•  
  •  
  •  
  •  
Index   ವಚನ - 87    Search  
 
ಲಿಂಗಧಾರಣಸ್ಥಲ - ವಿಭೂತಿ
ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು. ಲಿಂಗದೇವನಿಲ್ಲದ ಠಾವು ನರವಿಂಧ‍್ಯ; ಹೋಗಲಾಗದು. ದೇವಭಕ್ತರಿಲ್ಲದೂರು ಸಿನೆ ಹಾಳು, ಕೂಡಲಸಂಗಮದೇವಾ.
Transliteration Aḍḍa vibhūtiyilladavara mukha holla, nōḍalāgadu. Liṅgadēvanillada ṭhāvu naravindha‍ya; hōgalāgadu. Dēvabhaktarilladūru sine hāḷu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Worthless the face Lacking the horizontal ashen mark : You hate to look at it ! A place that has no Liṅga is A haunt of savage men : You do not visit it ! A village wanting godly men Is but a ruinous wilderness, O Kūḍala Saṅgama Lord ! Translated by: L M A Menezes, S M Angadi
Hindi Translation विभूति रहित मुख अशुभ है, देखना नहीं चाहिए; लिंगदेव रहित स्थान नरविंध्य है, जाना नहीं चाहिए शिव भक्त रहित ग्राम सूना है, उजडा है, कूडलसंगमदेव ॥ Translated by: Banakara K Gowdappa
Telugu Translation అడ్డ నిభూతి రేక లేనివాని ముఖము చూడరాదు లింగదేవర లేనిఠావు నర వింధ్యము పో తగదు భకుడు లేనిఊరు పాడు;డుకూడలసంగమ దేవా! Translated by: Dr. Badala Ramaiah
Tamil Translation குறுக்குத் திருநீறற்றோர் முகம் பாழ், காணலாகாது, இலிங்கபிரானற்ற இடம் நாரடவி, செல்லலாகாது கடவுள் பக்தரற்ற ஊர், இடுகாடு, பாழ் கூடல சங்கம தேவனே. Translated by: Smt. Kalyani Venkataraman, Chennai
Marathi Translation त्रिपुंड विभूती रहित मुख पाहू शकत नाही. लिंगदेवा रहित ठिकाण नरविंध्य आहे, तेथे जात नाही. लिंगदेव भक्ताविना गाव पूर्ण स्मशान आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಠಾವು = ಸ್ಥಳ; ನರ = ಮುನುಷ್ಯ; ವಿಂಧ್ಯ = ಕಾಡು; ಸುಡುಗಾಡು = ಸ್ಮಶಾನ; ಹೊಲ್ಲ = ಕೆಟ್ಟದ್ದು, ಸರಿ ಅಲ್ಲದ್ದು;
ಕನ್ನಡ ವ್ಯಾಖ್ಯಾನ ಯಾವುದಾದರೊಂದು ಊರಿಗೆ ಹೋದರೆ ವಿಭೂತಿ ಧರಿಸಿದ ಜನ ಕಣ್ನಿಗೆ ಬೀಳಬೇಕು,ಪೂಜಿಸಲು ಶಿವಾಲಯವಿರಬೇಕು-ಹೀಗೆ ಭಕ್ತರಾಗಲಿ ಶಿವಮಂದಿರವಾಗಲಿ ಇಲ್ಲದ ಊರು ಎಷ್ಟೇ ಜನಭರಿತವಾಗಿದ್ದರೂ ಸಂಪದ್ಯುಕ್ತವಾಗಿದ್ದರೂ ಅದೊಂದು ಪಾಳುಬಿದ್ದ ಕೊಂಪೆ ಎನ್ನುತ್ತಿರುವರು ಬಸವಣ್ಣನವರು. ಉತ್ತಮ ಸಂಸ್ಕ್ರತಿಗೆ ಅಂದಿನ ಶೈವಜೀವನಶೈಲಿಯು ಹೆಸರುವಾಸಿಯಾಗಿತ್ತು-ಆದುದರಿಂದಲೇ ಅದನ್ನು ಉಳಿಸಿಕೊಳ್ಳಬೇಕೆಂಬುದು ದೊಡ್ಡ ಧ್ಯೇಯವಾಗಿತ್ತು ಅವರಿಗೆ. ಲಿಂಗದೇವನಿಲ್ಲದ ಠಾವನು ಹೊಗ(ಪ್ರವೇಶಿಸ) ಬಾರದೆಂದಿರುವುದರಿಂದ-ಆ ಠಾವನ್ನು ಶಿವಾಲಯವಿಲ್ಲದ ಊರೆಂದೇ ಅರ್ಥೈಸಬೇಕಾಗುವುದು, ಹೀಗೆಂಬಲ್ಲಿ ಬಸವಣ್ಣನವರು(ಶಿವ)ದೇವಾಲಯವಿರೋಧಿಗಳೆಂಬ ಮಾತೆಲ್ಲ ಹುಂಬರ ಮಾತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು