నమశ్శివాయ; శరణనుచుంటి; నొసటి వ్రాలు వ్రాసినంత; చెఱపరాదు: నాయెద ముద్ర; నొసటి సంక్తులు సంగమదేవ; శరణు శరణనుచుండె. Translated by: Dr. Badala Ramaiah
Tamil Translation நமச்சிவாய நமச்சிவாய நமச்சிவாய தஞ்சமென்றிருந்து, தலை எழுத்தினை எழுதியபின், மாறுபாடடைவதே! என் மார்பின் முத்திரை தலையின் எழுத்து கூடல சங்கம தேவனே, “தஞ்ச” மென்றது. Translated by: Smt. Kalyani Venkataraman, Chennai
Marathi Translation नमः शिवाय नमः शिवाय नमः शिवाय शरण म्हणती ललाटलिखित एकदा लिहिल्यावर बदलत नाही. माझ्या हृदयावरील मुद्रा, ललाटावरील अक्षर कूडलसंगमदेवाचे शरण बोलतात. Translated by Shalini Sreeshaila Doddamani
ಶಬ್ದಾರ್ಥಗಳು ಉಂಡಿಗೆ = ಮುದ್ರೆ; ಉರ = ಎದೆ; ಪಲ್ಲಟ = ಬದಲಾವಣೆ, ಅದಲು ಬದಲು; ಲಲಾಟ = ಹಣೆ; ಲಿಖಿತ = ಬರಹ;
ಕನ್ನಡ ವ್ಯಾಖ್ಯಾನ ಹಿಂದೆ ಪ್ರಸ್ತಾಪಿಸಿದಂತೆ ಪಶುವಿನ ಹಣೆಯ ಮೇಲೆ ತಪ್ತಾಂಕನದಿಂದ ನಮಶ್ಯಿವಾಯ ಮಂತ್ರವನ್ನು ಬರೆದರೆ-ಅದು ಕಠಿಣವಾದ ಚರ್ಮಾವರಣವನ್ನೂ ಛೇದಿಸಿಕೊಂಡು ತಳೆ ಊರಿ ನಿಲ್ಲುವುದು. ಆಮೇಲೆ ಅದು ಆಳಿಸಲು ಬಾರದಂತೆ ನಿಚ್ಚಳವಾಗಿದ್ದು-ಆ ಪಶು ಕೇವಲ ಪಶುವಲ್ಲ ಶಿವ(ಶರಣರ ಮನೆಯ) ಪಶುವೆಂದು ಅದರ ಜೀವಿತರ್ಯಂತ ಗುರುತಿಸಲ್ಪಡುವುದು. ಅಂಥದೊಂದು ಮಾನ್ಯತೆಯಾದರೂ ತಮಗಿದೆಯೆನ್ನುವರು ಬಸವಣ್ಣನವರು. ಶರಣರ ಸನ್ನಿಧಿಯಲ್ಲಿ ಭೃತ್ಯನಾಗಿ ಯತ್ಕಿಂಚಿತ್ ಸೇವೆ ಸಲ್ಲಿಸುವುದು ಲಿಂಗಧಾರಣೆಯಿಂದ ತಮಗಾದ ಭಾಗ್ಯವೆಂದು ಅವರಿಗೆ ಹಿಗ್ಗು. ಕೇವಲ ನರಪಶುವಾಗಿ ಕಾಲವ್ಯಾಘ್ರನ ಬಾಯಿಗೆ ಬೀಳುವ ಅಧಃಪಾತ ಅವರಿಗಿರಲಿಲ್ಲ. ಹೀಗೆ ಅಂಗದಲ್ಲಿ ಲಿಂಗಪ್ರತಿಷ್ಠೆಯ ತತ್ತ್ವವನ್ನು ಬಸವಣ್ಣನವರು ದಪ್ಪವಾದ ಚರ್ಮವನ್ನು ಸೀದು ರಕ್ತದವರೆಗೆ ಚುರುಗುಟ್ಟುವಂತೆ ಬಿಸಿಬಿಸಿಯಾಗಿ ಈ ಮೂರು ವಚನಗಳಲ್ಲಿ ನಿರೂಪಿಸಿರುವುದು-ಕನ್ನಡ ಸಾಹಿತ್ಯದಲ್ಲಿ ಸುಲಭವಾಗಿ ಕಾಣಸಿಗದ ಅನರ್ಘ್ಯ ಅಭಿವ್ಯಕ್ತಿಪ್ರಯೋಗ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು