ಅಡ್ಡ ತ್ರಿಪುಂಡ್ರದ, ಮಣಿಮುಕುಟದ ವೇಷದ
ಶರಣರ ಕಂಡರೆ ನಂಬುವುದೆನ್ನ ಮನವು,
ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ.
ಇವಿಲ್ಲದವರ ಕಂಡರೆ ನಂಬೆ, ಕೂಡಲಸಂಗಮದೇವಾ.
Transliteration Aḍḍa tripuṇḍrada, maṇimukuṭada vēṣada
śaraṇara kaṇḍare nambuvudenna manavu,
naccuvudenna manavu, sandēhavillade.
Ivilladavara kaṇḍare nambe, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The sight of Śaraṇas Wearing the jewelled crown
And horizontal three- fingered mark
Inspires in me
Both faith and love beyond a doubt.
O KūḍalaSaṅga Lord,
I cannot trust them whom I see
Devoid of these!
Translated by: L M A Menezes, S M Angadi
Hindi Translation त्रिपुंड्र मणिमुकुट धारी शरणों को देख
मेरा मन विश्वास करता है,
निस्संदेह मेरा मन श्रद्धा रखता है,
इनके अभाव में मैं विश्वास नहीं करता, कूडलसंगमदेव ॥
Translated by: Banakara K Gowdappa
Telugu Translation భస్మత్రిపుండ్ర మణిమకుట
వేషముగల శరణుల జూచిన
మ్ము నా మనసు; మెచ్చు నా మనసు; సందేహము లేక;
ఇవి లేనివారల చూచిన నమ్మలేనయ్య :
కూడల సంగమ దేవా!
Translated by: Dr. Badala Ramaiah
Tamil Translation குறுக்குத் திருநீறணிந்த நற்கோலம் புனைந்த,
மெய்யடியாரைக் காணின் நச்சுமென்மனம்.
விரும்புமென் மனம் ஐயமின்றி
இவையற்றோரைக் காணின் நயவேன்,
கூடல சங்கம தேவனே.
Translated by: Smt. Kalyani Venkataraman, Chennai
Marathi Translation
जवळ बोलविता भक्तगण मिळून
दोन्ही हात जोडून, जावे तेथे
किंकर व्हावे, शरणु म्हणावे
भ्रत्याचार करावे, नम्रतेने
प्रमथगणापुढे, सानुले व्हावे
जवळी करावे, आनंदाने
कूडलसंगमदेव, करील आपुलेसे
विनयगुण दिसे, जया ठई
अर्थ - शिवशरणांनी तुम्हास प्रेमाने जवळ बोलाविले तर दोन्ही नम्रतेने शरणु म्हणावे व स्वतःस लहान समजून त्यांना अभिवादन करून भ्रत्याचाराला जागविल्यास कूडलसंगमदेव (परमेश्वर) अशांना आपलेसे केल्याशिवाय राहणार नाही. परंतु हे केंव्हा शक्य आहे ? जेव्हा तुम्ही शिवशरणामध्ये राहू लागाल तेंव्हा त्यांच्या सत्संगात राहू लागताच तुम्ही देखील त्यांच्यासारखेच होऊन जाल. अर्थात विनयगुण, शरणत्व, नम्रता दिसू लागतील व भ्रत्याचार करु लागाल आणि हीच परमेश्वरी ऐक्य साधण्याची रीत होय.
Translated by Rajendra Jirobe, Published by V B Patil, Hirabaug, Chembur, Mumbai, 1983
त्रिपुंड विभूती, शिरी रुद्राक्षीचा मुकुट
अशा शरणावर माझे मन विश्वास ठेवते.
निःसंशय विश्वस ठेवते.
याशिवाय आणखी कोणावरही विश्वास नाही
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ತ್ರಿಪುಂಡ = ಹಣೆಯ ಮೇಲಿನ ವಿಭೂತಿ(ಮೂರು ಬೆರಳಿನ) ಅಡ್ಡ ರೇಖೆಗಳು; ನಚ್ಚು = ನಂಬಿಕೆ; ಮುಕುಟ = ಕಿರಿಟ;
ಕನ್ನಡ ವ್ಯಾಖ್ಯಾನ ಹಣೆಯಲ್ಲಿ ಮೂರೆಳೆಯಾಗಿ ವಿಭೂತಿ ಧರಿಸಿ, ತಲೆಯಲ್ಲಿ ರುದ್ರಾಕ್ಷಿಯ ತಲೆಸುತ್ತನ್ನುಅಲಂಕರಿಸಿದ ಶಿವಶರಣರನ್ನು ಕಂಡರೆ-ಅವರನ್ನು ತಾವು ನಂಬುವುದಾಗಿಯೂ, ಅವರ ಸೇವೆ ಮಾಡಲು ಉತ್ಸುಕಿಸುವುದಾಗಿಯೂ-ಇವಿಲ್ಲದವರನ್ನು (ಬಸವಣ್ಣನವರು)ನಂಬುವುದೇ ಇಲ್ಲವೆಂಬುದಾಗಿಯೂ ಈ ವಚನದ ಧಾಟಿ ಇದೆ.
ಕೇವಲ ಜಾತೀಯತೆಯಂತೆ ಕಾಣುವ ಇಂಥ ಹೇಳಿಕೆಗಳು ಆ ಕಾಲಕ್ಕೆ ಆ ಅನ್ಯರಿಂದ ಬಸವಣ್ಣನವರಿಗೆ ಆಗುತ್ತಿದ್ದ ಇರಿಸುಮುರಿಸುಗಳನ್ನು ಗ್ರಹಿಸಿದರೆ ಮಾತ್ರ ಸಮಂಜಸವಾದಾವು.
ಬೆಂಕಿಯ ತಿದಿಯೊತ್ತುವ ಕುಲುಮೆಯ ಕಟ್ಟೆಯ ಬಳಿ ಹೂವಿನ ಗಿಡಕ್ಕೇನು ಲೇಸಿದೆ ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು